
ಸಾಂದರ್ಭಿಕ ಚಿತ್ರ
ಟೆಕ್ಸಾಸ್: ಟೆಕ್ಸಾಸ್ ನ ಡಲ್ಲಾಸ್ ನಲ್ಲಿ ಅಪ್ರಾಪ್ತನೋರ್ವ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಮೂರು ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಲ್ಲಿ ವ್ಯಕ್ತಿಯೊಬ್ಬ ಗ್ಯಾಸ್ ಸ್ಟೇಷನ್ ಗೆ ನುಗ್ಗಿದ ದುಷ್ಕರ್ಮಿ ಮನಸೊ ಇಚ್ಚೆ ಗುಂಡುಹಾರಿಸಿದ ಪರಿಣಾಮ ಮೂವರು ಮೃತಪಟ್ಟು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.
The investigation on the shooting death of 3 & injury of 1 at a convenience store on 12/26 is active. The deceased are ID’d as 14-yr-old Xavier Gonzalez, 16-yr-old Ivan Noyala, & 17-yr-old Rafael Garcia. The 15-yr-old that was transported to the hospital is in stable condition. pic.twitter.com/5PlfOUkZCI
— Garland Police PIO (@GarlandPD) December 28, 2021
ಡಲ್ಲಾಸ್ನಲ್ಲಿ ಭಾನುವಾರ ರಾತ್ರಿ ನಡೆದ ಗುಂಡಿನ ದಾಳಿ ಘಟನೆ ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ವ್ಯಕ್ತಿಯೊಬ್ಬ ಬಿಳಿ ಬಣ್ಣದ ಪಿಕಪ್ ಟ್ರಕ್‌ನಿಂದ ಹೊರಬಂದು, ಮಳೆಗೆ ನುಗ್ಗಿ ಅಲ್ಲಿದ್ದವರ ಮೇಲೆ ಗುಂಡು ಹಾರಿಸಿದ್ದಾನೆ.
ನಾಲ್ವರ ಮೇಲೆ ಆತ ಗುಂಡು ಹಾರಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ದಾಳಿಯಲ್ಲಿ ಮೃತಪಟ್ಟವರು ಹಾಗೂ ಗಾಯಾಳುಗಳ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಗುಂಡು ಹಾರಿಸಿದ ನಂತರ ದುಷ್ಕರ್ಮಿ ಬಂದಿದ್ದ ಟ್ರಕ್ ಅನ್ನೇ ಹತ್ತಿ ಪರಾರಿಯಾಗಿದ್ದಾನೆ.
14ವರ್ಷದ ದುಷ್ಕರ್ಮಿ ಬಂಧನ
ಇನ್ನು ಕೂಡಲೇ ಕಾರ್ಯಾಚರಣೆ ನಡೆಸಿದ ಡಲ್ಲಾಸ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ದುಷ್ಕರ್ಮಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು 14 ವರ್ಷ ಕ್ಸೇವಿಯಲ್ ಗೊಂಜಾಲೇಜ್ ಎಂದು ಗುರುತಿಸಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಗಾರ್ಲಾಂಡ್ ಪೊಲೀಸರು ಮಾಹಿತಿ ನೀಡಿದ್ದಾರೆ.