Karnataka news paper

ರಜನಿಕಾಂತ್‌ ಹುಟ್ಟುಹಬ್ಬ: ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರ ಶುಭಹಾರೈಕೆ


ಬೆಂಗಳೂರು: ಅಭಿಮಾನಿಗಳ ನೆಚ್ಚಿನ ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಭಾನುವಾರ ಹುಟ್ಟುಹಬ್ಬದ ಸಂಭ್ರಮ.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ನಟ ಮಹೇಶ್ ಬಾಬು, ವಿಜಯ್ ಸೇತುಪತಿ ಟ್ವೀಟ್ ಮಾಡಿ ಶುಭಕೋರಿದ್ದಾರೆ.

ನಟಿ ಮಾಧುರಿ ದೀಕ್ಷಿತ್ ನೇನೆ ಮತ್ತು ಬಾಲಿವುಡ್, ತಮಿಳು ಚಿತ್ರರಂಗ ಹಾಗೂ ಸಿನಿಮಾ ಕ್ಷೇತ್ರದ ವಿವಿಧ ಮಂದಿ ಟ್ವೀಟ್ ಮೂಲಕ ಶುಭಕೋರಿದ್ದಾರೆ.

71ನೇ ವರ್ಷಕ್ಕೆ ಕಾಲಿರಿಸಿರುವ ನಟ ರಜನಿಕಾಂತ್ ಅವರ ಇತ್ತೀಚಿನ ಚಿತ್ರ ಅಣ್ಣಾತ್ತೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ.

ಅವರಿಗೆ ಫಿಲಂಫೇರ್, ಅತ್ಯುತ್ತಮ ನಟ, ಪದ್ಮ ಪ್ರಶಸ್ತಿ ಹಾಗೂ ದಾದಾಸಾಹೇಬ್ ಫಾಲ್ಕೆ ಗೌರವ ಸಹಿತ ವಿವಿಧ ಪ್ರಶಸ್ತಿ ಸಂದಿವೆ.

1975ರಿಂದ ರಜನಿಕಾಂತ್ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ರಜನಿ ಹುಟ್ಟುಹಬ್ಬ: 71 ಅಡಿ ಉದ್ದದ ಕೇಕ್ ಕತ್ತರಿಸಿದ ಅಭಿಮಾನಿಗಳು
 



Read More…Source link