Karnataka news paper

ವಿರೋಧಿಗಳನ್ನು ನೋಡಲಾಗುತ್ತಿಲ್ಲ, ಅದಕ್ಕೆ ಕಣ್ಣು ಮುಚ್ಚಿಕೊಂಡಿದ್ದೇನೆ: ಇಲಿಯಾನಾ


ಬೆಂಗಳೂರು: ನಟಿ ಇಲಿಯಾನಾ ಡಿಕ್ರೂಜ್ ಇತ್ತೀಚೆಗೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದು, ಅಲ್ಲಿಂದ ವಿವಿಧ ಪೋಸ್‌ನ ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದರು.

ಇಲಿಯಾನಾ ಅವರ ಬೀಚ್ ಮೋಹ ಅಭಿಮಾನಿಗಳಿಗೆ ಕೂಡ ಇಷ್ಟವಾಗಿತ್ತು. ಅದಕ್ಕೆ ಪೂರಕವಾಗಿ ಅವರು ಹಲವು ಫೋಟೊಗಳನ್ನು ಹಂಚಿಕೊಂಡಿದ್ದರು.

ವೀಕೆಂಡ್ ಮೂಡ್ ಎನ್ನುವ ಹೆಸರಿನಲ್ಲಿ ಬೀಚ್‌ನಲ್ಲಿ ಇರುವ ಫೋಟೊಗಳನ್ನು ಇಲಿಯಾನಾ ಪೋಸ್ಟ್ ಮಾಡಿದ್ದಾರೆ.

ಅದರ ಜತೆಗೇ, ಮತ್ತೊಂದು ಫೋಟೊ ಪೋಸ್ಟ್ ಮಾಡಿರುವ ಅವರು, ಅದರಲ್ಲಿ ಕಣ್ಣು ಮುಚ್ಚಿಕೊಂಡಿದ್ದಾರೆ. ಅದಕ್ಕೆ ನನಗೆ ನನ್ನ ವಿರೋಧಿಗಳನ್ನು ನೋಡಲಾಗುತ್ತಿಲ್ಲ, ಹೀಗಾಗಿ ಕಣ್ಣು ಮುಚ್ಚಿಕೊಂಡಿದ್ದೇನೆ ಎಂದು ಅಡಿಬರಹ ನೀಡಿದ್ದಾರೆ.

ಇಲಿಯಾನಾ ಅವರ ಪೋಸ್ಟ್ ಅನ್ನು ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದಾರೆ.





Read More…Source link