Karnataka news paper

ಹೊಸ ವರ್ಷಾಚರಣೆ ಪಾರ್ಟಿಗೆ ಪೂರೈಸಲು ಸಂಗ್ರಹ: 80 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ವಶ


ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದಲ್ಲಿ ನಡೆಸುವ ಪಾರ್ಟಿಗಳಿಗೆ ಸರಬರಾಜು ಮಾಡಲು ಸಂಗ್ರಹಿಸಿಟ್ಟುಕೊಂಡಿದ್ದ ಸುಮಾರು 80 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡು, ಮೂವರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ.

ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಡ್ರಗ್‌ ಪೆಡ್ಲರ್‌‍ಗಳ ಮೇಲಿನ ದಾಳಿಯನ್ನು ಮುಂದುವರಿಸಿದೆ. ಈ ತಂಡವು ಕಾರ್ಯಾಚರಣೆ ಕೈಗೊಂಡು ಬೆಂಗಳೂರಿನ ಬಾಗಲೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಮನೆಯಲ್ಲಿ ವಾಸವಾಗಿದ್ದ ಮೂವರು ನೈಜೀರಿಯಾ ಮೂಲದ ಪ್ರಜೆಗಳ ಮೇಲೆ ನಿಗಾ ವಹಿಸಿತ್ತು. ಮೂವರು ನೈಜೀರಿಯಾ ಪ್ರಜೆಗಳು ಬೆಂಗಳೂರು ನಗರದಲ್ಲಿ ವರ್ಷಾಚರಣೆ ವೇಳೆ ನಡೆಯುವ ಪಾರ್ಟಿಗಳಿಗೆ ಬರುವ ಕಾಲೇಜು ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಹಾಗೂ ಉದ್ಯಮಿಗಳಿಗೆ ಡ್ರಗ್ಸ್‌ ಸರಬರಾಜು ಮಾಡಿ ಹೆಚ್ಚಿನ ಹಣ ಗಳಿಸುವ ಉದ್ದೇಶ ಹೊಂದಿದ್ದರು.

ಬೆಂಗಳೂರಿನಲ್ಲಿ ನಡು ರಸ್ತೆಯಲ್ಲೇ ಹೆಂಡತಿಯನ್ನು ಕೊಲೆಗೈದಿದ್ದ ಗಂಡ ಅಂದರ್..!

ಮುಂಬೈನಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳಾದ ಎಂಡಿಎಂಎ, ಕೊಕೇನ್‌, ಹ್ಯಾಶಿಶ್‌‍ ಖರೀದಿಸಿ ಏಜೆನ್ಸಿಗಳಿಗೆ ದಿಕ್ಕು ತಪ್ಪಿಸುವ ಉದ್ದೇಶದಿಂದ ಫಿಯಾಮಾ ಸೋಪ್‌ ಬಾಕ್ಸ್‌ಗಳಲ್ಲಿ ನಗರಕ್ಕೆ ತಂದು ತಮ್ಮ ಮನೆಯಲ್ಲಿ ಅಡಗಿಸಿಟ್ಟುಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ತಂಡ, ಮನೆ ಮೇಲೆ ದಾಳಿ ಮಾಡಿ ಮೂವರನ್ನು ಬಂಧಿಸಿ 80 ಲಕ್ಷ ರೂ. ಮೌಲ್ಯದ 400 ಗ್ರಾಂ ಎಂಡಿಎಂಎ ಮಾದಕವಸ್ತು, 40 ಗ್ರಾಂ ಕೊಕೇನ್‌, 400 ಗ್ರಾಂ ಹ್ಯಾಶಿಶ್‌, ಮಾದಕ ವಸ್ತುಗಳನ್ನು ತುಂಬಿದ್ದ 5 ಫಿಯಾಮಾ ಸೋಪ್‌ ಬಾಕ್ಸ್‌ಗಳು ಹಾಗೂ ಒಂದು ತೂಕದ ಯಂತ್ರ ವಶಪಡಿಸಿಕೊಂಡಿದೆ. ಅಲ್ಲದೆ, ಡ್ರಗ್‌ ಪೆಡ್ಲರ್‌‍ಗಳನ್ನು ಹಾಗೂ ಗಿರಾಕಿಗಳನ್ನು ಸಂಪರ್ಕಿಸಲು ಬಳಸುತ್ತಿದ್ದ ಐದು ಮೊಬೈಲ್‌ ಫೋನ್‌‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವೀಸಾ ನಿಯಮ ಉಲ್ಲಂಘನೆ

ಈ ಮೂವರು ನೈಜೀರಿಯಾ ಪ್ರಜೆಗಳು ಬಿಸಿನೆಸ್‌ ವೀಸಾದಡಿ ಭಾರತಕ್ಕೆ ಬಂದಿದ್ದರು. ಇದೀಗ ವೀಸಾ ನಿಯಮಗಳನ್ನು ಉಲ್ಲಂಘಿಸಿ ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಸಿಸಿಬಿ ಪೊಲೀಸರ ವಿಚಾರಣೆಯಿಂದ ಗೊತ್ತಾಗಿದೆ.

ನೈಟ್‌ ಕರ್ಫ್ಯೂಗೆ ಸ್ತಬ್ದವಾಯ್ತು ಸಿಲಿಕಾನ್‌ ಸಿಟಿ: ಹತ್ತು ಗಂಟೆಗೇ ಅಂಗಡಿ ಮುಂಗಟ್ಟು ಬಂದ್‌. ವಾಹನ ಸಂಚಾರ ವಿರಳ

ನಗರದಲ್ಲಿ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುವ ವೃತ್ತಿಗತ ಆರೋಪಿಗಳಾಗಿದ್ದಾರೆ. ಆರೋಪಿಗಳ ವಿರುದ್ಧ ಬಾಗಲೂರು ಪೊಲೀಸ್‌ ಠಾಣೆಯಲ್ಲಿಎನ್‌‍ಡಿಪಿಎಸ್‌ ಕಾಯಿದೆ ಹಾಗೂ ವಿದೇಶಿಯರ ಕಾಯಿದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.



Read more