2021 ವರ್ಷವು ಸಂಪೂರ್ಣ ಚಟುವಟಿಕೆಯ ವರ್ಷವಾಗಿತ್ತು. ಮೊದಲ ಎಂಟರಿಂದ ಒಂಬತ್ತು ತಿಂಗಳುಗಳು ಸಾಕಷ್ಟು ಆಶಾದಾಯಕವಾಗಿದ್ದರೆ, ಕೊನೆಯ ಮೂರರಿಂದ ನಾಲ್ಕು ತಿಂಗಳುಗಳಲ್ಲಿ ಸೂಚ್ಯಂಕಗಳು ಗಗನಕ್ಕೇರಿದ್ದವು. ಅಮೆರಿಕದ ಫೆಡರಲ್ ಬ್ಯಾಂಕಿನ ಮೊನಚಾದ ನಿರ್ಧಾರಗಳ ಮಧ್ಯೆಯೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ನಿವ್ವಳ ಮಾರಾಟಗಾರರಾದಂಥಹ ವಿವಿಧ ಅಂಶಗಳಿಗೆ ಇದು ಕಾರಣವೆಂದು ಹೇಳಬಹುದು. ಇದಲ್ಲದೆ, ಕೊರೊನಾ ವೈರಸ್‌ನ ಹೊಸ ರೂಪಾಂತರಿಯಾದ ಓಮಿಕ್ರಾನ್ ಕೂಡ ಮಾರುಕಟ್ಟೆಗಳಲ್ಲಿ ಸ್ವಲ್ಪ ಒತ್ತಡವನ್ನು ಸೃಷ್ಟಿಸಿದೆ.
ಇದರ ಹೊರತಾಗಿಯೂ, ನಿಫ್ಟಿ ಮಿಡ್‌ಕ್ಯಾಪ್ 150 ಟೋಟಲ್ ರಿಟರ್ನ್ಸ್ ಇಂಡೆಕ್ಸ್ (ಟಿಆರ್‌ಐ) ಕಳೆದ ಒಂದು ವರ್ಷದಲ್ಲಿ ಶೇ. 45ರಷ್ಟು ಆದಾಯವನ್ನು ನೀಡಿದೆ. ಇನ್ನೂ ಹೇಳುವುದಾದರೆ, ಐತಿಹಾಸಿಕವಾಗಿ ಗುಣಮಟ್ಟದ ಷೇರುಗಳು ಸೂಚ್ಯಂಕಗಳನ್ನು ಮೀರಿಸಿದ್ದಕ್ಕೆ 2021 ಸಾಕ್ಷಿಯಾಗಿದೆ. ಆದ್ದರಿಂದ, ಸ್ಟೋರಿಯಲ್ಲಿ ನಾವು 2022ರ ಮಿಡ್‌ಕ್ಯಾಪ್ ಷೇರುಗಳನ್ನು ನೋಡುತ್ತಿದ್ದೇವೆ.
2022ರ ಟಾಪ್ ಐದು ಮಿಡ್‌ಕ್ಯಾಪ್ ಷೇರುಗಳ ಪಟ್ಟಿ ಈ ಕೆಳಗಿನಂತಿದೆ.
ಷೇರುಗಳು | ಪ್ರಸ್ತುತ ಮಾರುಕಟ್ಟೆ ದರ (ರೂ.) | 10-ವರ್ಷದ ಲಾಭದ ಬೆಳವಣಿಗೆ (%) | ಮಾರಾಟದ ಬೆಳವಣಿಗೆ (%) | 10-ವರ್ಷದ ಮೀಡಿಯನ್ ಮಾರಾಟದ ಬೆಳವಣಿಗೆ (%) | ಡೆಟ್‌ನಿಂದ ಈಕ್ವಿಟಿ ಅನುಪಾತ | ಆರ್ಒಇ (%) |
ಫಿನೋಲೆಕ್ಸ್ ಇಂಡಸ್ಟ್ರೀಸ್ ಲಿ. | 204.35 | 25.56 | 66.83 | 4.85 | 0.01 | 28.91 |
ಆಲ್ಕೈಲ್ ಅಮೈನ್ಸ್ ಕೆಮಿಕಲ್ಸ್ ಲಿ. | 3,300.80 | 39.77 | 40.70 | 21.93 | 0.04 | 44.58 |
ಕೆ ಪಿ ಆರ್ ಮಿಲ್ ಲಿ. | 668.80 | 21.39 | 33.15 | 8.21 | 0.30 | 24.31 |
ಡಾ. ಲಾಲ್ ಪತ್‌ಲ್ಯಾಬ್ಸ್ ಲಿ. | 3,564.35 | 25.88 | 49.79 | 18.22 | 0.03 | 25.13 |
ಜೆ.ಬಿ. ಕೆಮಿಕಲ್ಸ್ & ಫಾರ್ಮಾಸ್ಯೂಟಿಕಲ್ಸ್ ಲಿ. | 1,645.85 | 11.14 | 23.81 | 8.02 | 0.02 | 24.72 |
ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ.
ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು.
ಹಕ್ಕುತ್ಯಾಗ ( Disclaimer): ಮೇಲಿನ ವಿಷಯವನ್ನು ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್ (DSIJ)ಪರವಾಗಿ ಬರೆಯಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಥವಾ ಸೂಚಿಸಿದ, ಅದಕ್ಕೆ ಸಂಬಂಧಿಸಿದ ಎಲ್ಲ ವಾರಂಟಿಗಳನ್ನು ಟಿಐಎಲ್ ನಿರಾಕರಿಸುತ್ತದೆ. ಒದಗಿಸಿರುವ ಯಾವುದೇ ಮಾಹಿತಿ ಮತ್ತು ವಿಷಯವು ಸರಿಯಾಗಿದೆ, ನವೀಕರಿಸಲಾಗಿದೆ ಮತ್ತು ಪರಿಶೀಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.