Karnataka news paper

2022 ಹಣಕಾಸು ವರ್ಷದ ಮೊದಲಾರ್ಧದಲ್ಲಿ 36,342 ಕೋಟಿ ರೂ. ಮೊತ್ತದ 4,071 ಬ್ಯಾಂಕ್ ವಂಚನೆ ಪ್ರಕರಣ: ಆರ್ ಬಿ ಐ


The New Indian Express

ಮುಂಬೈ: 2021- 22 ಹಣಕಾಸು ವರ್ಷದ ಮೊದಲಾರ್ಧದಲ್ಲಿಯೇ ಭಾರೀ ಪ್ರಮಾಣದ ಬ್ಯಾಂಕ್ ವಂಚನೆ ಪ್ರಕರಣಗಳು ದಾಖಲಾಗಿರುವುದಾಗಿ ಆರ್ ಬಿ ಐ ವರದಿ ಬಹಿರಂಗಪಡಿಸಿದೆ. 

ಇದನ್ನೂ ಓದಿ: ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ: ಜನವರಿಯಲ್ಲಿ 16 ದಿನ ಬ್ಯಾಂಕಿಂಗ್ ಸೇವೆ ಅಲಭ್ಯ!!!

ಮೇಲ್ಕಂಡ ಅವಧಿಯಲ್ಲಿ ಒಟ್ಟು 4,071 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 3499 ಪ್ರಕರಣಗಳು ದಾಖಲಾಗಿದ್ದವು.

ಇದನ್ನೂ ಓದಿ: ಮಲ್ಯ, ನೀರವ್ ಮೋದಿಯಂತಹ ಸುಸ್ತಿದಾರರ ಆಸ್ತಿ ಮಾರಾಟದಿಂದ 13,100 ಕೋಟಿ ರೂ. ವಸೂಲಿ: ನಿರ್ಮಲಾ ಸೀತಾರಾಮನ್

ಈವರೆಗೆ ದಾಖಲಾಗಿರುವ ಬ್ಯಾಂಕ್ ವಂಚನೆ ಪ್ರಕರಣಗಳ ಒಟ್ಟು ಮೌಲ್ಯ 36,342 ಕೋಟಿ ರೂ.ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಬ್ಯಾಂಕುಗಳ ಖಾಸಗೀಕರಣದಿಂದ ಆರ್ಥಿಕತೆ ಮೇಲೆ ಪರಿಣಾಮ: ಮುಷ್ಕರ ನಿರತ ಬ್ಯಾಂಕ್ ನೌಕರರ ಅಳಲು

2020-21ರ ಹಣಕಾಸು ವರ್ಷದಲ್ಲಿ ಒಟ್ಟು 7,363 ಪ್ರಕರಣಗಳು ದಾಖಲಾಗಿದ್ದವು. ವಂಚಿಸಲ್ಪಟ್ಟ ಒಟ್ಟು ಮೊತ್ತ 1,38,422 ಕೋಟಿ ರೂ.ಗಳಾಗಿತ್ತು. ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಕರಗಳ ಸಂಖ್ಯೆ ಕುಸಿತ ಕಂಡಿತ್ತು.

ಇದನ್ನೂ ಓದಿ: ಬ್ಯಾಂಕ್ ಗ್ರಾಹಕರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ದ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ



Read more…