Karnataka news paper

’ಬೀಸ್ಟ್‌‘: ಶೂಟಿಂಗ್‌ನ ಕೊನೆಯ ದಿನ ಭಾಗಿಯಾದ ನಟ ’ದಳಪತಿ ವಿಜಯ್‌’


ಚೆನ್ನೈ: ತಮಿಳು ನಟ ದಳಪತಿ ವಿಜಯ್‌ ಅವರು ’ಬೀಸ್ಟ್‌‘ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಕೊನೆಯ ದಿನದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸನ್‌ ಪಿಕ್ಚರ್‌ ಟ್ವೀಟ್‌ ಮಾಡಿದೆ.

ಈ ಹಿಂದೆ ಬಿಡುಗಡೆಯಾಗಿದ್ದ ಮಾಸ್ಟರ್‌ ಸಿನಿಮಾ ಬಾಕ್ಸ್‌ಆಫೀಸ್‌ ಹಿಟ್‌ ಆಗಿತ್ತು. ಈ ಸಿನಿಮಾ 100 ಕೋಟಿ ಕ್ಲಬ್‌ ಕೂಡ ಸೇರಿತ್ತು. ಸಿನಿಮಾ ಜಗತ್ತಿನ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. 

ಕೋವಿಡ್‌ ಹಿನ್ನೆಲೆಯಲ್ಲಿ ’ಬೀಸ್ಟ್‌’ ಸಿನಿಮಾದ ಚಿತ್ರೀಕರಣ ತಡವಾಗಿತ್ತು. ವಿಜಯ್‌ ಅವರು ಅಂತಿಮ ದಿನದ ಶೂಟಿಂಗ್‌ನಲ್ಲಿ ಭಾಗವಹಿಸಿ, ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಅಭಿನಂದನೆ್ಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಬೀಸ್ಟ್‌ ಸಿನಿಮಾ ಪೋಸ್ಟರ್‌ ಬಿಡುಗಡೆಯಾಗಿದ್ದುಅಭಿಮಾನಿಗಳು ಕೂಡ ಇಷ್ಟಪಟ್ಟಿದ್ದಾರೆ. ಈ ಚಿತ್ರವನ್ನು ಸನ್‌ ಪಿಕ್ಚರ್‌ ನಿರ್ಮಾಣ ಮಾಡಿದೆ.

ಓದಿ: 

ಇದೊಂದು ಮಾಸ್‌ ಸಿನಿಮಾ ಎಂದು ಹೇಳಲಾಗುತ್ತಿದ್ದು,ಈ ಚಿತ್ರಕ್ಕೆ ನೆಲ್ಸನ್‌ ದೀಲಿಪ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಮೊಟ್ಟ ಮೊದಲ ಬಾರಿಗೆ ಪೂಜಾ ಹೆಗ್ಡೆ ಮತ್ತು ವಿಜಯ್‌ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಓದಿ: 



Read More…Source link