ಬೆಂಗಳೂರು: ನಾನು ವಂಡರ್‌ಲ್ಯಾಂಡ್‌ನಲ್ಲಿ ಇದ್ದೇನೆ.. ನೋಡಿ ಎಂದು ನಟಿ ಅನನ್ಯಾ ಪಾಂಡೆ ಹೇಳಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಮಾಡಿರುವ ಫೋಟೊ ಪೋಸ್ಟ್ ನೋಡಿದ ಆಕೆಯ ಗೆಳತಿ ಸುಹಾನಾ ಖಾನ್, ‘ಪರ್ಫೆಕ್ಟ್‘ ಎಂದಿದ್ದಾರೆ.
ಹೊಸ ವಿನ್ಯಾಸದ ಉಡುಪು ಧರಿಸಿ, ವಿವಿಧ ಭಂಗಿಗಳಲ್ಲಿ ನಟಿ ಅನನ್ಯಾ ಪೋಸ್ ಕೊಟ್ಟಿರುವ ಫೋಟೊಗಳನ್ನು ನೋಡಿರುವ ಅಭಿಮಾನಿಗಳು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅನನ್ಯಾ ಪಾಂಡೆ, ವಿಜಯ್ ದೇವರಕೊಂಡ ಜತೆಗೆ ‘ಲೈಗರ್‘ ಸಿನಿಮಾದ ಚಿತ್ರೀಕರಣ ಪೂರೈಸಿದ್ದಾರೆ.
ಅವರ ಹೊಸ ಸಿನಿಮಾ ‘ಗೆಹರಾಯಿನ್‘ ಕೂಡ ಹೆಚ್ಚು ಸದ್ದು ಮಾಡುತ್ತಿದೆ.
ಸದಾ ಫಿಟ್ ಆಗಿರಬೇಕು ಎಂದು ಫೋಟೊ ಪೋಸ್ಟ್ ಮಾಡಿದ ಅನನ್ಯಾ ಪಾಂಡೆ
ಫ್ರೆಂಚ್ ಫ್ರೈ ತಿನ್ನುತ್ತಿರುವ ಫೋಟೊ ಒಂದನ್ನು ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದ ಅವರು, ನನಗೆ ಬೇರೇನೂ ಬೇಡ, ಒಂದು ಬೊಕೆ ಫ್ರೆಂಚ್ ಫ್ರೈ ಕೊಡಿ ಎಂದು ಹೇಳಿಕೊಂಡಿದ್ದರು.
ನನಗೆ ಒಂದು ಬೊಕೆ ಫ್ರೆಂಚ್ ಫ್ರೈ ಮಾತ್ರ ಸಾಕು: ಅನನ್ಯಾ ಪಾಂಡೆ