Karnataka news paper

ಸಾರ್ವಜನಿಕರ ಗಮನಕ್ಕೆ.. ಬೆಂಗಳೂರು ನಗರದ ಹಲವೆಡೆ ಬುಧವಾರ ಕಾವೇರಿ ನೀರು ಬರಲ್ಲ..!


ಹೈಲೈಟ್ಸ್‌:

  • ಬೆಂಗಳೂರು ಜಲ ಮಂಡಳಿಯಿಂದ ತುರ್ತು ನಿರ್ವಹಣಾ ಕಾಮಗಾರಿ
  • ಡಿಸೆಂಬರ್ 29 ಮುಂಜಾನೆ 3 ಗಂಟೆಯಿಂದ 9 ಗಂಟೆವರೆಗೆ ನೀರು ಪೂರೈಕೆ ಇಲ್ಲ
  • ಜಲಮಂಡಳಿ ಕಾಮಗಾರಿ ಹಿನ್ನೆಲೆಯಲ್ಲಿ ನೀರು ಪೂರೈಕೆ ಸ್ಥಗಿತ

ಬೆಂಗಳೂರು: ಬೆಂಗಳೂರು ಜಲ ಮಂಡಳಿಯು ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 29 ಬುಧವಾರದಂದು ಮುಂಜಾನೆ 3 ಗಂಟೆಯಿಂದ 9 ಗಂಟೆವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಕೆ. ಆರ್‌. ಪುರಂನಲ್ಲಿ ಜೋಡಣಾ ಕಾರ್ಯ ಹಾಗೂ ಟಿ. ಕೆ. ಹಳ್ಳಿಯಲ್ಲಿರುವ 2,500 ಮಿ. ಮೀ. ವ್ಯಾಸದ ಬಟರ್‌ ಪ್ಲೈ ವಾಲ್ವ್‌ನ 250 ಮಿ. ಮೀ. ವ್ಯಾಸದ ತುಕ್ಕು ಹಿಡಿದ ಬೈಪಾಸ್‌ ಮಾರ್ಗವನ್ನು ಬದಲಾಯಿಸುವ ಕಾಮಗಾರಿಯನ್ನು ಜಲಮಂಡಳಿ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.

ಯಲಹಂಕ, ಜಕ್ಕೂರು, ಬ್ಯಾಟರಾಯನ ಪುರ, ವಿದ್ಯಾರಣ್ಯ ಪುರ, ಬಿಇಎಲ್‌ ಲೇಔಟ್‌, ಎಚ್‌ಎಂಟಿ ಲೇಔಟ್‌, ದಾಸರಹಳ್ಳಿ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ. ದಾಸರಹಳ್ಳಿ, ಪೀಣ್ಯ, ರಾಜಗೋಪಾಲ ನಗರ, ಚೊಕ್ಕಸಂದ್ರ, ಹೆಗ್ಗನಹಳ್ಳಿ, ಎಚ್‌ಎಂಟಿ ವಾರ್ಡ್‌, ನಂದಿನಿ ಲೇಔಟ್‌, ಆರ್‌. ಆರ್‌. ನಗರ, ಕೆಂಗೇರಿ, ಉಲ್ಲಾಳ, ಅನ್ನಪೂರ್ಣೇಶ್ವರಿ ನಗರ, ಪಾಪರೆಡ್ಡಿ ಪಾಳ್ಯ, ಮಲ್ಲತ್ತಹಳ್ಳಿ, ಕೆಂಗುಂಟೆ, ಜಗಜ್ಯೋತಿ ಲೇಔಟ್‌, ಜ್ಞಾನಭಾರತಿ ಲೇಔಟ್‌, ಐಡಿಯಲ್‌ ಹೋಮ್ಸ್‌, ಬಿಇಎಂಎಲ್‌ ಲೇಔಟ್‌, ಪಟ್ಟಣಗೆರೆ, ಚೆನ್ನಸಂದ್ರ, ಕೊತ್ತನೂರು ದಿಣ್ಣೆ, ಜೆ. ಪಿ. ನಗರ 6, 7 ಮತ್ತು 8ನೇ ಹಂತ, ವಿಜಯ ಬ್ಯಾಂಕ್‌ ಲೇಔಟ್‌, ಕೂಡ್ಲು, ಅಂಜನಾಪುರ, ಬೊಮ್ಮನಹಳ್ಳಿ, ಕೆ. ಆರ್‌. ಪುರ, ರಾಮಮೂರ್ತಿ ನಗರ, ಮಹದೇವ ಪುರ, ಎ. ನಾರಾಯಣಪುರ, ಮಾರತ್‌ ಹಳ್ಳಿ, ಹೂಡಿ, ವೈಟ್‌ ಫೀಲ್ಡ್‌, ನಾಗರಬಾವಿ, ಜಿಕೆವಿಕೆ, ಸಂಜಯನಗರ, ನ್ಯೂ ಬಿಇಎಲ್‌ ರಸ್ತೆ, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಜನವರಿ 9ರಿಂದ ಮೇಕೆದಾಟು To ಬೆಂಗಳೂರು ಪಾದಯಾತ್ರೆ: ಪಕ್ಷಾತೀತವಾಗಿ ಭಾಗಿಯಾಗಲು ಡಿಕೆಶಿ ಮನವಿ
ಹಾಗೆಯೇ, ಎಚ್‌ಬಿಆರ್‌ ಲೇಔಟ್‌, ದೊಮ್ಮಲೂರು, ಬನ್ನೇರುಘಟ್ಟ ರಸ್ತೆ, ಜಂಬೂ ಸವಾರಿ ದಿಣ್ಣೆ, ಲಗ್ಗೆರೆ, ಶ್ರೀಗಂಧದ ಕಾವಲ್‌, ಟೆಲಿಕಾಂ ಲೇಔಟ್‌, ಶ್ರೀನಿವಾಸ ನಗರ, ಬಾಹುಬಲಿ ನಗರ, ಜಾಲಹಳ್ಳಿ, ಏರೋ ಎಂಜಿನ್‌, ಒಎಂಬಿಆರ್‌, ಬೊಮ್ಮನಹಳ್ಳಿ, ಅರಕೆರೆ, ಬಿಎಚ್‌ಇಎಲ್‌ ಲೇಔಟ್‌, ಸುಂಕದಕಟ್ಟೆ, ಬ್ಯಾಡರ ಹಳ್ಳಿ, ಸರ್‌ ಎಂ. ವಿ. ಲೇಔಟ್‌, ಕೊಟ್ಟಿಗೆ ಪಾಳ್ಯ, ಎಲ್‌ಐಸಿ ಲೇಔಟ್‌, ನಾಗದೇವನಹಳ್ಳಿ, ಮೈಸೂರು ರಸ್ತೆ, ಶಿರ್ಕೆ, ಚಿಕ್ಕಗೊಲ್ಲರ ಹಟ್ಟಿ, ಸುಬ್ಬಣ್ಣ ಗಾರ್ಡನ್‌, ನಾಯಂಡ ಹಳ್ಳಿ, ಕಾಮಾಕ್ಷಿ ಪಾಳ್ಯ, ರಂಗನಾಥಪುರ, ಗೋವಿಂದರಾಜ ನಗರ, ಕೆಎಚ್‌ಬಿ ಕಾಲೊನಿ, ಮೂಡಲ ಪಾಳ್ಯ, ಆದರ್ಶ ನಗರ, ಬಿಡಿಎ ಲೇಔಟ್‌, ಮುನೇಶ್ವರ ನಗರ, ಕೊಡಿಗೇ ಹಳ್ಳಿ, ಅಮೃತ ಹಳ್ಳಿ, ಕೋಗಿಲು, ಜೆ.ಪಿ.ಪಾರ್ಕ್, ಯಶವಂತಪುರ, ಸುದ್ದಗುಂಟೆಪಾಳ್ಯ, ಕಸವನಹಳ್ಳಿ, ಕೋನೇನ ಅಗ್ರಹಾರ, ಸುಧಾಮನಗರ, ಮುರುಗೇಶಪಾಳ್ಯ, ಎಚ್‌ಆರ್‌ಬಿಆರ್‌ ಲೇಔಟ್‌, ನಾಗವಾರ, ಬಾಲಾಜಿ ಲೇಔಟ್‌, ಬಿಜಿಎಸ್‌ ಲೇಔಟ್‌, ಎಸ್‌ಬಿಎಂ ಕಾಲೊನಿ, ಬಿಟಿಎಸ್‌ ಲೇಔಟ್‌, ಸಾರ್ವಭೌಮನಗರ, ಹುಳಿಮಾವು, ಬಂಡೆಪಾಳ್ಯ, ಸರಸ್ವತಿಪುರಂ, ರಾಘವೇಂದ್ರ ಲೇಔಟ್‌, ಸಿಂಡಿಕೇಟ್‌ ಬ್ಯಾಂಕ್‌ ಕಾಲೊನಿ, ರಾಮಯ್ಯ ಲೇಔಟ್‌, ಪ್ರಗತಿ ಲೇಔಟ್‌, ಸಿಲ್ಕ್ ಬೋರ್ಡ್‌ ಕಾಲೊನಿ, ಮಂಗಮ್ಮನಪಾಳ್ಯ, ಸಿಂಗಸಂದ್ರ, ದೇವರಚಿಕ್ಕನಹಳ್ಳಿ, ಲಕ್ಷ್ಮಿನಾರಾಯಣಪುರ, ಸೋಮಸುಂದರಪಾಳ್ಯ, ದೊಡ್ಡನೆಕ್ಕುಂದಿ, ಗರುಡಾಚಾರ್‌ ಪಾಳ್ಯ, ಸಪ್ತಗಿರಿ ಲೇಔಟ್‌, ಮುನ್ನೇಕೊಳಾಲ, ಇಸ್ರೊ ಲೇಔಟ್‌, ಬೃಂದಾವನ ನಗರ, ತಿಗಳರಪಾಳ್ಯ, ಅಕ್ಷಯನಗರ, ರಮೇಶ್‌ನಗರ, ಅನ್ನಸಂದ್ರಪಾಳ್ಯ, ಪಟಾಲಮ್ಮ ಲೇಔಟ್‌, ಗಾಯತ್ರಿ ಲೇಔಟ್‌, ಮಂಜುನಾಥನಗರ, ರಾಮಾಂಜನೇಯ ಲೇಔಟ್‌, ಮಾರೇನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ​115 ಹಳ್ಳಿಗಳಲ್ಲಿ ಕೊಳವೆ ಬಾವಿ ನೀರು ಬಳಕೆಗೆ ಯೋಗ್ಯವಲ್ಲ..!



Read more