Karnataka news paper

ಮೇಕೆದಾಟು ಪಾದಯಾತ್ರೆ: ಕಾಂಗ್ರೆಸ್ ಕೈಯಲ್ಲೊಂದು ರಾಜಕೀಯ ಅಸ್ತ್ರ!


ಹೈಲೈಟ್ಸ್‌:

  • ನವರಿ 9 ರಿಂದ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ
  • ಒಟ್ಟು 11 ದಿನಗಳ ಕಾಲ ನಡೆಯಲಿದೆ ಕಾಂಗ್ರೆಸ್ ಪಾದಯಾತ್ರೆ
  • ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭಾಗಿ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಉಳಿದಿದೆ. ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣಾ ತಯಾರಿಯಲ್ಲಿ ತೊಗಡಿಕೊಂಡಿವೆ. ಈ ನಡುವೆ ಕಾಂಗ್ರೆಸ್ ಗೆ ಮೇಕೆದಾಟು ಯೋಜನೆ ವಿಳಂಬ ಎಂಬ ಅಸ್ತ್ರ ಸಿಕ್ಕಿದ್ದು ಜನವರಿ 9 ರಿಂದ ಪಾದಯಾತ್ರೆ ಮೂಲಕ ಜನಾಭಿಪ್ರಾಯ ರೂಪಿಸಲು ಕೈಪಾಳಯ ಸಜ್ಜುಗೊಳ್ಳುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಕಾಂಗ್ರೆಸ್ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ.

ಕಾಂಗ್ರೆಸ್ ಪಕ್ಷದ್ದು ಮೇಕೆದಾಟು ಯಾತ್ರೆಯಲ್ಲ, ಮತಯಾತ್ರೆ: ಕುಮಾರಸ್ವಾಮಿ

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ಪಾಲಿಗೆ ರಾಜಕೀಯ ಅಸ್ತ್ರವಾಗಿ ಸಿಕ್ಕಿದೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಕೆದಾಟು ಪಾದಯಾತ್ರೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹೇಗಾದರೂ ಮಾಡಿ ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂಬ ಪ್ರಯತ್ನದಲ್ಲಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಬಳ್ಳಾರಿ ಪಾದಯಾತ್ರೆ ಅವರನ್ನು ಸಿಎಂ ಸ್ಥಾನದ ಗದ್ದಗೆಯಲ್ಲಿ ಕೂರಿಸಲು ಪ್ರಮುಖ ಪಾತ್ರ ವಹಿಸಿತ್ತು. ಇದೀಗ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಕಣ್ಣಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಕೆದಾಟು ಪಾದಯಾತ್ರೆ ಎಷ್ಟರ ಮಟ್ಟಿಗೆ ಡಿಕೆಶಿಗೆ ಫಲಪ್ರದವಾಗಲಿದೆ ಎಂಬುವುದು ಸದ್ಯದ ಕುತೂಹಲ.

ಎಲ್ಲಿಂದ ಎಲ್ಲಿಗೆ ಪಾದಯಾತ್ರೆ ?

ಜನವರಿ 9 ರಂದು ಮೇಕೆದಾಟು ಸಂಗಮದಿಂದ ಪಾದಯಾತ್ರೆ ಪ್ರಾರಂಭವಾಗಲಿದ್ದು ಒಟ್ಟು 11 ದಿನಗಳ ಕಾಲ ನಡೆಯಲಿದೆ. ಕೊನೆಯ ದಿನದಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾರೋಪ ಸಭೆ ನಡೆಯಲಿದೆ.

ಮೊದಲನೇ ದಿನ

ಹೆಗ್ಗನೂರು ದೊಡ್ಡ ಅಲಹಳ್ಳಿ

ಎರಡನೇ ದಿನ

ದೊಡ್ಡ ಅಲಹಳ್ಳಿ , ಮಾದಪ್ಪನ ದೊಡ್ಡಿ, ಕರಿಯಣ್ಣನ ದೊಡ್ಡಿ, ಕನಕಪುರ ಟೌನ್

ಮೂರನೇ ದಿನ

ಕನಕಪುರ ಟೌನ್, ಗಾಣಾಳು, ಚಿಕ್ಕೇನಹಳ್ಳಿ

ನಾಲ್ಕನೇ ದಿನ

ಚಿಕ್ಕೇನಹಳ್ಳಿ, ಕೃಷ್ಣಾಪುರ ದೊಡ್ಡಿ, ರಾಮನಗರ ಟೌನ್

ಐದನೇ ದಿನ

ರಾಮನಗರ ಟೌನ್, ಮಾಯಗಾನ ಹಳ್ಳಿ, ಬಿಡದಿ ಟೌನ್

ಆರನೇ ದಿನ

ಬಿಡದಿ ಟೌನ್, ರಾಜಕುಮಾರ್‌ ಫಾರಂ, ಕೆಂಗೇರಿ

ಏಳನೇ ದಿನ

ಕೆಂಗೇರಿ, ನ್ಯಾಯಂಡಹಳ್ಳಿ ಜಂಕ್ಷನ್, ಸಾರಕ್ಕಿ ಸಿಗ್ನಲ್

ಎಂಟನೇ ದಿನ

ಸಾರಕ್ಕಿ ಸಿಗ್ನಲ್, ಮಾರತ್ತಳ್ಳಿ ಜಂಕ್ಷನ್

ಒಂಬತ್ತನೇ ದಿನ

ಮಾರತ್ತಳ್ಳಿ ಜಂಕ್ಷನ್, ಕೆ. ಆರ್ ಪುರಂ ಜಂಕ್ಷನ್, ಲಿಂಗರಾಜಪುರ ಜಂಕ್ಷನ್

ಹತ್ತನೇ ದಿನ

ಲಿಂಗರಾಜಪುರ ಜಂಕ್ಷನ್, ಮೇಕ್ರಿ ಸರ್ಕಲ್, ಕಾಂಗ್ರೆಸ್ ಭವನ

ಕೊನೆಯ ದಿನ

ಕಾಂಗ್ರೆಸ್ ಭವನದಿಂದ ಪಾದಯಾತ್ರೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಸಾಗಿ ಅಲ್ಲಿ ಸಮಾರೋಪ ಸಭೆ ನಡೆಯಲಿದೆ.



Read more