RBI ರಜಾದಿನಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದೆ: ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್(Negotiable Instruments Act) ಅಡಿಯಲ್ಲಿ ರಜಾದಿನಗಳು, ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನಗಳು ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ. RBI ಈ ಕೆಳಗಿನ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪೈಕಿ ಕೆಲವು ರಜೆಗಳು ನಿರ್ದಿಷ್ಟ ರಾಜ್ಯಗಳಿಗೆ ಅನ್ವಯವಾಗಲಿದೆ.
ಜನವರಿ 2022 ರಲ್ಲಿ ಬ್ಯಾಂಕ್ ರಜಾದಿನಗಳು
- ಜನವರಿ 1 : ಹೊಸ ವರ್ಷದ ದಿನ
- ಜನವರಿ 3 : ಹೊಸ ವರ್ಷದ ಆಚರಣೆ/ಲೋಸೂಂಗ್
- ಜನವರಿ 4: ಲೋಸೂಂಗ್
- ಜನವರಿ 11: ಮಿಷನರಿ ದಿನ
- ಜನವರಿ 12: ಸ್ವಾಮಿ ವಿವೇಕಾನಂದರ ಜನ್ಮದಿನ
- ಜನವರಿ 14: ಮಕರ ಸಂಕ್ರಾಂತಿ/ಪೊಂಗಲ್
- ಜನವರಿ15: ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಾಂತಿ ಹಬ್ಬ/ಮಾಘೆ ಸಂಕ್ರಾಂತಿ/ಸಂಕ್ರಾಂತಿ/ಪೊಂಗಲ್/ತಿರುವಳ್ಳುವರ್ ದಿನ
- ಜನವರಿ 18: ಥಾಯ್ ಪೂಸಂ
- ಜನವರಿ 26: ಗಣರಾಜ್ಯೋತ್ಸವ
ಜನವರಿ 1ರಂದು ಐಜ್ವಾಲ್, ಚೆನ್ನೈ, ಗ್ಯಾಂಗ್ಟಾಕ್ ಮತ್ತು ಶಿಲ್ಲಾಂಗ್‌ನಲ್ಲಿ ಬ್ಯಾಂಕುಗಳು ಬಂದ್(Bank Holidays) ಇರುತ್ತವೆ. ಹೊಸ ವರ್ಷದ ಹಬ್ಬ ಅಥವಾ ಲೊಸೂಂಗ್ ಸಂದರ್ಭದಲ್ಲಿ, ಜನವರಿ 3ರಂದು ಐಜ್ವಾಲ್ ಮತ್ತು ಗ್ಯಾಂಗ್‌ಟಾಕ್‌ನಲ್ಲಿನ ಬ್ಯಾಂಕ್‌ಗಳನ್ನು ಸೋಮವಾರ ಬಂದ್ ಇರುತ್ತವೆ. ಲೋಸೂಂಗ್ ಅನ್ನು ಗುರುತಿಸಲು ಗ್ಯಾಂಗ್‌ಟಾಕ್‌ನಲ್ಲಿನ ಬ್ಯಾಂಕ್‌ಗಳನ್ನು ಜನವರಿ 4 ರಂದು ಮುಚ್ಚಲಾಗುತ್ತದೆ. ಜನವರಿ 11 ರಂದು ಐಜ್ವಾಲ್‌ನಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ. ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ರಂದು ಕೋಲ್ಕತ್ತಾದ ಬ್ಯಾಂಕುಗಳಿಗೆ ರಜೆ ಇರಲಿದೆ.
ಜನವರಿಯಲ್ಲಿ ವಾರಾಂತ್ಯದ ರಜಾ ದಿನಗಳು
- 02 ಜನವರಿ 2022: ವಾರಾಂತ್ಯದ ರಜೆ (ಭಾನುವಾರ)
- 08 ಜನವರಿ 2022: ಎರಡನೇ ಶನಿವಾರ
- 09 ಜನವರಿ 2022: ವಾರಾಂತ್ಯದ ರಜೆ (ಭಾನುವಾರ)
- 16 ಜನವರಿ 2022: ವಾರಾಂತ್ಯದ ರಜೆ (ಭಾನುವಾರ)
- 22 ಜನವರಿ 2022: ನಾಲ್ಕನೇ ಶನಿವಾರ
- 23 ಜನವರಿ 2022: ವಾರಾಂತ್ಯದ ರಜೆ (ಭಾನುವಾರ)
- 30 ಜನವರಿ 2022: ವಾರಾಂತ್ಯದ ರಜೆ (ಭಾನುವಾರ)