Karnataka news paper

ಎಂಇಎಸ್‌ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ, ಕರ್ನಾಟಕ ಬಂದ್ ಕೈಬಿಡಿ: ಬೊಮ್ಮಾಯಿ


ಹುಬ್ಬಳ್ಳಿ: ಜನ ಸಂಕಷ್ಟದಲ್ಲಿ ಇರುವುದರಿಂದ ಗುರುವಾರದ ಕರ್ನಾಟಕ ಬಂದ್ ಕೈ ಬಿಡಬೇಕು ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ‌ ಮನವಿ ಮಾಡಿದರು.

ಇಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿ ಎಂಇಎಸ್ ವಿರುದ್ಧ ಈಗಾಗಲೇ ನಾವು ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ಆದ್ದರಿಂದ ಬಂದ್ ಕೈ ಬಿಡಬೇಕು. ಕೋವಿಡ್ ನಿಂದ ಸಾಕಷ್ಟು ಸಮಸ್ಯೆ ಆಗಿದೆ. ಬಲವಂತದ ಬಂದ್‌ಗೆ ಮುಂದಾದರೆ ಅಲ್ಲಿಯೇ ಉತ್ತರ ನೀಡಬೇಕಾಗುತ್ತದೆ ಎಂದರು.

ಮುಂದಿನ ಕಾರ್ಯಕಾರಿಣಿ ವಿಜಯನಗರದಲ್ಲಿ ಆಯೋಜನೆ

ಮುಂದಿನ ಕಾರ್ಯಕಾರಿಣಿ ಸಭೆಯನ್ನು 2022ರ ಮಾರ್ಚ್ 28 ಮತ್ತು 29ರಂದು ನೂತನ ಜಿಲ್ಲೆ ವಿಜಯನಗರದಲ್ಲಿ ನಡೆಸಲು‌‌ ನಿರ್ಧರಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ‌ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೊಸ ಜಿಲ್ಲೆಯಲ್ಲಿ ಆನಂದ್ ಸಿಂಗ್ ಮುಂದಾಳತ್ವದಲ್ಲಿ ಕಾರ್ಯಕಾರಿಣಿ ಆಯೋಜಿಸಲಾಗುವುದು ಎಂದರು.



Read more from source