Karnataka news paper

ಭಾರತ- ದಕ್ಷಿಣ ಆಫ್ರಿಕಾ ಪ್ರಥಮ ಟೆಸ್ಟ್: ಎರಡನೇ ದಿನದಾಟಕ್ಕೆ ಮಳೆ ಅಡ್ಡಿ


Online Desk

ಸೆಂಚುರಿಯನ್: ಸೋಮವಾರ ಬೆಳಗ್ಗೆಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟ ರದ್ದಾಗಿದೆ. 

ಬೆಳಗ್ಗೆಯಿಂದಲೇ ಸಣ್ಣದಾಗಿ ಆರಂಭವಾದ ಮಳೆ ಮಧ್ಯಾಹ್ನದ ವೇಳೆಗೆ ಭಾರೀ ಮಳೆಯಾಯಿತು. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ 90 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತ್ತು. ಉಳಿದಿರುವ ಮೂರು ದಿನಗಳಲ್ಲಿ ಸಾಧ್ಯವಾದಷ್ಟು ಹೆಚ್ಚಿನ ರನ್ ಗಳಿಸುವ ಮೂಲಕ ಪಂದ್ಯ ಗೆಲ್ಲಲು ಭಾರತ ಎದುರು ನೋಡುತ್ತಿದೆ. 

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್: ರಾಹುಲ್ ಶತಕದ ನೆರವಿನಿಂದ ಭಾರತ ಮೇಲುಗೈ
ಎರಡು ಬಾರಿ ಮಳೆ ನಿಂತಿತ್ತು. ಆದರೆ ಮೈದಾನ ಪರಿಶೀಲಿಸಿದ ಅಂಪೈರ್ ಗಳು ದಿನದಾಟ ಸ್ಥಗಿತಗೊಳಿಸುವ ಘೋಷಣೆ ಮಾಡಿದರು. ಸೆಂಚುರಿಯನ್ ನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ದುರಾದೃಷ್ಟವಶಾತ್ ಎರಡನೇ ದಿನದಾಟವನ್ನು ಅಂತ್ಯಗೊಳಿಸಲಾಗಿದೆ ಎಂದು ಮೈದಾನದ ಚಿತ್ರದೊಂದಿಗೆ ಬಿಸಿಸಿಐ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹೇಳಿದೆ. 

ಮೈದಾನದ ಪಿಚ್ ಮೇಲಿನ ಹೊದಿಕೆ ಮೇಲೂ ಭಾರೀ ಪ್ರಮಾಣದ ನೀರು ನಿಂತಿದೆ. ಅಲ್ಲದೇ ಬೆಳಕಿನ ಕೊರತೆಯಿಂದಾಗಿ ಮೈದಾನ ಒಣಗುವ ಸಾಧ್ಯತೆ ತೀರಾ ಕಡಿಮೆ ಇದೆ. ಮೊದಲ ದಿನ ಭಾರತ 90 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 272 ರನ್ ಗಳಿಸುವ ಮೂಲಕ ಆರಂಭಿಕ ಮೇಲುಗೈ ಸಾಧಿಸಿದೆ.

ಕನ್ನಡಿಗ ಕೆ. ಎಲ್. ರಾಹುಲ್ 248 ರನ್  ಎಸೆತಗಳಲ್ಲಿ ಆಕರ್ಷಕ 122 ರನ್ ಗಳಿಸಿದರೆ, ಅಜಿಂಕ್ಯ ರಹಾನೆ 81 ಎಸೆತಗಳಲ್ಲಿ 40 ರನ್ ಗಳಿಸಿ, ಕ್ರೀಸ್ ಕಾಯ್ದುಕೊಂಡಿದ್ದಾರೆ.





Read more…