ಮುಂಬೈ; ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರಾ ಸಿನಿಮಾ ಶೂಟಿಂಗ್‌ನಲ್ಲಿ ಸೀರೆ ಕದ್ದಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
‘ಮೀನಾಕ್ಷಿ ಸುಂದರೇಶ್ವರ್’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನನಗೆ ಇಷ್ಟವಾಗಿದ್ದ ಸೀರೆಯನ್ನು ಕಳ್ಳತನ ಮಾಡಿದ್ದೆ. ಅದನ್ನು ಗೆಳತಿಯ ಮದುವೆಗೆ ಉಟ್ಟುಕೊಂಡು ಹೋಗಿದ್ದೆ ಎಂದು ಸಾನ್ಯಾ ಖಾಸಗಿ ಟಿ.ವಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
2021ರ ಲಾಕ್‌ಡೌನ್ ನಂತರ ’ಮೀನಾಕ್ಷಿ ಸುಂದರೇಶ್ವರ್’ ಸಿನಿಮಾದ ಶೂಟಿಂಗ್ ಆರಂಭವಾಯಿತು. ನನ್ನ ಪಾತ್ರಕ್ಕಾಗಿ ಸಾಕಷ್ಟು ಸೀರೆಗಳನ್ನು ತಂದಿದ್ದರು. ಅವುಗಳಲ್ಲಿ ಹಲವು ಸೀರೆಗಳು ಈಗಲೂ ನನ್ನ ಬಳಿ ಇವೆ ಎಂದು ಸಾನ್ಯಾ ನಕ್ಕಿದ್ದಾರೆ.
ಸಾನ್ಯಾಗೆ ಸೀರೆಗಳ ಮೇಲೆ ಪ್ರೀತಿ ಎಷ್ಟು ಎಂಬುದು ಚಿತ್ರತಂಡದವರಿಗೂ ಗೊತ್ತಿತ್ತು. ಹಲವಾರು ಸೀರೆಗಳನ್ನು ಅವರಿಗೆ ನೀಡಿದ್ದರು. ಸಾನ್ಯಾ ಸೀರೆಗಳನ್ನು ಕದ್ದೆ ಎಂದು ಹೇಳಿರುವುದು ಅವರಿಗೆ ಸೀರೆಗಳ ಮೇಲಿನ ಪ್ರೀತಿಯನ್ನು ತೋರಿಸುತ್ತದೆ ಎಂಬುದನ್ನು ಹೇಳಬೇಕಾಗಿಲ್ಲ.
ಓದಿ: ಸದಾ ಫಿಟ್ ಆಗಿರಬೇಕು ಎಂದು ಫೋಟೊ ಪೋಸ್ಟ್ ಮಾಡಿದ ಅನನ್ಯಾ ಪಾಂಡೆ
ದಂಗಲ್, ಶಂಕುತಲಾ ದೇವಿ, ಫೋಟೊಗ್ರಾಫ್, ಮೀನಾಕ್ಷಿ ಸುಂದರೇಶ್ವರ್ ಸಿನಿಮಾಗಳು ಸಾನ್ಯಾ ಹೆಸರು ತಂದುಕೊಟ್ಟಿವೆ. ಸದ್ಯ ಅವರು ಬಹದ್ದೂರ್, ಲವ್ ಹಾಸ್ಟೆಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಓದಿ: ಅನುಷ್ಕಾ ಜತೆ ನದಿ ತೀರದಲ್ಲಿ ಸಂಜೆ: ವಿರಾಟ್ ಕೊಹ್ಲಿ ಭಾವನಾತ್ಮಕ ಪೋಸ್ಟ್