Source : Online Desk
ಪಣಜಿ: ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ನಂತರ ಗೋವಾದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳಾ ಖಾತೆಗಳಿಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ನೇರ ನಗದು ವರ್ಗಾವಣೆ ಯೋಜನೆ ಜಾರಿಗೊಳಿಸಲಾಗುವುದು ಎಂದು ತೃಣಮೂಲ ಕಾಂಗ್ರೆಸ್ ಶನಿವಾರ ಘೋಷಿಸಿದೆ.
ಗೋವಾದಲ್ಲಿ ಒಂದು ಬಾರಿ ಪಕ್ಷ ಅಧಿಕಾರಕ್ಕೆ ಬಂದರೆ ಗೃಹ ಲಕ್ಷಿ ಯೋಜನೆ ಅಡಿಯಲ್ಲಿ ಹಣದುಬ್ಬರ ಕಡಿಮೆ ಮಾಡಲು ಖಾತರಿ ಆದಾಯ ಬೆಂಬಲವಾಗಿ ರಾಜ್ಯದ ಪ್ರತಿಯೊಬ್ಬ ಮಹಿಳೆಗೂ ತಿಂಗಳಿಗೆ 5 ಸಾವಿರ ರೂಪಾಯಿ ವರ್ಗಾವಣೆ ಮಾಡಲಾಗುವುದು ಎಂದು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ತಿಳಿಸಿದ್ದಾರೆ.
I am delighted to announce the #GrihaLaxmiCard, our solemn promise to financially empower the women of every Goan household.
Under this, an assured monthly income support of ₹5,000/month (₹60,000 yearly) will be provided to every family in Goa.
— Mamata Banerjee (@MamataOfficial) December 11, 2021
ಗೃಹ ಲಕ್ಷ್ಮಿ ಯೋಜನೆಯಡಿ ರಾಜ್ಯದ 3.5 ಲಕ್ಷ ಮಹಿಳೆಯರು ಪ್ರಯೋಜನ ಪಡೆಯಲಿದ್ದು, ಇದು ರಾಜ್ಯದ ಬಿಜೆಪಿ ಸರ್ಕಾರದ ಸದ್ಯದ ಗೃಹ ಆಧಾರ್ ಯೋಜನೆಯಲ್ಲಿನ ಕಡ್ಡಾಯಗೊಳಿಸಲಾದ ಗರಿಷ್ಠ ಆದಾಯದ ಮಿತಿಯನ್ನು ಸಹ ತೆಗೆದುಹಾಕುತ್ತದೆ ಎಂದು ಗೋವಾದಲ್ಲಿನ ಟಿಎಂಸಿ ಉಸ್ತುವಾರಿ ಮೊಯಿತ್ರಾ ಹೇಳಿದ್ದಾರೆ.
ಯೋಜನೆಗಾಗಿ ಗುರುತಿನ ಕಾರ್ಡ್ ಗಳನ್ನು ಪಕ್ಷದಿಂದ ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಗೋವಾದಲ್ಲಿನ ಎಲ್ಲಾ 40 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷ ಪ್ರಕಟಿಸಿದೆ.