Karnataka news paper

ಡಿಸೆಂಬರ್‌ 31 ರೊಳಗೆ ಕಡ್ಡಾಯವಾಗಿ ಮಾಡಿ ಮುಗಿಸಬೇಕಾದ ಕೆಲಸಗಳಿವು: ಇಲ್ಲದಿದ್ದರೆ ದಂಡ ಪಕ್ಕಾ


ಹೈಲೈಟ್ಸ್‌:

  • ಹೊಸ ವರ್ಷ ಸ್ವಾಗತಕ್ಕೂ ಮುನ್ನ ಮಾಡಲೇಬೇಕಾದ ಕೆಲಸಗಳಿವು
  • ನ್ಯೂ ಇಯರ್‌ ರೆಸೆಲ್ಯೂಷನ್‌ ಜತೆಗೆ ಇಯರ್‌ ಎಂಡ್‌ ವರ್ಕ್‌ಗಳನ್ನು ಮರೆಯದಿರಿ

2021 ಇನ್ನೇನು ಮೂರೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ಹೊಸ ವರ್ಷಾಚರಣೆಗೂ ಮುನ್ನ ಕಡ್ಡಾಯವಾಗಿ ಮಾಡಲೇಬೇಕಾದ ಕೆಲವೊಂದಿಷ್ಟು ಜರೂರು ಕೆಲಸಗಳಿವೆ. ಕೆಲಸಗಳು ಅನ್ನುವುದಕ್ಕಿಂತ ಅವುಗಳು ನಮ್ಮ ಕರ್ತವ್ಯ ಕೂಡ. ಒಂದು ವೇಳೆ ‘ಕರ್ತವ್ಯ’ವನ್ನು ನಿಭಾಯಿಸಲು ವಿಫಲವಾಗಿದ್ದೇ ಆದಲ್ಲಿ ದುಬಾರಿ ದಂಡ ತೆರಬೇಕಾಗಬಹುದು.

ಹಾಗಾದ್ರೆ ಈ ವರ್ಷಕ್ಕೆ ಟಾಟಾ ಬೈಬೈ ಹೇಳುವುದಕ್ಕೂ ಮುನ್ನ ಮಾಡಿ ಮುಗಿಸಬೇಕಾದ ಜರೂರು ಕೆಲಸಗಳೇನು? ಇಲ್ಲಿದೆ ಮಾಹಿತಿ

ವೆಬ್‌ಸೈಟ್‌ನಲ್ಲಿ ದೋಷ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವು ಮತ್ತೆ ವಿಸ್ತರಣೆ ಸಾಧ್ಯತೆ
1. ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ: 20200-21ನೇ ಆರ್ಥಿ ವರ್ಷದ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡಲು ಡಿಸೆಂಬರ್ 31 ಕೊನೆ ದಿನ. ಸಾಮಾನ್ಯವಾಗಿ ಐಟಿಆರ್‌ ಸಲ್ಲಿಕೆಗೆ ಜುಲೈ 31 ಕೊನೆ ದಿನ. ಆದರೆ ಈ ವರ್ಷ ಕೊರೊನಾ ಹಾಗೂ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿದ್ದರಿಂದ ಈ ಗಡುವನ್ನು ಡಿ.31 ರ ವರಗೆ ವಿಸ್ತರಿಸಲಾಗಿದೆ. ತೆರಿಗೆ ಪಾವತಿ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿರುವುದರಿಂದ ನೀಡಿರುವ ಗಡುವಿನ ಒಳಗಾಗಿ ಪಾವತಿ ಮಾಡಿ, ದೇಶದ ಪ್ರಗತಿಯಲ್ಲಿ ಕೈ ಜೋಡಿಸಿ.

2. ಆಧಾರ್‌- ಪಿಎಫ್ ಖಾತೆ ಜೋಡಣೆ: ನಿಮ್ಮ ಭವಿಷ್ಯ ನಿಧಿ (Provident Fund)ಯ ಯುಎಎನ್‌ ( Universal Account Number) ಖಾತೆಗೆ ಡಿ. 31ರೊಳಗಾಗಿ ಆಧಾರ್‌ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯ. ಈ ನಿಮಯ ಈಶಾನ್ಯ ಏಳು ರಾಜ್ಯಗಳಿಗೆ ಹಾಗೂ ಕೆಲವು ಸಂಸ್ಥೆಗಳಿಗೆ ಮಾತ್ರ ಅನ್ವಯ. ದೇಶದ ಉಳಿದೆಡೆ ಈ ನಿಯಮ ಸೆಪ್ಟೆಂಬರ್‌ನಲ್ಲೇ ಜಾರಿಗೆ ಬಂದಿತ್ತು.

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡುವಾಗ ಯಾವೆಲ್ಲಾ ದಾಖಲೆಗಳು ಇರಬೇಕು? ಇಲ್ಲಿದೆ ಮಾಹಿತಿ
3. ಜೀವಿತ ಪ್ರಮಾಣ ಪತ್ರ ಸಲ್ಲಿಕೆ: ಸರ್ಕಾರಿ ವೃತ್ತಿಯಿಂದ ನಿವೃತ್ತರಾದವರು, ಪಿಂಚಣಿ ಪಡೆಯಬೇಕಾದರೆ ಪ್ರತೀ ವರ್ಷ ನವೆಂಬರ್‌ 30ರೊಳಗಾಗಿ ಜೀವಿತ ಪ್ರಮಾಣ ಪತ್ರ ಸಲ್ಲಿಸಬೇಕು. ಆದರೆ ಈ ಬಾರಿ ಇದರ ಕೊನೆ ದಿನವನ್ನು ಡಿ. 31ಕ್ಕೆ ವಿಸ್ತರಿಸಲಾಗಿದೆ. ಹೀಗಾಗಿ ನಿವೃತ್ತ ಸರ್ಕಾರ ನೌಕರರು ಗಡುವಿನೊಳಗೆ ತಮ್ಮ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಿ. ಒಂದು ವೇಳೆ ಸಲ್ಲಿಸದೇ ಇದ್ದರೆ ನಿಮಗೆ ಬರುವ ಪಿಂಚಣಿ ಸ್ಥಗಿತಗೊಳ್ಳಲಿದೆ.

ಭಾರತದ ಕುಕ್ಕುಟೋದ್ಯಮ ಉತ್ಪನ್ನಗಳ ಮೇಲಿನ ನಿಷೇಧ ತೆರವುಗೊಳಿಸಿದ ಯುಎಇ: ಮೋದಿ ಭೇಟಿಯ ಎಫೆಕ್ಟ್‌
ಡಿಮ್ಯಾಟ್‌ ಹಾಗೂ ಟ್ರೇಡಿಂಗ್‌ ಖಾತೆ ಹೊಂದಿರುವವರು ಡಿ. 31 ರ ಒಳಗಾಗಿ ಕೆವೈಸಿ (Know Your Customer) ಮಾಡಿಸಿಕೊಳ್ಳಬೇಕು ಎಂದು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೇಳಿದೆ. ಈ ಹಿಂದೆ ಸೆಪ್ಟೆಂಬರ್‌ 30 ರ ಒಳಗಾಗಿ ಕೆವೈಸಿ ಪ್ರಕ್ರಿಯೆ ಮುಗಿಸಿಕೊಳ್ಳಬೇಕು ಎಂದು ಸೆಬಿ ಹೇಳಿತ್ತು. ಆದರೆ ಬಳಿಕ ಅದನ್ನು ಡಿ. 30 ರ ವರೆಗೆ ವಿಸ್ತರಣೆ ಮಾಡಿತ್ತು. ಇನ್ನು ಮೂರು ದಿನ ಮಾತ್ರ ಬಾಕಿ ಇದ್ದು, ಆದಷ್ಟು ಬೇಗ ಈ ಪ್ರಕ್ರಿಯೆಯನ್ನೂ ಕೂಡ ಮುಗಿಸಿಕೊಳ್ಳಿ.



Read more…