Karnataka news paper

ದ.ಆಫ್ರಿಕಾದ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ನಿಧನ: ಪ್ರಧಾನಿ ನರೇಂದ್ರ ಮೋದಿ ಸಂತಾಪ



ದ.ಆಫ್ರಿಕಾದ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ನಿಧನ: ಪ್ರಧಾನಿ ನರೇಂದ್ರ ಮೋದಿ ಸಂತಾಪ

ಪ್ರಧಾನಿ ಮೋದಿ, ಡೆಸ್ಮಂಡ್ ಟುಟು

The New Indian Express

ನವದೆಹಲಿ: ದಕ್ಷಿಣ ಆಫ್ರಿಕಾದ ಕ್ರೈಸ್ತ ಧರ್ಮಗುರು ಆರ್ಚ್ ಬಿಷಪ್ ಡೆಸ್ಮಂಡ್ ಟುಟು ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಂಧಿ ಅನುಯಾಯಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾಗಿದ್ದ ಡೆಸ್ಮಂಡ್ ಟುಟು 90 ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಆರ್ಚ್ ಬಿಷಪ್ ಟುಟು ಅವರು ಜಗತ್ತಿನ ಕೋಟ್ಯಂತರ ಜನರ ಪಾಲಿಗೆ ದಾರಿ ದೀಪವಾಗಿದ್ದರು. ಮಾನವ ಘನತೆ ಮತ್ತು ಸಮಾನತೆಯಡೆಗಿನ ಕೊಡುಗೆಗಾಗಿ ಅವರು ಸದಾ ಸ್ಮರಣೀಯರು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.  

1990 ರ ದಶಕದ ಅಂತ್ಯದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಡೆಸ್ಮೆಂಡ್ ಟುಟು ಇತ್ತೀಚಿನ ವರ್ಷಗಳಲ್ಲಿ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. 

ದಕ್ಷಿಣ ಆಫ್ರಿಕಾದಲ್ಲಿ ಅಹಿಂಸಾತ್ಮಕ ಹೋರಾಟದ ಮೂಲಕ ವರ್ಣಬೇಧ ನೀತಿ ಹೋಗಲಾಡಿಸುವಲ್ಲಿ  ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ 1984ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಡೆಸ್ಮಂಡ್ ಟುಟು ಪಡೆದುಕೊಂಡಿದ್ದರು.




    Read more