Karnataka news paper

ದಿವಂಗತ ಇರ್ಫಾನ್‌ ಖಾನ್‌ ನಟನೆಯ ಹಳೆಯ ಚಿತ್ರ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧ


ಮುಂಬೈ: ವಿಭಿನ್ನ ನಟನೆಯ ಮೂಲಕ ಅಭಿಮಾನಿಗಳ ಮನದಲ್ಲಿ ಸಾರ್ವಕಾಲಿಕವಾಗಿ ಬದುಕಿರುವ ಬಾಲಿವುಡ್‌ನ ದಿವಂಗತ ನಟ ಇರ್ಫಾನ್‌ ಖಾನ್‌ ಅವರ 14 ವರ್ಷಗಳ ಹಳೆಯ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. 

ವಿವಿಧ ಕಾರಣಗಳಿಂದ ವಿಳಂಬವಾಗಿದ್ದ ‘ಮರ್ಡರ್ ಅಟ್ ತೀಸ್ರಿ ಮಂಜ್ಹಿಲ್‌ 302’ ಸಿನಿಮಾ ಒಟಿಟಿ ಮೂಲಕ ಬಿಡುಗಡೆಯಾಗಲಿದೆ. ಇರ್ಫಾನ್‌ ಖಾನ್‌ ಈ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದರು. 2008ರಲ್ಲಿ ಈ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿತ್ತು. ಇದು ಜೀ5 ಒಟಿಟಿ ವೇದಿಕೆಯಲ್ಲಿ ಡಿಸೆಂಬರ್‌ 31ರಂದು ಬಿಡುಗಡೆಯಾಗಲಿದೆ.

ಈ ಚಿತ್ರ ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿದ್ದಾರೆ. ಸಿನಿಮಾ ಹಳೆಯದಾದರೂ ನಾವು ಮತ್ತೊಮ್ಮೆಇರ್ಫಾನ್‌ ಅವರನ್ನು ಕಣ್ತುಂಬಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. 

ರೊಮ್ಯಾಂಟಿಕ್ ಹಾಗೂ ಥ್ರಿಲ್ಲರ್ ಆಗಿರುವ ಈ ಸಿನಿಮಾವನ್ನು ನವನೀತ್‌ ಶೈನಿ ನಿರ್ದೇಶನ ಮಾಡಿದ್ದಾರೆ. ರಣವೀರ್ ಶೋರೆ, ಲಕ್ಕಿ ಅಲಿ, ದೀಪಲ್ ಶಾ ಸೇರಿದಂತೆ ಹಲವರು ನಟಿಸಿದ್ದಾರೆ.

ಇದನ್ನೂ ಓದಿನೆನಪಿನಲ್ಲಿ ಉಳಿಯುವ ಇರ್ಫಾನ್ ಖಾನ್ ನಟನೆಯ 12 ಚಿತ್ರಗಳು

ಈಗಾಗಲೇ ಟ್ರೈಲರ್‌ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೇಕ್ಷಕರು ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 

ಕ್ಯಾನ್ಸರ್‌​ನಿಂದ ಬಳಲುತ್ತಿದ್ದ ಇರ್ಫಾನ್ 2020ರ ಏಪ್ರಿಲ್​ 29ರಂದು ನಿಧನರಾದರು.  ‘ಅಂಗ್ರೇಜಿ ಮೀಡಿಯಮ್’ ಅವರು ನಟಿಸಿದ ಕೊನೆಯ ಸಿನಿಮಾವಾಗಿದೆ.

ಇದನ್ನೂ ಓದಿ:ತಾಯಿ ಅಗಲಿಕೆಯ ಬೆನ್ನಲ್ಲೇ ಇಹಲೋಕ ತ್ಯಜಿಸಿದ ನಟ ಇರ್ಫಾನ್ ಖಾನ್



Read More…Source link