Karnataka news paper

ನೋಡಿ: ಸೆಲ್ಫಿ ತೆಗೆಯಲು ಬಂದ ವ್ಯಕ್ತಿಯನ್ನು ಗದರಿಸಿದ ಡಿ.ಕೆ.ಶಿವಕುಮಾರ್


ಬೆಂಗಳೂರು: ತಮ್ಮ ಜತೆ ಸೆಲ್ಫಿ ತೆಗೆಯಲು ಬಂದ ವ್ಯಕ್ತಿಯೊಬ್ಬರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗದರಿಸಿ ಎಚ್ಚರಿಕೆ ನೀಡಿ ಕಳುಹಿಸಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಸಂಸ್ಥಾಪನಾ ದಿನದ ಪ್ರಯುಕ್ತ ಮಂಡ್ಯ ಜಿಲ್ಲೆಯ ಮದ್ದೂರಿನ ಬಳಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾಗ ಮಂಗಳವಾರ ಘಟನೆ ನಡೆದಿತ್ತು ಎನ್ನಲಾಗಿದೆ.

ಈ ಕುರಿತು ವಿಡಿಯೊವನ್ನು ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಯಾರ ಕೈಯಲ್ಲಿ ಏನಿದೆ ಎಂಬುದು ನಮಗೆ ತಿಳಿದಿಲ್ಲ. ರಾಜೀವ್ ಗಾಂಧಿ ಅವರಿಗೆ ಏನಾಗಿತ್ತು ಎಂಬುದು ನಿಮಗೆ ಗೊತ್ತಿದೆ. ಕೆಲವೊಮ್ಮೆ, ಮಾನವನ ಕೋಪ, ಭಾವನೆಗಳು ಪ್ರಕಟವಾಗುತ್ತವೆ, ಅದರಲ್ಲಿ ತಪ್ಪೇನಿಲ್ಲ ಎಂದು ಡಿಕೆಶಿ ಪ್ರತಿಕ್ರಿಯಿಸಿರುವುದಾಗಿ ‘ಎಎನ್‌ಐ’ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: 

ಈ ಹಿಂದೆ ಮಂಡ್ಯದಲ್ಲಿ ಡಿ.ಕೆ.ಶಿವಕುಮಾರ್ ತಮ್ಮ ಹೆಗಲಿಗೆ ಕೈಹಾಕಲು ಬಂದ ವ್ಯಕ್ತಿಯ ಕಪಾಳಕ್ಕೆ ಬಾರಿಸಿದ್ದು ಭಾರಿ ಸುದ್ದಿಯಾಗಿತ್ತು.

ಹೆಗಲಿಗೆ ಕೈಹಾಕಲು ಬಂದ ವ್ಯಕ್ತಿಯ ಕಪಾಳಕ್ಕೆ ಬಾರಿಸಿದ್ದ ವಿಡಿಯೊ:



Read more from source