ಹೈಲೈಟ್ಸ್:
- ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ 3 ಪಂದ್ಯಗಳ ಟೆಸ್ಟ್ ಸರಣಿ.
- ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿ ಸೆಣಸುತ್ತಿರುವ ಉಭಯ ತಂಡಗಳು.
- ಮೂರನೇ ದಿನ ದಕ್ಷಿಣ ಆಫ್ರಿಕಾ ವಿರುದ್ಧ ಮೇಲುಗೈ ಸಾಧಿಸಿದ್ದ ಟೀಮ್ ಇಂಡಿಯಾ.
- ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಮೊತ್ತದ ಗುರಿ ನೀಡಲು ಮುಂದಾಗಿರುವ ಭಾರತ.
ಬುಧವಾರ ಬೆಳಗ್ಗೆ 16 ರನ್‌ಗಳಿಂದ ನಾಲ್ಕನೇ ದಿನದಾಟ ಶುರು ಮಾಡಿದ ಭಾರತ ತಂಡ ಭೋಜನ ವಿರಾಮದ ಹೊತ್ತಿಗೆ ದ್ವಿತೀಯ ಇನಿಂಗ್ಸ್‌ನಲ್ಲಿ 32 ಓವರ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದು 79 ರನ್ ಗಳಿಸಿದ್ದು, 209 ರನ್ ಮುನ್ನಡೆ ಗಳಿಸಿದೆ. ಕ್ರೀಸ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ (18*) ಹಾಗೂ ಚೇತೇಶ್ವರ್ ಪೂಜಾರ (12*) ಇದ್ದಾರೆ.
ಪ್ರಥಮ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟ್ ಮಾಡಿ ವೃತ್ತಿ ಜೀವನದ ಏಳನೇ ಶತಕ ಸಿಡಸಿದ್ದ ಕೆ.ಎಲ್ ರಾಹುಲ್, ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 23 ರನ್ ಗಳಿಸಿಲುಂಗಿ ಎನ್ಗಿಡಿ ಎಸೆತದಲ್ಲಿ ಸ್ಲಿಪ್‌ನಲ್ಲಿ ಕ್ಯಾಚಿತ್ತರು. ಇದಕ್ಕೂ ಮುನ್ನ ಶಾರ್ದುಲ್ ಠಾಕೂರ್(10) ರಬಾಡಗೆ ಔಟ್ ಆಗಿದ್ದರು. ನಾಲ್ಕನೇ ದಿನ ಭಾರತ ತಂಡದ ಬ್ಯಾಟ್ಸ್‌ಮನ್‌ಗಳ ಬಹಳಾ ಎಚ್ಚರಿಕೆಯಿಂದ ಬ್ಯಾಟ್ ಮಾಡ ಬೇಕಾದ ಅಗತ್ಯವಿದೆ. ಆ ಮೂಲಕ 300ಕ್ಕೂ ಹೆಚ್ಚಿನ ಮೊತ್ತದ ಗುರಿಯನ್ನು ದಕ್ಷಿಣ ಅಫ್ರಿಕಾಗೆ ನೀಡಿದರೆ ಖಂಡಿತಾ ಭಾರತ ತಂಡ ಮೊದಲನೇ ಟೆಸ್ಟ್‌ನಲ್ಲಿ ಗೆಲುವು ಪಡೆಯಬಹುದಾಗಿದೆ.
ಭಾರತ Vs ದಕ್ಷಿಣ ಆಫ್ರಿಕಾ ಮೊದಲನೇ ಟೆಸ್ಟ್ ಸ್ಕೋರ್‌ಕಾರ್ಡ್
ದಕ್ಷಿಣ ಆಫ್ರಿಕಾ 197ಕ್ಕೆ ಆಲ್‌ಔಟ್: ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 327 ರನ್‌ಗಳಿಗೆ ಆಲ್‌ಔಟ್ ಆಗಿದ್ದ ಬಳಿಕ ಪ್ರಥಮ ಇನಿಂಗ್ಸ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಮೊಹಮ್ಮದ್ ಶಮಿ ಹಾಗೂ ಜಸ್‌ಪ್ರಿತ್ ಬುಮ್ರಾ ಮಾರಕ ದಾಳಿಗೆ ನಲುಗಿ ಕೇವಲ 197 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ದಕ್ಷಿಣ ಆಫ್ರಿಕಾ ಪರ ತೆಂಬಾ ಬವೂಮ (52) ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಭಾರತದ ಪರ ಮೊಹಮ್ಮದ್ ಶಮಿ 5 ವಿಕೆಟ್ ಸಾಧನೆ ಮಾಡಿದ್ದರು.
ಕೆ.ಎಲ್ ರಾಹುಲ್ 7ನೇ ಶತಕ: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 327 ರನ್‌ಗಳನ್ನು ಕಲೆ ಹಾಕಿತ್ತು. ಎರಡನೇ ದಿನದಾಟ ಮಳೆಗೆ ಆಹುತಿಯಾದರೂ ಮೊದಲನೇ ದಿನವೇ ಟೀಮ್ ಇಂಡಿಯಾ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿತ್ತು. ಭಾರತದ ಪರ ಆರಂಭಿಕ ಕೆ.ಎಲ್ ರಾಹುಲ್ (123) ವೃತ್ತಿ ಜೀವನದ 7ನೇ ಶತಕ ಸಿಡಿಸಿದ್ದರು. ಮಯಾಂಕ್ ಅಗರ್ವಾಲ್ 60 ಹಾಗೂ ಅಜಿಂಕ್ಯ ರಹಾನೆ 48 ರನ್ ಗಳಿಸಿದ್ದರು. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್ಗಿಡಿ 6 ವಿಕೆಟ್ ಸಾಧನೆ ಮಾಡಿದ್ದರು.
ಸಂಕ್ಷಿಪ್ತ ಸ್ಕೋರ್(ಭೋಜನ ವಿರಾಮ)
ಭಾರತ: ಮೊದಲ ಇನಿಂಗ್ಸ್ 105.3 ಓವರ್‌ಗಳಿಗೆ 327 (ಕೆಎಲ್ ರಾಹುಲ್ 123, ಮಯಾಂಕ್ ಅಗರ್ವಾಲ್ 60, ವಿರಾಟ್ ಕೊಹ್ಲಿ 35, ಅಜಿಂಕ್ಯ ರಹಾನೆ 48; ಲುಂಗಿ ಎನ್ಗಿಡಿ 71ಕ್ಕೆ 6, ಕಗಿಸೋ ರಬಾಡ 72ಕ್ಕೆ 3, ಮಾರ್ಕೊ ಯೆನ್ಸೆನ್ 69 ಕ್ಕೆ 1).
ದಕ್ಷಿಣ ಆಫ್ರಿಕಾ: ಪ್ರಥಮ ಇನಿಂಗ್ಸ್ 62.3 ಓವರ್‌ಗಳಿಗೆ 197/10 (ತೆಂಬಾ ಬವೂಮ 52, ಕ್ವಿಂಟನ್ ಡಿ ಕಾಕ್ 34, ಕಗಿಸೊ ರಬಾಡ 25; ಜಸ್‌ಪ್ರಿತ್ ಬುಮ್ರಾ 16ಕ್ಕೆ 2, ಮೊಹ್ಮಮದ್ ಶಮಿ 44 ಕ್ಕೆ 5, ಮೊಹಮ್ಮದ್ ಸಿರಾಜ್ 45ಕ್ಕೆ 1, ಶಾರ್ದುಲ್ ಠಾಕೂರ್ 51ಕ್ಕೆ 2)
ಭಾರತ: ದ್ವಿತೀಯ ಇನಿಂಗ್ಸ್ 32 ಓವರ್‌ಗಳಿಗೆ 79ಕ್ಕೆ 3 (ಕೆ.ಎಲ್ ರಾಹುಲ್ 23, ವಿರಾಟ್ ಕೊಹ್ಲಿ 18; ಮಾರ್ಕೊ ಯೆನ್ಸೆನ್ 14ಕ್ಕೆ 1, ಕಗಿಸೊ ರಬಾಡ 24ಕ್ಕೆ 1, ಲುಂಗಿ ಇನ್ಗಿಡಿ 24 ಕ್ಕೆ 1)
‘ಈತ ವಿಶ್ವದರ್ಜೆಯ ಬೌಲರ್’ ಟೀಮ್ ಇಂಡಿಯಾ ವೇಗಿಗೆ ಬವೂಮ ಮೆಚ್ಚುಗೆ!
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿ.ಕೀ), ಆರ್ ಅಶ್ವಿನ್, ಶಾರ್ದುಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್‌ಪ್ರಿತ್ ಬುಮ್ರಾ.
ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಏಡೆನ್ ಮಾರ್ಕ್ರಮ್, ಕೀಗನ್ ಪೀಟರ್ಸನ್, ರಾಸಿ ವ್ಯಾನ್ ಡೆರ್ ಡುಸೆನ್, ತೆಂಬಾ ಬವೂಮಾ, ಕ್ವಿಂಟನ್ ಡಿ’ಕ್ವಾಕ್ (ವಿಕೆಟ್‌ಕೀಪರ್), ವಿಯಾನ್ ಮಲ್ಡರ್, ಮಾರ್ಕೊ ಯೆನ್ಸೆನ್, ಕೇಶ್ವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ.