ನೂತನವಾಗಿ ನಿರ್ಮಾಣವಾಗಿರೋ ಪ್ರಾಣಿಪ್ರಿಯರನ್ನ ಕೈಬೀಸಿ ಕರೆಯಲಿದೆ.
ಮೃಗಾಲಯದಲ್ಲಿ ಗೊರಿಲ್ಲಾ ಮನೆ ಉದ್ಘಾಟನೆ ಮಾಡಲಾಗಿದ್ದು ಗೊರಿಲ್ಲಾಗಳನ್ನ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಗೊರಿಲ್ಲಾಗಳ ಸಾರ್ವಜನಿಕ ವೀಕ್ಷಣೆಗೆ ವರ್ಚ್ಯುಯಲ್ ಮೂಲಕ ಸಿಎಂ ಉದ್ಘಾಟಿಸಿದರು.
ಇನ್ಪೋಸಿಸ್ ವತಿಯಿಂದ ಸಿಎಸ್ ಆರ್ ಅನುದಾನದಲ್ಲಿ ಗೊರಿಲ್ಲಾ ಮನೆ ನಿರ್ಮಾಣವಾಗಿದ್ದು, ಜರ್ಮನಿಯಿಂದ ಗೋರಿಲ್ಲಾಗಳನ್ನು ತರಸಿಕೊಳ್ಳಲಾಗಿದೆ.ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್ ಆರ್ ಮಹದೇವಸ್ವಾಮಿ, ಡಿಸಿ ಬಗಾದಿ ಗೌತಮ್, ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ಸೇರಿ ಹಲವರು ಭಾಗಿಯಾಗಿದ್ದರು. ಮೈಸೂರು ಮೃಗಾಲಯದ ನಿರ್ವಹಣೆ ಬಗ್ಗೆ ಸುಧಾಮೂರ್ತಿ ಅವರು ಮೆಚ್ಚುಗೆ ವ್ಯಕ್ಯಪಡಿಸಿದ್ದಾರೆ.
ಗೊರಿಲ್ಲಾ ಇರೋ ಭಾರತದ ಏಕೈಕ ಮೃಗಾಲಯ..!
ಮೈಸೂರಿಗೆ ಬನ್ನಿ, ಗೊರಿಲ್ಲಾ ನೋಡಿ. ಗೋರಿಲ್ಲಾ ಹೊಂದಿರುವ ದೇಶದ ಏಕೈಕ ಝೂ ಮೈಸೂರು ಮೃಗಾಲಯ. ಜರ್ಮನಿಯಿಂದ ತರಿಸಿಕೊಂಡಿದ್ದ ಅಣ್ಣ-ತಮ್ಮ ಗೋರಿಲ್ಲಾಗಳು ಸದ್ಯ ಜನರನ್ನ ಆಕರ್ಷಿಸುತ್ತಿದೆ. ಇನ್ಫೋಸಿಸ್ ಫೌಂಡೇನ್‌ನ ಸಿಎಸ್ಆರ್ ಅನುದಾನದಲ್ಲಿ ಗೊರಿಲ್ಲಾ ಮನೆ ನಿರ್ಮಾಣವಾಗಿದೆ.
ಜರ್ಮನಿಯ ಆಲ್ ವೆಟರ್ ಮೃಗಾಲಯದಿಂದ ದಿನಾಂಕ ಮೈಸೂರು ಮೃಗಾಲಯಕ್ಕೆ ಗೊರಿಲ್ಲಾಗಳನ್ನ ತರಿಸಲಾಗಿತ್ತು. ತಾಬೊ (14 ವರ್ಷ) ಮತ್ತು ಡೆಂಬ (8 ವರ್ಷ) ಎಂಬ ಗೊರಿಲ್ಲಾಗಳು ಅಣ್ಣ-ತಮ್ಮಂದಿರು. ಇವು ಮೈಸೂರಿನ ಮೃಗಾಲಯದ ವಾತಾವರಣಕ್ಕೆ ಹೊಂದಿಕೊಂಡಿವೆ. ಇವು ಮೈಸೂರು ಮೃಗಾಲಯಕ್ಕೆ ಬರುವ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿವೆ.
ಗೋರಿಲ್ಲಾ ಚೇಷ್ಟೆ.. ನೋಡುಗರಿಗೆ ಸಖತ್ ಮಜಾ..!
ಗೊರಿಲ್ಲಾ ಹೇಳಿಕೇಳಿ ಬುದ್ಧಿವಂತ ಪ್ರಾಣಿ.. ಗೋರಿಲ್ಲಾ ಚೇಷ್ಟೆಗಳು ಒಂದೆಲ್ಲಾ ಎರಡಲ್ಲಾ.. ಇದನ್ನೇ ನೋಡಲು ಬರುತ್ತಿರೋ ಪ್ರವಾಸಿಗರು ಗೊರಿಲ್ಲಾ ಚೇಷ್ಟೆ ನೋಡಿ ಎಂಜಾಯ್ ಮಾಡ್ತಿದ್ದಾರೆ. ಗೊರಿಲ್ಲಾಗಳು ಅದರದ್ದೇ ಮನೆಯಲ್ಲಿ ಕೂತು ಪ್ರಾಣಿಪ್ರಿಯರನ್ನ ಸೆಳೆಯುತ್ತಿವೆ.
ಸರಣಿ ರಜೆ .. ಪ್ರವಾಸಿಗರ ಸಂಖ್ಯೆ ಹೆಚ್ಚಳ..!
ಕ್ರಿಸ್ ಮಸ್ , ನ್ಯೂ ಇಯರ್ ಹಿನ್ನೆಲೆ ಹಲವು ಜನರಿಗೆ ಸರಣಿ ರಜೆ ಇದೆ. ಹೀಗಾಗಿ ಮೃಗಾಲಯಕ್ಕೆ ಬರೋ ಜನರ ಸಂಖ್ಯೆ ಹೆಚ್ಚಿದೆ. ಎಲ್ಲರೂ ಗೋರಿಲ್ಲಾಗಳನ್ನ ನೋಡಿ ಖುಷ್ ಆಗಿದ್ದಾರೆ. ದೂರದಿಂದಲೇ ಫೋಟೋ ಕ್ಲಿಕ್ಕಿಸಿ ಸಂತಸಪಡುತ್ತಿದ್ದಾರೆ. ಕಳೆದೊಂದು ವಾರದಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಕಂಡಿದೆ. ಮೃಗಾಲಯ ಹಾಗೂ ಅಂಬಾ ವಿಲಾಸ ಅರಮನೆಗೆ ಜನಸಾಗರವೇ ಹರಿದು ಬರುತ್ತಿದೆ.