
ಸಂಗ್ರಹ ಚಿತ್ರ
ನವದೆಹಲಿ: ಜಗತ್ತಿನಾದ್ಯಂತ ವ್ಯಾಪಕ ಭೀತಿ ಸೃಷ್ಟಿಸಿರುವ ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ಆರ್ಭಟ ನಿಧಾನವಾಗಿ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 128 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಒಟ್ಟು ಓಮಿಕ್ರಾನ್ ಸೋಂಕಿತರ ಸಂಖ್ಯೆ 781ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಬುಧವಾರ ಭಾರತದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 781ಕ್ಕೇರಿದೆ. ಈ ಪೈಕಿ 241 ಚೇತರಿಸಿಕೊಂಡಿದ್ದು, ಹಲವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ: ಕೋವಿಡ್-19: ಭಾರತದಲ್ಲಿಂದು 9,195 ಹೊಸ ಕೇಸ್ ಪತ್ತೆ, 302 ಮಂದಿ ಸಾವು
ದೇಶದ ಒಟ್ಟಾರೆ ಓಮಿಕ್ರಾನ್ ಪ್ರಕರಣಗಳ ಪೈಕಿ ದೆಹಲಿಯಲ್ಲಿ ಇದುವರೆಗೆ ಅತಿ ಹೆಚ್ಚು 238 ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ (167) ಮತ್ತು ಗುಜರಾತ್ (73) ನಂತರದ ಸ್ಥಾನದಲ್ಲಿವೆ.
ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿರುವ ಇತರ ರಾಜ್ಯಗಳೆಂದರೆ ತೆಲಂಗಾಣ 62, ರಾಜಸ್ಥಾನ 46, ಕರ್ನಾಟಕ 34, ತಮಿಳುನಾಡು 34 ಮತ್ತು ಹರಿಯಾಣದಲ್ಲಿ 12 ಪ್ರಕರಣಗಳು ವರದಿಯಾಗಿದೆ.
ಇದನ್ನೂ ಓದಿ: ಕೋವಿಡ್-19: ರಾಜ್ಯದಲ್ಲಿ ಸೋಂಕು ಹೆಚ್ಚುತ್ತಿದ್ದರೂ ಇಳಿದ ಪರೀಕ್ಷೆಗಳ ಸಂಖ್ಯೆ, ಹೆಚ್ಚಿದ ಆತಂಕ
ಅಂತೆಯೇ ಮಧ್ಯಪ್ರದೇಶದಲ್ಲಿ 9, ಒಡಿಶಾದಲ್ಲಿ 8, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 6, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ತಲಾ 4, ಚಂಡೀಗಢ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 3 ಮತ್ತು ಉತ್ತರ ಪ್ರದೇಶದಲ್ಲಿ 2 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಗೋವಾ, ಹಿಮಾಚಲ ಪ್ರದೇಶ, ಲಡಾಖ್ ಮತ್ತು ಮಣಿಪುರದಲ್ಲಿ ತಲಾ ಒಂದು ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
ಏತನ್ಮಧ್ಯೆ, ಭಾರತವು ಕಳೆದ 24 ಗಂಟೆಗಳಲ್ಲಿ 9,195 ಹೊಸ COVID-19 ಪ್ರಕರಣಗಳನ್ನು ವರದಿ ಮಾಡಿದ್ದು ಸಕ್ರಿಯ ಪ್ರಕರಣಗಳು ಪ್ರಸ್ತುತ 77,002ಕ್ಕೇರಿದೆ.