
ವೆಲ್ಲಿಂಗ್ಟನ್: ದಿ ಮ್ಯಾನ್ ಬೂಕರ್ ಪ್ರಶಸ್ತಿಗೆ ಪಾತ್ರರಾದ ನ್ಯೂಜಿಲೆಂಡ್‌ನ ಕಾದಂಬರಿಕಾರ್ತಿ ಕೆರಿ ಹುಲ್ಮೆ (74) ಸೌತ್ ಐಲ್ಯಾಂಡ್‌ನ ವೈಮೇಟ್‌ನಲ್ಲಿ ನಿಧನರಾದರು.
ತಮ್ಮ ಮೊದಲ ಕಾದಂಬರಿ ‘ದಿ ಬೋನ್ ಪೀಪಲ್’ಗೆ 1984ರಲ್ಲಿ ಹುಲ್ಮೆ ಅವರು ಬೂಕರ್ ಪ್ರಶಸ್ತಿ ಪಡೆದಿದ್ದರು.
ತಂಬಾಕು ಎಲೆ ಆಯುವ ಕೆಲಸ ಮಾಡುತ್ತಿದ್ದ ಹುಲ್ಮ್ ಅವರು ಕಾನೂನು ಶಾಲೆಯನ್ನೂ ಅರ್ಧದಲ್ಲೇ ಬಿಟ್ಟವರು. ಸಮಾಜ ಸೇವೆಯಲ್ಲಿ ತೊಡಗಿದ್ದ ಅವರು ಬಳಿಕ ಕಾದಂಬರಿ ಬರೆಯಲು ತೊಡಗಿದ್ದರು. ಬೂಕರ್ ಪ್ರಶಸ್ತಿಗೆ ಪಾತ್ರವಾದ ಅವರ ಕೃತಿಯನ್ನು ಪ್ರಕಾಶನ ಮಾಡಲು ಹಲವು ಸಂಸ್ಥೆಗಳು ನಿರಾಕರಿಸಿದ್ದವು. ಮೊದಲ ಕೃತಿ ರಚಿಸಲು ಅವರು 20 ವರ್ಷ ತೆಗೆದುಕೊಂಡಿದ್ದರು.