Karnataka news paper

ಮುಡಾ ಮನೆ ಹರಾಜಿಗೆ ಸಿದ್ಧತೆ; 100 ಕೋಟಿ ರೂ. ಆದಾಯ ನಿರೀಕ್ಷೆ, ಈಗಾಗಲೇ 120 ಮನೆ ಪತ್ತೆ!


ಹೈಲೈಟ್ಸ್‌:

  • ನಿವೇಶನಗಳ ಹರಾಜಿನ ಮೂಲಕ ಆದಾಯ ಗಳಿಸುತ್ತಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ), ಈಗ ಮತ್ತೊಂದು ಆದಾಯದ ಮೂಲಕ್ಕೆ ಕೈ ಹಾಕಿದೆ
  • 120 ಮನೆಗಳನ್ನು ಗುರುತಿಸಿರುವ ಮುಡಾ ಅಧಿಕಾರಿಗಳು, ಇಂದಿನ ಮಾರುಕಟ್ಟೆ ದರದಲ್ಲಿ ಹರಾಜು ನಡೆಸಲು ನಿರ್ಧರಿಸಿದ್ದಾರೆ
  • ಮುಡಾ ನಿರ್ಮಿಸಿರುವ ಮನೆಗಳಲ್ಲಿ ಅಕ್ರಮವಾಗಿ ವಾಸವಿರುವವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

ಹರೀಶ ಎಲ್‌. ತಲಕಾಡು ಮೈಸೂರು
ಮೈಸೂರು:
ನಿವೇಶನಗಳ ಹರಾಜಿನ ಮೂಲಕ ಆದಾಯ ಗಳಿಸುತ್ತಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ), ಈಗ ಮತ್ತೊಂದು ಆದಾಯದ ಮೂಲಕ್ಕೆ ಕೈ ಹಾಕಿದೆ.

ದಾಖಲೆಯಲ್ಲಿ ಹಂಚಿಕೆಯಾಗದೇ ಬಾಕಿ ಇರುವ ಮುಡಾ ಮನೆಗಳ ಹರಾಜಿಗೆ ಸಿದ್ಧತೆ ನಡೆಸಿದೆ. ಈಗಾಗಲೇ ಅಂತಹ 120 ಮನೆಗಳನ್ನು ಗುರುತಿಸಿರುವ ಮುಡಾ ಅಧಿಕಾರಿಗಳು, ಇಂದಿನ ಮಾರುಕಟ್ಟೆ ದರದಲ್ಲಿ ಹರಾಜು ನಡೆಸಲು ನಿರ್ಧರಿಸಿದ್ದಾರೆ. 1987ರಲ್ಲಿ ಮುಡಾದಿಂದ ಕುವೆಂಪುನಗರ, ಶಾರದಾದೇವಿನಗರ, ರಾಮಕೃಷ್ಣನಗರ, ಕ್ಯಾತಮಾರನಹಳ್ಳಿ, ರಾಜೀವ್‌ನಗರ ಒಂದನೇ ಹಂತ, ಎರಡನೇ ಹಂತ, ಹೆಬ್ಬಾಳು ಬಡಾವಣೆಗಳಲ್ಲಿ ಇಡಬ್ಲ್ಯೂಎಸ್‌, ಎಲ್ ಐಜಿ, ಎಂಐಜಿ, ಎಚ್‌ಐಜಿ ಮನೆಗಳನ್ನು ನಿರ್ಮಿಸಲಾಗಿತ್ತು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಸ್ತೆ ಗುಂಡಿ ಮುಚ್ಚೋದ್ಯಾರು? ರಾಜಕೀಯ ನಿರ್ಲಕ್ಷ್ಯಕ್ಕೆ ವಾಹನ ಸವಾರರು ಹೈರಾಣ
ನಂತರ ಮನೆಗಳನ್ನು ಅರ್ಹತೆ ಆಧಾರದ ಮೇಲೆ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿತ್ತು. ಕೆಲವರು ಸಕಾಲಿಕವಾಗಿ ಹಣ ಪಾವತಿಸದೇ ಇದ್ದುದರಿಂದ ಹಂಚಿಕೆಯನ್ನು ರದ್ದುಪಡಿಸಲಾಗಿತ್ತು. ಇದರಿಂದ ಸಾಕಷ್ಟು ಮನೆಗಳು ಖಾಲಿಯಾಗಿದ್ದವು. ಇದನ್ನೇ ಬಂಡವಾಳವಾಗಿಸಿಕೊಂಡ ಕೆಲವರು, ಅಂತಹ ಮನೆಗಳ ನಕಲಿ ದಾಖಲೆ ಸೃಷ್ಟಿಸಿ, ಬೇರೆಯವರಿಗೆ ಬಾಡಿಗೆ ಅಥವಾ ಭೋಗ್ಯಕ್ಕೆ ನೀಡುವ ಮೂಲಕ ಆದಾಯ ಗಳಿಸುತ್ತಿದ್ದರು.

ಈ ಬಗ್ಗೆ ಇದರ ನಡುವೆ ಸಂಘಟನೆ ಮುಖಂಡರೊಬ್ಬರು ಅನಧಿಕೃತವಾಗಿ ವಾಸ ಮಾಡುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಮುಡಾ ಆಯುಕ್ತರಿಗೆ ದೂರು ಕೊಟ್ಟಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಡಾ.ಡಿ.ನಟೇಶ್‌ ಮನೆಯಲ್ಲಿ ವಾಸವಿದ್ದ ಸಂಘಟನೆಯ ಮುಖಂಡನಿಗೆ ನೋಟಿಸ್‌ ನೀಡಿ ಮನೆ ತೆರವುಗೊಳಿಸಿದ್ದರು. ಈ ರೀತಿ ಖಾಲಿ ಇರುವ ಮುಡಾ ಮನೆಗಳಲ್ಲಿ ಅಕ್ರಮವಾಗಿ ವಾಸವಿರುವ ಬಗ್ಗೆ ಅನುಮಾನದಿಂದ ಆಯುಕ್ತರು, ಸಮೀಕ್ಷೆ ನಡೆಸಿ ವರದಿ ನೀಡುವಂತೆ ವಲಯ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಮೈಸೂರಿನಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನು ನಿವೇಶನವಾಗಿ ಪರಿವರ್ತಿಸಿ ಮಾರಾಟ..!
120 ಮನೆಗಳಲ್ಲಿ ಅನಧಿಕೃತ ವಾಸ
ವಲಯವಾರು ಮುಡಾ ತಹಸೀಲ್ದಾರ್‌ ನೇತೃತ್ವದ ಅಧಿಕಾರಗಳ ತಂಡ, ಮುಡಾ ಮನೆಗಳಲ್ಲಿಪರಿಶೀಲನೆ ನಡೆಸಿ 120 ಮನೆಗಳಲ್ಲಿ ಅಕ್ರಮವಾಗಿ ವಾಸವಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. 59 ಇಡಬ್ಲೂಎಸ್‌ ಮನೆ, 45 ಎಲ್ಐಜಿ ಮನೆ, 10 ಎಂಐಜಿ ಮನೆಗಳಲ್ಲಿ ಅತಿಕ್ರಮವಾಗಿ ವಾಸ ಮಾಡುತ್ತಿದ್ದು, ಈ ನಿವಾಸಿಗಳ ಪಟ್ಟಿ ತಯಾರಿಸಲಾಗಿದೆ. ಹರಾಜಿನಲ್ಲಿ 100 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

1997ರಲ್ಲಿ ಮಾರುಕಟ್ಟೆ ದರವು ಇಡಬ್ಲ್ಯೂಎಸ್‌ ಮನೆಗೆ 2 ಲಕ್ಷ, ಎಲ್ಐಜಿಗೆ 4 ಲಕ್ಷ, ಎಂಐಜಿ ಮನೆಗಳಿಗೆ 7 ಲಕ್ಷ ರೂ.ಇತ್ತು .ಆದರೆ, ಈಗಿನ ಮಾರುಕಟ್ಟೆ ದರದಲ್ಲಿ ಇಡಬ್ಲ್ಯೂಎಸ್‌ ಮನೆಗೆ 20ರಿಂದ 25 ಲಕ್ಷ, ಎಲ್ಐಜಿಗೆ 30ರಿಂದ 40 ಲಕ್ಷ ರೂ. ಆಗಲಿದೆ. ಈ ಎಲ್ಲ ಮನೆಗಳನ್ನು ಬಹಿರಂಗವಾಗಿ ಹರಾಜು ಹಾಕಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಪ್ರತಿಯೊಂದು ಮನೆ ಯಾರ ಹೆಸರಿಗೆ ಹಂಚಿಕೆಯಾಗಿತ್ತು. ಈಗ ಯಾರು ವಾಸ ಮಾಡುತ್ತಿದ್ದಾರೆ ಎಂಬುದು ಸೇರಿ ಮನೆಯ ಫೋಟೋ ಸಮಿತಿ ಪ್ರತ್ಯೇಕ ಕಡತಗಳನ್ನು ತಯಾರು ಮಾಡಲಾಗುತ್ತಿದೆ. ಮೂಲ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿದ ಬಳಿಕ, ಅಂತಿಮವಾಗಿ ಹರಾಜು ಪ್ರಕ್ರಿಯೆ ಮಾಡಲಾಗುತ್ತದೆ. ಈಗಾಗಲೇ ವಾಸ ಮಾಡುತ್ತಿರುವವರು ಹರಾಜಿನಲ್ಲಿ ಭಾಗವಹಿಸಿ ಖರೀದಿಸಬಹುದು. ಇಲ್ಲದಿದ್ದರೆ ಅಂತಹವರು ಮನೆಯನ್ನು ಖಾಲಿ ಮಾಡಿಸಲಾಗುತ್ತದೆ ಎನ್ನುತ್ತಾರೆ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್‌.
ಮೈಸೂರು: ಭೂ ಕಬಳಿಕೆದಾರರಿಗೆ ಮುಡಾ ಶಾಕ್, 100 ಕೋಟಿ ರೂ. ಮೌಲ್ಯದ ಭೂಮಿ ವಶಕ್ಕೆ
ಮುಡಾ ನಿರ್ಮಿಸಿರುವ ಮನೆಗಳಲ್ಲಿ ಅಕ್ರಮವಾಗಿ ವಾಸವಿರುವವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. 120 ಮನೆಗಳು ಪತ್ತೆಯಾಗಿದೆ. ದಾಖಲೆ ಪರಿಶೀಲನೆ ವೇಳೆ ಈ ಅತಿಕ್ರಮಿತ ಮನೆಗಳ ಸಂಖ್ಯೆ 150 ದಾಟಬಹುದಾಗಿದೆ. ಈ ಮನೆಗಳ ಹರಾಜಿನಿಂದ 100 ಕೋಟಿ ರೂ. ಆದಾಯದ ನಿರೀಕ್ಷೆ ಇದೆ.
ಡಾ.ಡಿ.ಬಿ.ನಟೇಶ್‌, ಮುಡಾ ಆಯುಕ್ತ

ಯಾವುದೇ ಒತ್ತಡಕ್ಕೆ ಮಣಿಯದೇ ಮುಡಾ ಮನೆಗಳನ್ನು ಸಮೀಕ್ಷೆ ನಡೆಸಿ ಅಕ್ರಮವಾಗಿ ವಾಸವಿರುವವರನ್ನು ಗುರುತಿಸಿ, ತೆರವುಗೊಳಿಸುವ ಮೂಲಕ ಮುಡಾ ಉತ್ತಮ ಕಾರ್ಯ ಮಾಡುತ್ತಿದೆ. ಈ ಮನೆಗಳ ಹರಾಜಿನಿಂದ ಮುಡಾಗೆ ಮತ್ತಷ್ಟು ಆದಾಯ ಬರಲಿದೆ.
ಎಸ್‌ಬಿಎಂ ಮಂಜು, ಮುಡಾ ಸದಸ್ಯ



Read more