Source : The New Indian Express
ಲಂಡನ್: 40 ವರ್ಷಗಳ ಹಿಂದೆ ಉತ್ತರಪ್ರದೇಶದ ಹಳ್ಳಿಯೊಂದರಿಂದ ಕಳವಾಗಿದ್ದ ದೇವರ ವಿಗ್ರಹ ಲಂಡನ್ ನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಅಲ್ಲಿನ ಭಾರತೀಯ ಹೈಕಮಿಷನ್ ಮಾಹಿತಿ ನೀಡಿದೆ.
ಇದನ್ನೂ ಓದಿ: 108 ವರ್ಷಗಳ ನಂತರ ಕೆನಡಾದಿಂದ ತವರಿಗೆ ಮರಳಿದ ಅನ್ನಪೂರ್ಣ ದೇವಿಯ ವಿಗ್ರಹ ವಾರಣಾಸಿಯಲ್ಲಿ ಪ್ರತಿಷ್ಠಾಪನೆ
ಭಾರತೀಯ ಸನಾತನ ಧರ್ಮದಲ್ಲಿ ಸ್ತ್ರೀ ಶಕ್ತಿಯ ಸಂಕೇತವಾದ ಯೋಗಿನಿ ವಿಗ್ರಹ 40 ವರ್ಷಗಳ ಹಿಂದೆ ಕಳವಾಗಿತ್ತು. ಈ ವಿಗ್ರಹ ಲಂಡನ್ ನಲ್ಲಿ ಪತ್ತೆಯಾಗಿದ್ದು, ಅಲ್ಲಿನ ಅಧಿಕಾರಿಗಳು ಅದನ್ನು ಭಾರತಕ್ಕೆ ಮರಳಿಸಲಿದ್ದಾರೆ.
ಇದನ್ನೂ ಓದಿ: ಒಡಿಶಾದ ಕೊನಾರ್ಕ್ ದೇಗುಲದಂತೆ, ರಾಮನ ವಿಗ್ರಹಕ್ಕೆ ಸೂರ್ಯರಶ್ಮಿ ಸ್ಪರ್ಶಿಸುವಂತೆ ರಾಮಮಂದಿರ ನಿರ್ಮಾಣ!
ಇಂಗ್ಲೆಂಡಿನ ಹಳ್ಳಿಯೊಂದರಲ್ಲಿ ವಾಸವಿದ್ದ ವೃದ್ಧ ದಂಪತಿಗಳ ಬಳಿ ಈ ವಿಗ್ರಹ ಪತ್ತೆಯಾಗಿದೆ. ವೃದ್ಧ ಪತಿಯ ಮರಣಾನಂತರ ಆತನ ಬಳಿಯಿದ್ದ ಈ ವಿಗ್ರಹವನ್ನು ಪತ್ನಿ ಹರಾಜಿಗೆ ಇಟ್ಟಿದ್ದರು.
ಆ ಸಮಯದಲ್ಲಿ ಭಾರತೀಯ ಸಂಸ್ಕೃತಿಯ ಪರಿಚಯವಿದ್ದ ಲಾಯರ್ ಓರ್ವರಿಗೆ ಆಡು ಮುಖದ ವಿಗ್ರಹದ ಕುರಿತು ಕುತೂಹಲ ಉಂಟಾಗಿ ಅದರ ಬಗ್ಗೆ ತಿಳಿದುಕೊಳ್ಳಲು ಮುಂದಾದಾಗ ಅದು ಭಾರತದಲ್ಲಿ ಕಳವಾಗಿದ್ದ ವಿಚಾರ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಚಿನ್ನದ ಗಟ್ಟಿ ಕದ್ದ ಕೆಲಸಗಾರನ ಬಂಧನ, 4 ಕೋಟಿ ಮೌಲ್ಯದ 11.2 ಕೆ.ಜಿ. ಚಿನ್ನ ವಶ