
ಜೆಎನ್ ಯು ಕ್ಯಾಂಪಸ್
ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ವಿಶ್ವವಿದ್ಯಾಲಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ವಿಶ್ವವಿದ್ಯಾಲಯ ಆರಂಭಿಸಿರುವ ಆಂತರಿಕ ದೂರುಗಳ ಸಮಿತಿ (ಐಸಿಸಿ) ಹುಡುಗಿಯರಿಗೆ ಲೈಂಗಿಕ ಕಿರುಕುಳದಿಂದ ದೂರವಿರಲು ಸಲಹೆ ನಿಡಿದ್ದು, ಸ್ತ್ರೀದ್ವೇಷಿ ಸಲಹೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಜನವರಿ 17ರಂದು ನೀಡಿರುವ ಸಲಹೆಯಲ್ಲಿ ಹುಡುಗಿಯರು ತಮ್ಮ ಪುರುಷ ಸ್ನೇಹಿತರ ನಡುವೆ ಅಂತರವನ್ನು ಕಾಯ್ದುಕೊಂಡರೆ ಲೈಂಗಿಕ ಕಿರುಕುಳದಂತಹ ವಿಷಯಗಳಿಗೆ ಅವಕಾಶವಿಲ್ಲ ಎಂದು ಸಲಹೆಯಲ್ಲಿ ತಿಳಿಸಿರುವುದರಿಂದ ಜೆಎನ್‌ಯು ನೀಡಿರುವ ಈ ಸಲಹೆಗೆ ವಿರೋಧ ವ್ಯಕ್ತವಾಗಿದೆ.
ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು) ಆರಂಭಿಸಿದ್ದು, ಇದಕ್ಕೆ ಸಂಬಂಧಿಸಿ ಹೊರಡಿಸಲಾದ ಅಧಿಸೂಚನೆಯಲ್ಲಿ ‘ಸ್ತ್ರೀದ್ವೇಷಿ’ ಅಂಶವಿರುವುದಾಗಿ ಹಲವರಿಂದ ಆಕ್ಷೇಪ ವ್ಯಕ್ತವಾಗಿದೆ.
ಜೆಎನ್‌ಯು ಐಸಿಸಿ, ಸುತ್ತೋಲೆಯಲ್ಲಿ, ಲೈಂಗಿಕ ಕಿರುಕುಳದ ಬಗ್ಗೆ ಹುಡುಗಿಯರು ಮತ್ತು ಹುಡುಗರಿಬ್ಬರಿಗೂ ಜಾಗೃತಿ ಮೂಡಿಸಲು ಕೌನ್ಸೆಲಿಂಗ್ ಸೆಷನ್‌ಗಳ ಅಗತ್ಯವಿದೆ ಎಂದು ಹೇಳಿದೆ.ಇದರೊಂದಿಗೆ ಆತ್ಮೀಯ ಸ್ನೇಹಿತರಿಂದಲೇ ಲೈಂಗಿಕ ದೌರ್ಜನ್ಯ ಸಂಭವಿಸುತ್ತಿರುವ ಹೆಚ್ಚಿನ ಪ್ರಕರಣಗಳು ಐಸಿಸಿಯ ಗಮನಕ್ಕೆ ಬಂದಿವೆ. ಸಾಮಾನ್ಯವಾಗಿ ಹುಡುಗರು ಸ್ನೇಹದ ತೆಳುವಾದ ಗೆರೆಯನ್ನು ದಾಟುತ್ತಾರೆ (ಕೆಲವು ಸಂದರ್ಭ ಗಮನಕ್ಕೆ ಬಂದು, ಕೆಲವು ಸಂದರ್ಭ ಗಮನಕ್ಕೆ ಬಾರದೆಯೇ ಗೇಲಿ ಮಾಡುತ್ತಾರೆ ಮತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಾರೆ. ಇಂತಹ ದೌರ್ಜನ್ಯಗಳನ್ನು ತಪ್ಪಿಸಲು ಹುಡುಗಿಯರಿಗೆ ಸ್ನೇಹದ ನಡುವೆ ಸ್ಪಷ್ಟ ಗೆರೆ ಎಳೆದುಕೊಳ್ಳುವುದಕ್ಕೆ ಗೊತ್ತಿರಬೇಕು’ ಎಂದು ಐಸಿಸಿ ತನ್ನ ಅಧಿಸೂಚನೆಯಲ್ಲಿ ವಿವರಿಸಿದೆ.
ಇನ್ನು ಜೆಎನ್‌ಯು ಸಲಹೆಗೆ ಅಖಿಲ ಭಾರತ ವಿದ್ಯಾರ್ಥಿಗಳ ಸಂಘ(ಎಐಎಸ್‌ಎ) ಸೇರಿದಂತೆ ಹಲವಾರು ವಿದ್ಯಾರ್ಥಿ ಗುಂಪುಗಳು ಸಲಹೆಯ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಿವೆ. ಐಸಿಸಿಯ ಈ ಸಲಹೆಯು ವಿಕ್ಟಿಮ್ ಬ್ಲೇಮಿಂಗ್ ಸಿದ್ಧಾಂತವನ್ನು ಬಹಿರಂಗಪಡಿಸುತ್ತದೆ ಎಂದು ಎಐಎಸ್‌ಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತ ಜೆಎನ್‌ಯು ವಿದ್ಯಾರ್ಥಿಗಳ ನಾಯಕಿ ಆಯಿಷೀ ಘೋಷ್ ವಿಶ್ವವಿದ್ಯಾಲಯದ ಸುತ್ತೋಲೆ ವಿರುದ್ಧ ಆಕ್ರೋಶ ಹೊರಹಾಕಿ, ಸ್ನೇಹಿತರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗದಿರಲು ಹುಡುಗಿಯರು ಸೂಕ್ತ ಗೆರೆ ಎಳೆದುಕೊಳ್ಳಬೇಕು- ಎನ್ನುವ ಮೂಲಕ ಐಸಿಸಿ ಸಂತ್ರಸ್ತೆಯರನ್ನೇ ಹೊಣೆಯಾಗಿಸುತ್ತಿದೆ’ ಎಂದಿದ್ದಾರೆ.