Karnataka news paper

ರಾಜ್ಯದಲ್ಲಿ ಮೂರನೇ ಓಮೈಕ್ರಾನ್‌ ಪ್ರಕರಣ ಪತ್ತೆ: ದೇಶದಲ್ಲಿ ಒಟ್ಟು 36 ಸೋಂಕಿತರು


ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ‘ಓಮೈಕ್ರಾನ್‌’ನ ಮೂರನೇ ಪ್ರಕರಣ ದೃಢಪಟ್ಟಿದೆ.

ದಕ್ಷಿಣ ಆಫ್ರಿಕಾದಿಂದ ರಾಜ್ಯಕ್ಕೆ ಬಂದಿದ್ದ 34 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಸದ್ಯ ಅವರು ಐಸೋಲೇಶನ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 5 ಮಂದಿ, ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 15 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು, ಗಂಟಲು ದ್ರವ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ದೇಶದಲ್ಲಿ ಮೊದಲ ಬಾರಿಗೆ ಓಮೈಕ್ರಾನ್‌ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ… ಆಂಧ್ರ, ಚಂಡೀಗಢದಲ್ಲಿ ಓಮೈಕ್ರಾನ್ ಪ್ರಕರಣ ದೃಢ: ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆ

 



Read more from source