Karnataka news paper

ಬಿಜೆಪಿ ಮಾಜಿ ಶಾಸಕನಿಗೆ ಚಪ್ಪಲಿ ತೋರಿಸಿದ ಕಾಂಗ್ರೆಸ್ ಶಾಸಕ: ವಿಡಿಯೊ ವೈರಲ್


ಹಗರಿಬೊಮ್ಮನಹಳ್ಳಿ: ಇಲ್ಲಿನ ಪುರಸಭೆ ಚುನಾವಣೆಯ ಮತಗಟ್ಟೆಯೊಂದರ ಬಳಿ ಸೋಮವಾರ ಕಾಂಗ್ರೆಸ್ ಶಾಸಕ ಎಲ್.ಬಿ.ಪಿ ಭೀಮನಾಯ್ಕ ಅವರು ಬಿಜೆಪಿಯ ಮಾಜಿ ಶಾಸಕ ಕೆ.ನೇಮಿರಾಜನಾಯ್ಕ ಅವರಿಗೆ ಚಪ್ಪಲಿ ತೋರಿಸಿದ ವಿಡಿಯೊ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ವೈರಲ್ ಆಗಿದೆ.

ಪಟ್ಟಣದ ರಾಮನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿದ್ದ 20 ಮತ್ತು 21ನೇ ಮತಗಟ್ಟೆಯ ಬಳಿ ಶಾಸಕ ಮತ್ತು ಮಾಜಿ ಶಾಸಕರು ಹಾಗೂ ಬೆಂಬಲಿಗರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ಸ್ಥಳದಲ್ಲಿ ಆತಂಕ ಸೃಷ್ಠಿಯಾಗಿತ್ತು.

ಎರಡೂ ಪಕ್ಷಗಳ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು. ಈ ಸಂದರ್ಭದಲ್ಲಿ ಲಘು ಲಾಠಿ ಪ್ರಹಾರ ಕೂಡ ನಡೆದಿತ್ತು.

ಈ ಘಟನೆ ಕುರಿತಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶಾಸಕ ಮಾಜಿ ಶಾಸಕ ಹಾಗೂ ಅವರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೆ ವಿಡಿಯೊ ವೈರಲ್ ಆಗಿದೆ.

 



Read more from source