Karnataka news paper

ಪುತ್ತೂರು ನೂತನ ವಕೀಲರ ಭವನ ಉದ್ಘಾಟಿಸಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌


ಪುತ್ತೂರು: ಸಮಾಜದಲ್ಲಿ ವ್ಯಾಜ್ಯಗಳಿರುವ ಮನೆ ಕ್ಯಾನ್ಸರ್‌ ಇದ್ದಂತೆ. ಕ್ಯಾನ್ಸರ್‌ ಎಂಬ ವ್ಯಾಜ್ಯವನ್ನು ಸಮಾಜದಿಂದ ತೊಲಗಿಸುವ ಮುಖ್ಯ ಅಗತ್ಯತೆ ಇದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ಹೇಳಿದರು.

ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ಪುತ್ತೂರು ವಕೀಲರ ಸಂಘದ ಆಶ್ರಯದಲ್ಲಿ ಪುತ್ತೂರು ಬನ್ನೂರಿನ ಆನೆಮಜಲಿನಲ್ಲಿ ನೂತನವಾಗಿ ನಿರ್ಮಿಸಿರುವ ವಕೀಲರ ಭವನದ ಉದ್ಘಾಟನೆ ಹಾಗೂ ನೂತನ ನ್ಯಾಯಾಲಯ ಸಂಕೀರ್ಣದ 2ನೇ ಹಂತದ ಮತ್ತು ನ್ಯಾಯಾಧೀಶರ ವಸತಿ ಗೃಹಗಳ ಶಿಲಾನ್ಯಾಸ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಜನರಿಗೆ ಶಾಂತಿ, ಸುವ್ಯವಸ್ಥೆಯ ವ್ಯವಸ್ಥೆ ಇಲ್ಲದಿದ್ದರೆ ಯಾವುದೇ ಕಟ್ಟಡ ಉಪಯೋಕ್ಕೆ ಬಾರದು. ಈ ನಿಟ್ಟಿನಲ್ಲಿ ಜನರಿಗೆ ಶಾಂತಿ, ಸುವ್ಯವಸ್ಥೆ ಒದಗಿಸುವುದು ನ್ಯಾಯಾಲಯದ ಮೂಲ ಕರ್ತವ್ಯ ಆಗಬೇಕು. ಪ್ರಸ್ತುತ ಕರ್ನಾಟಕ ಸರಕಾರ ನ್ಯಾಯಾಲಯಕ್ಕೆ ಸಂಬಂಧಿಸಿದ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತಿದ್ದು, ಕರ್ನಾಟಕ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಡಿ.26-ಜ.1 ತನಕ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕೆ. ಸೋಮಶೇಖರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ವಕೀಲರು ಬುದ್ಧಿವಂತಿಕೆ ಜತೆ ಹೃದಯವಂತರಾಗಿರಬೇಕು. ದ.ಕ. ಸಾಕಷ್ಟು ಹಿರಿಯ ವಕೀಲರನ್ನು ನೀಡಿದೆ. ಸಮಾಜಕ್ಕೆ ಅವರ ಉಪಯೋಗ ಸಾಕಷ್ಟಿದೆ. ಸತ್ಯ ಎಂಬುದು ನ್ಯಾಯಾಧೀಶರ ಕೈಯಲ್ಲಿದೆ. ಅದನ್ನು ಯಾವಾಗಲು ಎತ್ತಿ ಹಿಡಿಯುವಲ್ಲಿ ಪ್ರಯತ್ನಿಸಬೇಕು ಎಂದರು.

ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಆಧ್ಯಾತ್ಮಿಕ ಬದುಕಿಗೆ ನ್ಯಾಯ ನೀಡಿದವರು ಅಬ್ದುಲ್‌ ನಜೀರ್‌ ಅವರು. ಅವರ ಭಾಷಾ ಕಳಕಳಿಯಿಂದ ಪುತ್ತೂರಿನಲ್ಲಿ ಕಟ್ಟಡ ನಿರ್ಮಾಣವಾಗಿದೆ. ಮೂಲ ಸೌಕರ್ಯಗಳ ಜತೆ ನ್ಯಾಯ ನೀಡುವ ಕೆಲಸವನ್ನು ಅವರು ಮಾಡಿದ್ದಾರೆ ಎಂದರು.
ಹೊಸ ವರ್ಷಕ್ಕೆ ನೈಟ್‌ ಕರ್ಫ್ಯೂ ಹಿಡಿತ; ಕರಾವಳಿಯಲ್ಲಿ ಭೂತಕೋಲ, ಯಕ್ಷಗಾನಕ್ಕೂ ಹೊಡೆತ
ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ, ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಮೊಹಮ್ಮದ್‌ ನವಾಜ್‌, ಎಸ್‌. ವಿಶ್ವಜಿತ್‌ ಶೆಟ್ಟಿ, ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಅರುಣ್‌ ಶ್ಯಾಮ್‌, ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಲ್‌.ಶ್ರೀನಿವಾಸ ಬಾಬು, ರಾಜ್ಯ ವಕೀಲರ ಪರಿಷತ್‌ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಪಿ.ಪಿ.ಹೆಗ್ಡೆ, ಶಿವಮೊಗ್ಗ ಲೋಕೋಪಯೋಗಿ ಇಲಾಖೆ ಕೇಂದ್ರ ವಲಯದ ಮುಖ್ಯ ಅಭಿಯಂತರ ಕಾಂತರಾಜ್‌ ಟಿ.ಟಿ. ಉಪಸ್ಥಿತರಿದ್ದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ಪೈ ಬಿ. ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ ಎನ್‌.ಎಸ್‌. ವಂದಿಸಿದರು. ಹಿರಿಯ ವಕೀಲ, ಕಾರ್ಯಕ್ರಮ ಸಂಯೋಜಕ ಕೆ.ಆರ್‌.ಆಚಾರ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್‌ ರೈ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ವರಿ ಮತ್ತು ತಂಡದವರು ನಾಡಗೀತೆ ಹಾಡಿದರು.



Read more