Karnataka news paper

ರಾಜ್ಯದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಆರಂಭ


Source : The New Indian Express

ಬೆಂಗಳೂರು: ರಾಜ್ಯದ 2 ಸಾವಿರ ಕಡೆಗಳಲ್ಲಿ ಬೃಹತ್ ಸದಸ್ಯತ್ವ ನೋಂದಣಿ ಅಭಿಯಾನವನ್ನು ಕಾಂಗ್ರೆಸ್ ಶನಿವಾರ ಆರಂಭಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರು ಸೇರಿದಂತೆ ಹಲವು ಮುಖಂಡರು ಬ್ಲಾಕ್ ಮಟ್ಟದಲ್ಲಿ ನಡೆದ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಯಾವುದೇ ಚುನಾವಣೆಗೆ ಸ್ಪರ್ಧಿಸಲು ಹಾಗೂ ಪಕ್ಷದ ಹುದ್ದೆಗಳನ್ನು ಅಲಂಕರಿಸಲು ಪಕ್ಷದ ಸದಸ್ಯರಾಗಿ ಸೇರ್ಪಡೆಗೊಳ್ಳುವುದು ಅತ್ಯಗತ್ಯ ಎಂದು ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಪ್ರತಿ ಬೂತ್‌ನಲ್ಲಿ ಡಿಜಿಟಲ್ ಸದಸ್ಯತ್ವ ದಾಖಲು ಮಾಡಿಕೊಳ್ಳುವವರನ್ನು ನೇಮಿಸಲಾಗುವುದು, ಅವರು ಪ್ರತಿ ಮನೆಗೂ ಭೇಟಿ ನೀಡಿ  ಪಕ್ಷದ ಆ್ಯಪ್ ಬಳಸಿ ಸದಸ್ಯರನ್ನಾಗಿ ಮಾಡುತ್ತಾರೆ. ಶನಿವಾರ  ಸುಮಾರು 50,000 ಜನರು ನೋಂದಣಿಗಾಗಿ ಕಾಯುತ್ತಿದ್ದಾರೆ ಎಂದು ಅವರು ಹೇಳಿದರು.

 ಪ್ರತಿ ಸಕ್ರಿಯ ಸದಸ್ಯರು 25 ಸದಸ್ಯರನ್ನು ನೋಂದಾಯಿಸಿಕೊಳ್ಳಬೇಕು. ಪಕ್ಷದ ಅಪ್ಲಿಕೇಶನ್ ಬಳಸಿ ಸದಸ್ಯರನ್ನು ನೋಂದಣಿ ಮಾಡಲಾಗುವುದು ನಂತರ ಪರಿಶೀಲಿಸಲಾಗುತ್ತದೆ. ನನ್ನ ವಿವರಗಳನ್ನು ಕೂಡಾ ಪರಿಶೀಲಿಸಲಾಗುತ್ತದೆ ಎಂದು ಅವರು ತಿಳಿಸಿದರು. 

ವಿಧಾನಪರಿಷತ್ ಸದಸ್ಯ ಸಿಎಂ ಇಮ್ರಾಹಿಂ ಪಕ್ಷದ ಕಚೇರಿಗೆ ಬಂದು ಸದಸ್ಯತ್ವ ನೋಂದಾಯಿಸಿದ್ದಾರೆ. ಅಲ್ಲದೇ, ಪಕ್ಷದ ವಿಚಾರಗಳನ್ನು ಚರ್ಚಿಸಿದ್ದಾರೆ.  ಇಬ್ರಾಹಿಂ ತನ್ನ ಬಳಿ ಗುರುತಿನ ಚೀಟಿಯನ್ನು ಹೊಂದದ ಕಾರಣ, ಅವರು ಬೂತ್ ನಲ್ಲಿ  ಸದಸ್ಯರಾಗಿ ದಾಖಲಾಗಲು ನಿರ್ಧರಿಸಿದ್ದರು ಎಂದು ಶಿವಕುಮಾರ್ ಹೇಳಿದರು.



Read more