Online Desk
ಸೆಂಚುರಿಯನ್: ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಭಾರತ ತಂಡ ತನ್ನ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿದ್ದು ಮೊದಲ ಪಂದ್ಯದಲ್ಲಿಯೇ ಭಾರತದ ವಿಕೆಟ್ ಕೀಪರ್ ರಿಷಬ್ ಪಂತ್ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಎಂಎಸ್ ಧೋನಿ ಅವರ ಅಪೂರ್ವ ದಾಖಲೆಯೊಂದನ್ನು ಮುರಿದಿದ್ದಾರೆ.
ಇದನ್ನೂ ಓದಿ: ಮೊದಲ ಟೆಸ್ಟ್: ಶಮಿ ಮಾರಕ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ತತ್ತರ: 197 ರನ್ ಗಳಿಗೆ ಸರ್ವಪತನ
ಹೌದು.. ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ (Team India) ವಿಕೆಟ್‌ಕೀಪರ್ ರಿಷಬ್ ಪಂತ್ (Rishab Pant) ವಿಶೇಷ ದಾಖಲೆ ಬರೆದಿದ್ದು, ವಿಕೆಟ್ ಹಿಂದೆ ರಿಷಭ್ ಪಂತ್ ನಾಲ್ಕು ಕ್ಯಾಚ್ಗಳನ್ನು ಪಡೆದು ಈ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 327 ರನ್ಗಳಿಸಿದರೆ, ದಕ್ಷಿಣ ಆಫ್ರಿಕಾ 197 ರನ್ಗಳಿಗೆ ಸರ್ವಪತನ ಕಂಡಿತು. ಇದೇ ವೇಳೆ ವಿಕೆಟ್ ಹಿಂದೆ ರಿಷಭ್ ಪಂತ್ ನಾಲ್ಕು ಕ್ಯಾಚ್ಗಳನ್ನು ಪಡೆದು, ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 100 ಬಲಿ ಪಡೆದ ದಾಖಲೆಯನ್ನು ಪಂತ್ ತಮ್ಮ ಹೆಸರಿಗೆ ಬರೆದುಕೊಂಡರು.
ಇದನ್ನೂ ಓದಿ: ಭಾರತ- ದಕ್ಷಿಣ ಆಫ್ರಿಕಾ ಪ್ರಥಮ ಟೆಸ್ಟ್: ಗಾಯದಿಂದ ಮೈದಾನದಿಂದ ನಿರ್ಗಮಿಸಿದ ಬೂಮ್ರಾ!
ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಮಂದಿಯನ್ನು ಕ್ಯಾಚ್ ಹಾಗೂ ಸ್ಟಂಪಿಂಗ್ ಮೂಲಕ ಔಟ್ ಮಾಡಿದ್ದಾರೆ. ಕೇವಲ 26 ಟೆಸ್ಟ್ ಪಂದ್ಯಗಳಿಂದ ಈ ಸಾಧನೆ ಮಾಡುವ ಮೂಲಕ ಟೀಮ್ ಇಂಡಿಯಾ ಯಶಸ್ವಿ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಮಹೇಂದ್ರ ಸಿಂಗ್ ಧೋನಿ ಹಾಗೂ ವೃದ್ಧಿಮಾನ್ ಸಾಹ ಹೆಸರಿನಲ್ಲಿತ್ತು. 36 ಟೆಸ್ಟ್ ಪಂದ್ಯಗಳಿಂದ ಧೋನಿ-ಸಾಹ 100 ಮಂದಿಯ ಔಟ್ಗೆ ಕಾರಣರಾಗಿದ್ದರು. ಇದೀಗ ಕೇವಲ 26 ಟೆಸ್ಟ್ ಪಂದ್ಯಗಳಿಂದ 100 ಬಲಿ ಪಡೆಯುವ ಮೂಲಕ ಧೋನಿಯ ದಾಖಲೆಯನ್ನು ಮುರಿದು ರಿಷಭ್ ಪಂತ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಮೊದಲ ಟೆಸ್ಟ್: ಎನ್‌ಗಿಡಿ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ; ಕೆಎಲ್ ರಾಹುಲ್ ಏಕಾಂಗಿ ಹೋರಾಟ; 327 ರನ್ ಗಳಿಗೆ ಆಲೌಟ್
ಭಾರತದ ಪರ 100 ಮಂದಿಯನ್ನು ಔಟ್ ಮಾಡಿದ ವಿಕೆಟ್ ಕೀಪರ್ಗಳ ಪಟ್ಟಿಯಲ್ಲಿ ಒಟ್ಟು ಐವರು ವಿಕೆಟ್ ಕೀಪರ್ಗಳಿದ್ದು, ಅದರಂತೆ ಇದೀಗ ಅಗ್ರಸ್ಥಾನದಲ್ಲಿ ರಿಷಭ್ ಪಂತ್ (26) ಇದ್ದಾರೆ. ದ್ವಿತೀಯ ಸ್ಥಾನವನ್ನು ಧೋನಿ ಹಾಗೂ ಸಾಹ (36) ಜಂಟಿಯಾಗಿ ಹಂಚಿಕೊಂಡಿದ್ದಾರೆ. ಇನ್ನು 3ನೇ ಸ್ಥಾನದಲ್ಲಿ ಕಿರಣ್ ಮೋರೆ (39 ಟೆಸ್ಟ್), 4ನೇ ಸ್ಥಾನದಲ್ಲಿ ನಯನ್ ಮೊಂಗಿಯಾ (41 ಟೆಸ್ಟ್) ಹಾಗೂ 5ನೇ ಸೈಯದ್ ಕಿರ್ಮಾನಿ (42 ಟೆಸ್ಟ್) ಇದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್ಗೆ ಕಾರಣರಾದ ಭಾರತದ ಆರನೇ ವಿಕೆಟ್ ಕೀಪರ್ ಎಂಬ ಸಾಧನೆಯನ್ನು ಪಂತ್ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಧೋನಿ ಅಗ್ರಸ್ಥಾನದಲ್ಲಿದ್ದು, ಮಾಹಿ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 294 ಬಲಿಪಶುಗಳನ್ನು ತೆಗೆದುಕೊಂಡಿದ್ದಾರೆ. ಇದರಲ್ಲಿ 256 ಕ್ಯಾಚ್‌ಗಳು ಮತ್ತು 38 ಸ್ಟಂಪಿಂಗ್‌ಗಳನ್ನು ಸೇರಿವೆ.