Karnataka news paper

ಐಷಾರಾಮಿ ಕಾರು ಬಿಟ್ಟು ಆಟೋ ಓಡಿಸಿದರೂ.. ಟ್ರೋಲ್ ಆದ ಸಲ್ಮಾನ್ ಖಾನ್.! ಯಾಕೆ?


ಹೈಲೈಟ್ಸ್‌:

  • ಆಟೋ ಓಡಿಸಿದ ಸಲ್ಮಾನ್ ಖಾನ್
  • ಆಟೋ ಓಡಿಸಿದರೂ ಟ್ರೋಲ್ ಆದ ಸಲ್ಲು ಭಾಯ್
  • ಪನ್ವೇಲ್‌ ಸುತ್ತಮುತ್ತ ಆಟೋ ಓಡಿಸಿದ ಸಲ್ಮಾನ್ ಖಾನ್

ಬಾಲಿವುಡ್‌ನಲ್ಲಿ ಬಾಕ್ಸ್ ಆಫೀಸ್‌ ಟೈಗರ್ ಅಂತಲೇ ಜನಪ್ರಿಯತೆ ಪಡೆದಿರುವವರು ಸಲ್ಮಾನ್ ಖಾನ್. ತಮ್ಮ ಮೂರು ದಶಕಗಳ ಸಿನಿ ಕೆರಿಯರ್‌ನಲ್ಲಿ ಅನೇಕ ಬ್ಲಾಕ್ ಬಸ್ಟರ್ ಚಿತ್ರಗಳನ್ನು ಸಲ್ಮಾನ್ ಖಾನ್ ನೀಡಿದ್ದಾರೆ. ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಸಲ್ಮಾನ್ ಖಾನ್ ಕೂಡ ಒಬ್ಬರು. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆದು, ಕೋಟ್ಯಂತರ ರೂಪಾಯಿ ಆಸ್ತಿಗೆ ಒಡೆಯನಾಗಿರುವ ಸಲ್ಮಾನ್ ಖಾನ್ ಇದೀಗ ಆಟೋ ರಿಕ್ಷಾ ಓಡಿಸಿದ್ದಾರೆ.

ಅರೇ… ಐಷಾರಾಮಿ ರೇಂಜ್ ರೋವರ್, ಮರ್ಸಿಡೀಸ್ ಬೆಂಜ್ ಎಸ್‌- ಕ್ಲಾಸ್, ಲ್ಯಾಂಡ್ ಕ್ರೂಸರ್, ಆಡಿ ಎ8 ಎಲ್, ಮರ್ಸಿಡೀಸ್ ಬೆಂಜ್ ಜಿಎಲ್‌-ಕ್ಲಾಸ್ ಸೇರಿದಂತೆ ದುಬಾರಿ ಬೆಲೆಯ ಕಾರುಗಳೇ ಸಲ್ಮಾನ್ ಖಾನ್ ಬಳಿ ಇವೆ. ಅಂಥದ್ರಲ್ಲಿ, ಈ ಕಾರುಗಳನ್ನು ಬಿಟ್ಟು ಈಗ ಸಲ್ಮಾನ್ ಖಾನ್ ಆಟೋ ರಿಕ್ಷಾ ಓಡಿಸಿದ್ದಾರಾ ಅಂತ ನೀವು ಬಾಯಿ ಮೇಲೆ ಬೆರಳಿಡಬಹುದು. ಆದರೆ, ತಮ್ಮ ಪನ್ವೇಲ್ ಫಾರ್ಮ್ ಹೌಸ್ ಸುತ್ತಮುತ್ತ ಸಲ್ಮಾನ್ ಖಾನ್ ಆಟೋ ಓಡಿಸಿರುವುದು ನಿಜ..!

ಏಕಾಏಕಿ ಸಲ್ಮಾನ್ ಖಾನ್ ಆಟೋ ಓಡಿಸಲು ಕಾರಣವೇನು ಅನ್ನೋದು ಗೊತ್ತಿಲ್ಲ. ಆದರೆ, ಸಲ್ಮಾನ್ ಖಾನ್ ಆಟೋ ಓಡಿಸಿರುವ ವಿಡಿಯೋ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇನ್‌ಸೈಡ್ ವಿಡಿಯೋ: ಸೊಸೆ ಅಯಾತ್ ಜೊತೆ ಕೇಕ್ ಕತ್ತರಿಸಿದ ಸಲ್ಮಾನ್ ಖಾನ್
ಆಟೋ ಓಡಿಸಿದರೂ ಟ್ರೋಲ್ ಆದ ಸಲ್ಲು ಭಾಯ್
ಸ್ಟಾರ್ ನಟ, ಸೆಲೆಬ್ರಿಟಿ ಎಂಬ ಪ್ರತಿಷ್ಠೆ ಇಲ್ಲದೆ ಸಾಮಾನ್ಯರಂತೆ ಆಟೋ ಓಡಿಸಿದ ಸಲ್ಮಾನ್ ಖಾನ್ ಅವರ ಸರಳತೆಯನ್ನ ಅಭಿಮಾನಿಗಳೇನೋ ಕೊಂಡಾಡುತ್ತಿದ್ದಾರೆ. ಆದರೆ, ಕೆಲ ನೆಟ್ಟಿಗರು ಮಾತ್ರ ಸಲ್ಮಾನ್ ಖಾನ್ ಅವರನ್ನು ಯದ್ವಾತದ್ವಾ ಟ್ರೋಲ್ ಮಾಡುತ್ತಿದ್ದಾರೆ.

Salman Khan: ಸಲ್ಮಾನ್ ಖಾನ್ ಮದುವೆಯಾಗದಿರಲು ಕಾರಣ ‘ಈ’ ನಟಿ..!
‘’ಆಟೋ ರಿಕ್ಷಾಗೆ ಬ್ರೇಕ್ ಇದ್ಯಾ?’’, ‘’ಎಲ್ಲರೂ ಕೂಡಲೆ ಸೈಡ್‌ಗೆ ಹೋಗಿ.. ಫುಟ್‌ಪಾತ್‌ನಲ್ಲಿರುವವರನ್ನು ಎಬ್ಬಿಸಿ’’, ‘’ರಸ್ತೆ ಮೇಲಿರುವವರನ್ನು ದೇವರೇ ಕಾಪಾಡಬೇಕು’’, ‘’ಸಲ್ಮಾನ್ ಖಾನ್‌ಗೆ ತಲೆಕೆಟ್ಟುಹೋಗಿದೆ’’, ‘’ಇದು ಯಾವ ಚಿತ್ರದ ಪ್ರಮೋಷನ್?’’, ‘’ಮೊದಲು ಆಟೋದಲ್ಲಿ ಬ್ರೇಕ್ ಸರಿಗಿದ್ಯಾ ಅಂತ ಚೆಕ್ ಮಾಡಿಕೊಳ್ಳಿ’’, ‘’ಇದೆಲ್ಲ ಪಬ್ಲಿಸಿಟಿ ಸ್ಟಂಟ್’’, ‘’ಪನ್ವೇಲ್‌ನ ಭವಿಷ್ಯದ ಎಂಪಿ ಆಗಬಹುದು’’ ಅಂತೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಮೂರು ಬಾರಿ ಕಚ್ಚಿದ ಹಾವು: ಘಟನೆ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್
ಅದ್ಧೂರಿಯಾಗಿ ಬರ್ತ್‌ಡೇ ಆಚರಿಸಿದ ಸಲ್ಮಾನ್ ಖಾನ್
ಬಾಲಿವುಡ್‌ ನಟ ಸಲ್ಮಾನ್ ಖಾನ್ ಕಳೆದ ಕೆಲವು ದಿನಗಳಿಂದ ಪನ್ವೇಲ್‌ನಲ್ಲಿಯೇ ಇದ್ದಾರೆ. ಪನ್ವೇಲ್‌ನಲ್ಲೇ ಇರುವ ಅವರ ಫಾರ್ಮ್‌ಹೌಸ್‌ನಲ್ಲಿಯೇ ತಮ್ಮ ಹುಟ್ಟುಹಬವನ್ನು ಸಲ್ಮಾನ್ ಖಾನ್ ಆಚರಿಸಿಕೊಂಡರು. ಸೊಸೆ ಅಯಾತ್ ಶರ್ಮಾ ಜೊತೆಗೆ ಕೇಕ್ ಕಟ್ ಮಾಡಿ ಸಲ್ಮಾನ್ ಖಾನ್ ಬರ್ತ್‌ಡೇಯನ್ನ ಸೆಲೆಬ್ರೇಟ್ ಮಾಡಿಕೊಂಡರು.

ಪಾನ್ವೇಲ್ ಫಾರ್ಮ್‌ಹೌಸ್‌ನಲ್ಲಿ ನಡೆದ ಸಲ್ಮಾನ್ ಖಾನ್ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಆಯುಷ್ ಶರ್ಮಾ, ಅರ್ಪಿತಾ ಖಾನ್, ಗೆಳತಿ ಲೂಲಿಯಾ ವ್ಯಾಂಟುರ್, ನಟ ಬಾಬ್ಬಿ ಡಿಯೋಲ್, ನಟಿ ಸಂಗೀತಾ ಬಿಜ್ಲಾನಿ, ಅರ್ಬಾಜ್ ಖಾನ್ ಸೇರಿದಂತೆ ಹಲವರು ಹಾಜರಿದ್ದರು.

ಹುಟ್ಟುಹಬ್ಬಕ್ಕೂ ಮುನ್ನ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್ ಖಾನ್‌ಗೆ ಹಾವು ಕಚ್ಚಿತ್ತು. ‘’ನನ್ನ ಫಾರ್ಮ್‌ಹೌಸ್‌ ಒಳಗೆ ಹಾವು ಬಂದಿತ್ತು. ಕೋಲಿನ ಸಹಾಯದಿಂದ ನಾನು ಅದನ್ನು ಹೊರಗೆ ಕಳುಹಿಸಲು ಮುಂದಾದೆ. ಆಗ ನಿಧಾನವಾಗಿ ಹಾವು ನನ್ನ ಕೈ ಸಮೀಪ ಬಂತು. ಆಗಲೇ ಅದು ಮೂರು ಬಾರಿ ನನಗೆ ಕಚ್ಚಿತು. 6 ಗಂಟೆಗಳ ಕಾಲ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ಈಗ ಹುಷಾರಾಗಿದ್ದೇನೆ’’ ಎಂದು ಸಲ್ಮಾನ್ ಖಾನ್ ಹೇಳಿದ್ದರು.



Read more