Source : PTI
ಮುಂಬೈ: ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಮಾಯಾಂಕ್ ಅಗರವಾಲ್ ಭರ್ಜರಿ ಶತಕ ಸಿಡಿಸಿದ್ದು ಭಾರತ ಉತ್ತಮ ರನ್ ಕಲೆ ಹಾಕಲು ಸಾಧ್ಯವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕರಾದ ಮಾಯಾಂಕ್ ಅಗರವಾಲ್ ಅಜೇಯ 120 ರನ್ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 4ನೇ ಶತಕ ಸಿಡಿಸಿದ್ದಾರೆ.
ಇದನ್ನೂ ಓದಿ: ಕಾನ್ಪುರ ಟೆಸ್ಟ್: ನ್ಯೂಜಿಲ್ಯಾಂಡ್ ವಿರುದ್ಧ 1 ವಿಕೆಟ್ ನಿಂದ ಭಾರತಕ್ಕೆ ಕೈತಪ್ಪಿದ ವಿರೋಚಿತ ಗೆಲುವು, ಪಂದ್ಯ ಡ್ರಾ!
ಇನ್ನು ಭಾರತದ ಪರ ಶುಭಮನ್ ಗಿಲ್ 44 ರನ್ ಗಳಿಸಿ ಔಟಾದರೆ, ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಶೂನ್ಯ ಗಳಿಸಿದರು. ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾಗಿದ್ದು ಮಾಯಾಂಕ್ ಅಗರವಾಲ್. ನ್ಯೂಜಿಲ್ಯಾಂಡ್ ಬೌಲರ್ ಗಳ ಸವಾರಿ ಮಾಡಿದ ಮಾಯಾಂಕ್ 196 ಎಸೆತಗಳಲ್ಲಿ ಶತಕ ಬಾರಿಸಿದರು.
ಇನ್ನು ಶ್ರೇಯಸ್ ಅಯ್ಯರ್ 18 ರನ್ ಗಳಿಸಿ ಔಟಾದರೆ ವೃದ್ಧಿಮಾನ್ ಸಾಹ ಅಜೇಯ 25 ರನ್ ಗಳಿಸಿ ಅಂಗಳದಲ್ಲಿದ್ದಾರೆ. ಮಾಯಾಂಕ್ ಅಗರವಾಲ್ ಮತ್ತು ಸಾಹ ಎರಡನೇ ದಿನದಾಟವನ್ನು ಆರಂಭಿಸಲಿದ್ದಾರೆ.
ಇದನ್ನೂ ಓದಿ: ಅತೀ ಹೆಚ್ಚು 5 ವಿಕೆಟ್ ಗೊಂಚಲು: ಟಾಮ್ ರಿಚರ್ಡಸನ್, ರೋಡ್ನಿ ಹಾಗ್ ದಾಖಲೆ ಸರಿಗಟ್ಟಿದ ಅಕ್ಷರ್ ಪಟೇಲ್
ಮಳೆಯಿಂದಾಗಿ ದಿನದಾಟ 70 ಓವರ್ ಅಂತ್ಯವಾಗಿದ್ದು ಭಾರತ 4 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ. ನ್ಯೂಜಿಲ್ಯಾಂಡ್ ಪರ ಬೌಲಿಂಗ್ ನಲ್ಲಿ ಅಜಾಝ್ ಪಟೇಲ್ 4 ವಿಕೆಟ್ ಗಳನ್ನು ಪಡೆದಿದ್ದಾರೆ.