The New Indian Express
ಬೆಂಗಳೂರು: ಮಂಗಳವಾರ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸ್ಯಾಂಡಲ್ ವುಡ್ ನಟ ದಿಗಂತ್ ಅವರಿಗೆ ಅಭಿಮಾನಿಗಳು ‘ಹುಟ್ಟುಹಬ್ಬದ ಶುಭಾಶಯಗಳು’ ಎಂದು ವಿಶ್ ಮಾಡುವುದಕ್ಕೆ ಎರಡು ಕಾರಣಗಳಿದ್ದವು.
ಇದನ್ನೂ ಓದಿ: ದಿಗಂತ್- ತರುಣ್ ಪ್ಯಾರಾನಾರ್ಮಲ್ ಥ್ರಿಲ್ಲರ್ ಸಿನಿಮಾ ‘ಟ್ರಿಣ್ ಟ್ರಿಣ್ ಟ್ರಿಣ್’ಗೆ ಕೋಮಿಕಾ ಆಂಚಲ್ ನಾಯಕಿ
ದಿಗಂತ್ ಹುಟ್ಟಿದಹಬ್ಬ ಒಂದು ಕಾರಣವಾದರೆ ಎರಡನೇ ಕಾರಣ ಬಿಡುಗಡೆಗೆ ಸಿದ್ಧವಾಗಿರುವ ದಿಗಂತ್ ಅವರ ಮುಂದಿನ ಸಿನಿಮಾದ ಹೆಸರು ಕೂಡಾ ‘ಹುಟ್ಟುಹಬ್ಬದ ಶುಭಾಶಯಗಳು’!
ಇದನ್ನೂ ಓದಿ: ತಿಮ್ಮಯ್ಯ & ತಿಮ್ಮಯ್ಯ ಸಿನಿಮಾದಲ್ಲಿ ಒಂದಾದ ಪಂಚರಂಗಿ ಜೋಡಿ
ಕಳೆದ 2 ವರ್ಷಗಳಿಂದ ದಿಂಗತ್ ಈ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತೀ ಬಾರಿ ಈ ಸಿನಿಮಾದ ಪೋಸ್ಟರ್ ಪ್ರಕಟವಾದಾಗಲೂ ಅಭಿಮಾನಿಗಳು ಆ ದಿನ ತಮ್ಮ ಹುಟ್ಟುಹಬ್ಬ ಇರಬೇಕು ಎಂದು ತಿಳಿದು ವಿಶ್ ಮಾಡುತ್ತಿದ್ದರು ಎಂದು ದಿಗಂತ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ದಿಗಂತ್- ಕೆಎಂ ಚೈತನ್ಯ ಕಾಂಬಿನೇಷನ್ ನಲ್ಲಿ ಬರ್ತಿದೆ ಕಾಮಿಡಿ ಸಿನಿಮಾ!
‘ಹುಟ್ಟುಹಬ್ಬದ ಶುಭಾಶಯಗಳು’ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಬರ್ತ್ ಡೇ ಪಾರ್ಟಿಯಲ್ಲಿ ನಡೆಯುವ ಕೊಲೆಯ ಸುತ್ತ ಸಿನಿಮಾ ಕಥೆ ಸುತ್ತುತ್ತದೆ. ನಾಗರಾಜ್ ಬೆತೂರ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕವಿತಾ ಗೌಡ ನಾಯಕಿಯಾಗಿ ನಟಿಸಿದ್ದಾರೆ.
ಇದನ್ನೂ ಓದಿ: 192 ಕಿಮೀ ಸೈಕಲ್ ತುಳಿದ ದಿಗಂತ್!
ಇದುವರೆಗಿಂತ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು ಅಭಿಮಾನಿಗಳಿಗೆ ಇಷ್ಟವಾಗಲಿದೆ ಎಂದು ದಿಗಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮಗೆ ನಿರ್ದೇಶಕರು ವಿಭಿನ್ನ ಬಗೆಯ ಪಾತ್ರಗಳನ್ನು ನೀಡುತ್ತಿರುವ ಬಗ್ಗೆ ದಿಗಂತ್ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಅರ್ಜುನ್ ಗೌಡ’ ಸಿನಿಮಾವನ್ನು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕರೆದುರು ತರುವ ರಾಮು ಆಸೆಯನ್ನು ನಾನು ಪೂರೈಸುವೆ: ಮಾಲಾಶ್ರೀ