
ಲಸಿಕೆ ಪಡೆಯುತ್ತಿರುವ ಆರೋಗ್ಯ ಕಾರ್ಯಕರ್ತ
ಚಂಡೀಗಢ: ಪಂಜಾಬ್‌ನಲ್ಲಿ ಜನವರಿ 15 ರಿಂದ ಜಾರಿಗೆ ಬರುವಂತೆ ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆಗಳು, ಮಾಲ್‌ಗಳು, ಹೋಟೆಲ್‌ಗಳು ಮತ್ತು ಸಿನಿಮಾ ಹಾಲ್‌ಗಳನ್ನು ಪ್ರವೇಶಿಸಲು ಸಂಪೂರ್ಣ ಎರಡೂ ಡೋಸ್ ಲಸಿಕೆ ಪಡೆದಿರಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಹೋಟೆಲ್‌ಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಸಿನಿಮಾ ಹಾಲ್‌ಗಳು, ಜಿಮ್‌ಗಳು ಮತ್ತು ಫಿಟ್‌ನೆಸ್ ಸೆಂಟರ್‌ಗಳಲ್ಲಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡ ವಯಸ್ಕರಿಗೆ ಮಾತ್ರ ಪ್ರವೇಶ ನೀಡುವಂತೆ ಸರ್ಕಾರ ಆದೇಶಿಸಿದೆ.
ಇದನ್ನು ಓದಿ: ಚುನಾವಣಾ ಕರ್ತವ್ಯಕ್ಕೆ ನೇಮಕಗೊಳ್ಳುವ ಸಿಬ್ಬಂದಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ
ರಾಜ್ಯ ಗೃಹ ಸಚಿವಾಲಯ ಮತ್ತು ನ್ಯಾಯ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಚಂಡೀಗಢದಲ್ಲಿರುವ ಎಲ್ಲಾ ಸರ್ಕಾರಿ, ಮಂಡಳಿ ಮತ್ತು ಕಾರ್ಪೊರೇಷನ್ ಕಚೇರಿಗಳಲ್ಲೂ ಸಂಪೂರ್ಣ ಎರಡು ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.
“ಕೋವಿಡ್-19 ಸಾಂಕ್ರಾಮಿಕವು ಸಮುದಾಯಕ್ಕೆ ಒಂದು ದೊಡ್ಡ ಸವಾಲಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಅದರಿಂದ ಹೊರಹೊಮ್ಮುವ ಸಮಸ್ಯೆಗಳನ್ನು ಪರಿಗಣಿಸಿ ವಿಶೇಷವಾಗಿ ಓಮೈಕ್ರಾನ್ ಹೊಸ ರೂಪಾಂತರಿ ಕಾರಣದಿಂದಾಗಿ ಸಂಪೂರ್ಣ ಎರಡೂ ಡೋಸ್ ಲಸಿಕೆ ಪಡೆಯದ ವ್ಯಕ್ತಿಗಳು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದು ಆದೇಶದಲ್ಲಿ ತಿಳಿಸಿದೆ.
“ಸರ್ಕಾರದ ಆದೇಶದ ಪ್ರಕಾರ, ಇನ್ನೂ ಎರಡೂ ಡೋಸ್ ಲಸಿಕೆ ತೆಗೆದುಕೊಳ್ಳದ ವಯಸ್ಕ ವ್ಯಕ್ತಿಗಳು ತಮ್ಮ ನಿವಾಸಗಳಲ್ಲಿಯೇ ಇರಬೇಕು ಮತ್ತು ಯಾವುದೇ ಸಾರ್ವಜನಿಕ ಸ್ಥಳಗಳು/ಮಾರುಕಟ್ಟೆ/ಕಾರ್ಯ/ಸಾರ್ವಜನಿಕ ಸಾರಿಗೆ/ಧಾರ್ಮಿಕ ಸ್ಥಳಗಳು ಇತ್ಯಾದಿಗಳಿಗೆ ಭೇಟಿ ನೀಡಬಾರದು” ಎಂದು ಹೇಳಿದೆ.