Karnataka news paper

ಹರಿಯಾಣ ಸ್ಟೀಲರ್ಸ್‌, ಪಟನಾ ಪೈರೇಟ್ಸ್‌ಗೆ ಒಲಿದ ಜಯ!


ಹೈಲೈಟ್ಸ್‌:

  • ಬೆಂಗಳೂರಿನಲ್ಲಿ ನಡೆಯುತ್ತಿರುವ 2021-22ರ ಸಾಲಿನ ಪ್ರೊ ಕಬಡ್ಡಿ ಲೀಗ್‌ ಟೂರ್ನಿ.
  • ತೆಲುಗು ಟೈಟನ್ಸ್‌ ಎದುರು ರೋಚಕ ಜಯ ದಾಖಲಿಸಿದ ಹರಿಯಾಣ ಸ್ಟೀಲರ್ಸ್‌.
  • ಪುಣೇರಿ ಪಲ್ಟನ್‌ ಎದುರು 3 ಬಾರಿಯ ಚಾಂಪಿಯನ್ಸ್‌ ಪೈರೇಟ್ಸ್‌ಗೆ ಗೆಲುವು.

ಬೆಂಗಳೂರು: ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಮೀತು (12 ಅಂಕ) ಮತ್ತು ರೋಹಿತ್‌ ಗುಲಿಯಾ (8 ಅಂಕ) ಅವರ ಉತ್ತಮ ಆಟದ ನೆರವಿನಿಂದ ಹರಿಯಾಣ ಸ್ಟೀಲರ್ಸ್‌ 39-37 ಅಂಕಗಳಿಂದ ತೆಲುಗು ಟೈಟನ್ಸ್‌ ತಂಡವನ್ನು ಸೋಲಿಸಿ ಟೂರ್ನಿಯಲ್ಲಿಖಾತೆ ತೆರೆಯಿತು.ಆದರೆ ಟೈಟನ್ಸ್‌ 2ನೇ ಸೋಲಿಗೆ ತುತ್ತಾಯಿತು. ಪಂದ್ಯದ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಹರಿಯಾಣ ದ್ವಿತೀಯಾರ್ಧದಲ್ಲೂ ಹಿಡಿತ ಸಾಧಿಸಿತು.

ಪಟನಾ ಪೈರೇಟ್ಸ್‌ ಪರಾಕ್ರಮ
ಆಲ್‌ರೌಂಡ್‌ ಪ್ರದರ್ಶನ ನೀಡಿದ 3 ಬಾರಿಯ ಚಾಂಪಿಯನ್‌ ಪಟನಾ ಪೈರೇಟ್ಸ್‌ ಪ್ರೊ ಕಬಡ್ಡಿ ಲೀಗ್‌ 8ನೇ ಆವೃತ್ತಿಯ 17ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡವನ್ನು ಸೋಲಿಸಿ ಜಯದ ಹಳಿಗೆ ಮರಳಿದೆ.

ವೈಟ್‌ಫೀಲ್ಡ್‌ನ ಶೆರಟಾನ್‌ ಗ್ರ್ಯಾಂಡ್‌ ಹೋಟೆಲ್‌ ಸಭಾಂಗಣದಲ್ಲಿಮಂಗಳವಾರ ನಡೆದ ಮೊದಲ ಪಂದ್ಯದಲ್ಲಿಕನ್ನಡಿಗ ಪ್ರಶಾಂತ್‌ ಕುಮಾರ್‌ ರೈ ಅವರ ಸಾರಥ್ಯದ ಪಟನಾ 38-26 ಅಂಕಗಳಿಂದ ವಿಶಾಲ್‌ ಭಾರದ್ವಾಜ್‌ ಸಾರಥ್ಯದ ಪುಣೇರಿ ತಂಡಕ್ಕೆ ಸೋಲುಣಿಸಿತು. ಇದರೊಂದಿಗೆ ಆಡಿದ 3 ಪಂದ್ಯಗಳಿಂದ ಒಟ್ಟು 11 ಅಂಕ ಕಲೆಹಾಕಿದ ಪೈರೇಟ್ಸ್‌ಅಂಕಪಟ್ಟಿಯಲ್ಲಿ2ನೇ ಸ್ಥಾನಕ್ಕೆ ಜಿಗಿಯಿತು.

ಯುಪಿ ಯೋಧಾ ಪಡೆಯ ಪ್ರತಿರೋಧ ಹತ್ತಿಕ್ಕಿದ ಪ್ಯಾಂಥರ್ಸ್‌!

ಮೊದಲಾರ್ಧಕ್ಕೂ ಮುನ್ನ ಉಭಯ ತಂಡಗಳು ತಲಾ 14-14 ಅಂಕಗಳಿಂದ ಸಮಬಲದ ಹೋರಾಟ ನೀಡಿದೆವು. ಆದರೆ ದ್ವಿತೀಯಾರ್ಧದಲ್ಲಿರೇಡಿಂಗ್‌ ಮತ್ತು ಟ್ಯಾಕಲ್‌ನಲ್ಲಿಚುರುಕಿನ ಪ್ರದರ್ಶನ ನೀಡಿದ ಪಟನಾ ಪಂದ್ಯದ ಕೊನೆಯವರೆಗೂ ಮೇಲುಗೈ ಕಾಯ್ದುಕೊಂಡಿತು. ಪಟನಾ ಪರ ರೇಡರ್‌ ಸಚಿನ್‌ 10 ಅಂಕ ಕಲೆಹಾಕಿದರೆ, ನಾಯಕ ಪ್ರಶಾಂತ್‌ 5 ಅಂಕ ಕೊಡುಗೆ ನೀಡಿದರು. ಅತ್ತ ಅಸ್ಲಾಮ್‌ ಇನಾಮ್ದಾರ್‌ (6 ಅಂಕ) ಮತ್ತು ಸೋಂಬಿರ್‌ (5 ಅಂಕ) ಹೋರಾಟ ನೀಡಿದರೂ ಹಿಂದಿನ ಆವೃತ್ತಿಗಳ ಸ್ಟಾರ್‌ ರೇಡರ್‌ ರಾಹುಲ್‌ ಚೌಧರಿ ಕೇವಲ 1 ಅಂಕಕ್ಕೆ ಸೀಮಿತಗೊಂಡಿದ್ದು ಪುಣೇರಿ ಪಲ್ಟನ್‌ ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಯಿತು.

ಬುಧವಾರದ ಪಂದ್ಯಗಳು
ದಬಾಂಗ್‌ ದಿಲ್ಲಿ- ಬೆಂಗಾಲ್‌ ವಾರಿಯರ್ಸ್‌
ಪಂದ್ಯ ಆರಂಭ (ರಾತ್ರಿ 7.30)
ಯು.ಪಿ. ಯೋಧಾ – ಗುಜರಾತ್‌ ಜಯಂಟ್ಸ್‌
ಪಂದ್ಯ ಆರಂಭ (ರಾತ್ರಿ 8.30)

‘ಪವನ್‌ ಪವರ್‌’, ಬೆಂಗಾಲ್‌ ಎದುರು ರೋಚಕ ಜಯ ದಾಖಲಿಸಿದ ಬುಲ್ಸ್‌!

ಬೆಂಗಳೂರು ಬುಲ್ಸ್‌ ಪಂದ್ಯಗಳ ವೇಳಾಪಟ್ಟಿ
ಮೊದಲ ಚರಣದ ಹನ್ನೊಂದು ಪಂದ್ಯಗಳ ವಿವರ
ಬೆಂಗಳೂರು ಬುಲ್ಸ್‌ vs ಯು ಮುಂಬಾ (ಡಿ.22)
ಬೆಂಗಳೂರು ಬುಲ್ಸ್‌ vs ತಮಿಳ್‌ ತಲೈವಾಸ್‌ (ಡಿ.24)
ಬೆಂಗಳೂರು ಬುಲ್ಸ್‌ vs ಬೆಂಗಾಲ್‌ ವಾರಿಯರ್ಸ್‌ (ಡಿ.26)
ಬೆಂಗಳೂರು ಬುಲ್ಸ್‌ vs ಹರಿಯಾಣ ಸ್ಟೀಲರ್ಸ್‌ (ಡಿ.30)
ಬೆಂಗಳೂರು ಬುಲ್ಸ್‌ vs ತೆಲುಗು ಟೈಟನ್ಸ್‌ (ಜ.01)
ಬೆಂಗಳೂರು ಬುಲ್ಸ್‌ vs ಪುಣೇರಿ ಪಲ್ಟನ್‌ (ಜ.02)
ಬೆಂಗಳೂರು ಬುಲ್ಸ್‌ vs ಜೈಪುರ ಪಿಂಕ್‌ ಪ್ಯಾಂಥರ್ಸ್‌ (ಜ.06)
ಬೆಂಗಳೂರು ಬುಲ್ಸ್‌ vs ಯುಪಿ ಯೋಧಾ (ಜ.09)
ಬೆಂಗಳೂರು ಬುಲ್ಸ್‌ vs ದಬಾಂಗ್‌ ಡೆಲ್ಲಿ (ಜ.12)
ಬೆಂಗಳೂರು ಬುಲ್ಸ್‌ vs ಗುಜರಾತ್‌ ಜಯಂಟ್ಸ್‌ (ಜ.14)
ಬೆಂಗಳೂರು ಬುಲ್ಸ್‌ vs ಪಟನಾ ಪೈರೇಟ್ಸ್‌ (ಜ.16)
ಟೂರ್ನಿಯ ಎರಡನೇ ಚರಣದಲ್ಲಿಯೂ ಬೆಂಗಳೂರು ತಂಡ 11 ಲೀಗ್‌ ಪಂದ್ಯಗಳನ್ನು ಆಡಲಿದ್ದು, ನಂತರ ನಾಕ್‌ಔಟ್‌ ಹಂತದ ಪಂದ್ಯಗಳು ಜರುಗಲಿವೆ.



Read more