
ವಿಶ್ವ ಆರೋಗ್ಯ ಸಂಸ್ಥೆ (ಸಂಗ್ರಹ ಚಿತ್ರ)
ನ್ಯೂಯಾರ್ಕ್: ಜಾಗತಿಕ ಮಟ್ಟದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಒಂದು ವಾರದಲ್ಲಿ, ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಶೇ.11 ರಷ್ಟು ಏರಿಕೆಯಾಗಿದೆ ಎಂದು ಡಬ್ಲ್ಯುಹೆಚ್ಒ ಹೇಳಿದ್ದು, ಅಮೆರಿಕಾದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಅಕ್ಟೋಬರ್ ನಿಂದ ಗಣನೀಯವಾಗಿ ಪ್ರಕರಣಗಳು ಏರಿಕೆಯಾಗಿದೆ. ವಾರದ ಎಪಿಡೆಮಿಯೋಲಾಜಿಕಲ್ ವರದಿಯಲ್ಲಿ ಈ ಮಾಹಿತಿ ಬಹಿರಂಗಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಡಿ.20-26 ವರೆಗೆ 4.99 ಮಿಲಿಯನ್ ಹೊಸ ಪ್ರಕರಣಗಳು ವರದಿಯಾಗಿವೆ. 2.84 ಮಿಲಿಯನ್ ಪ್ರಕರಣಗಳೊಂದಿಗೆ ಯುರೋಪ್ ಒಟ್ಟು ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಸಂಖ್ಯೆಯನ್ನು ಹೊಂದಿದೆ.
ಯಾವುದೇ ಪ್ರದೇಶಕ್ಕಿಂತಲೂ ಅತಿ ಹೆಚ್ಚು ಸೋಂಕು ದರವನ್ನು ಯುರೋಪ್ ಹೊಂದಿದ್ದು ಪ್ರತಿ 100,000 ನಿವಾಸಿಗಳಿಗೆ 304.6 ಹೊಸ ಪ್ರಕರಣಗಳು ವರದಿಯಾಗಿದೆ.
ಡಬ್ಲ್ಯುಹೆಚ್ಒ ಪ್ರಕಾರ ಅಮೆರಿಕಾದಲ್ಲಿ ಕೋವಿ-19 ಪ್ರಕರಣಗಳು ಶೇ.39 ರಷ್ಟು ಏರಿಕೆ ಕಂಡಿದೆ. ಅಮೆರಿಕ ಒಂದರಲ್ಲೇ 1.18 ಮಿಲಿಯನ್ ಗೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಆಫ್ರಿಕಾದಲ್ಲಿ ಹೊಸ ಪ್ರಕರಣಗಳು ಶೇ.7 ರಷ್ಟು ಹೆಚ್ಚಾಗಿದೆ.