Karnataka news paper

Shehnaaz Gill: ಶೆಹನಾಜ್ ಗಿಲ್‌ಗೆ ಮತ್ತೆ ಮತ್ತೆ ಆಘಾತ; ನಟಿಯ ತಂದೆ ಮೇಲೆ ಗುಂಡಿನ ದಾಳಿ!


ಹೈಲೈಟ್ಸ್‌:

  • ಸಿದ್ದಾರ್ಥ್ ಶುಕ್ಲಾ ಅಗಲಿಕೆಯ ದುಃಖದಲ್ಲಿರುವ ನಟಿ ಶೆಹನಾಜ್
  • ನಟಿ ಶೆಹನಾಜ್ ಗಿಲ್‌ಗೆ ಮತ್ತೊಂದು ಆಘಾತಕಾರಿ ಸುದ್ದಿ
  • ಶೆಹನಾಜ್ ತಂದೆ ಮೇಲೆ ಗುಂಡಿನ ದಾಳಿ ಮಾಡಿದ ದುಷ್ಕರ್ಮಿಗಳು

ಬಿಗ್ ಬಾಸ್ ಖ್ಯಾತಿಯ ನಟಿ ಶೆಹನಾಜ್ ಗಿಲ್‌ ಕಳೆದ ಕೆಲವು ದಿನಗಳಿಂದ ದುಃಖದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಕಾರಣ, ಅವರ ಪ್ರಿಯಕರ, ‘ಬಿಗ್ ಬಾಸ್’ ವಿನ್ನರ್ ಸಿದ್ದಾರ್ಥ್ ಶುಕ್ಲಾ ನಿಧನ. ಆ ನೋವಿನಿಂದ ನಿಧಾನವಾಗಿ ಹೊರಬರುತ್ತಿರುವ ಶೆಹನಾಜ್ ಗಿಲ್‌ ಬದುಕಿನಲ್ಲಿ ಈಗ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಶೆಹನಾಜ್ ಗಿಲ್‌ ಅವರ ತಂದೆ ಸಂತೋಖ್ ಸಿಂಗ್ ಅಲಿಯಾಸ್ ಸುಖ್‌ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಈ ಘಟನೆಯು ಶನಿವಾರ (ಡಿ.24) ಅಮೃತಸರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರಾಜಕೀಯ ವೈಷಮ್ಯ ಕಾರಣವೇ?
ಸಂತೋಖ್ ಸಿಂಗ್ ಅವರು ಪಂಜಾಬ್‌ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಈಚೆಗಷ್ಟೇ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 2022ರಲ್ಲಿ ನಡೆಯುವ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇದೀಗ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಅಪರಿಚಿತ ವ್ಯಕ್ತಿಗಳಿಬ್ಬರು ಬೈಕ್‌ನಲ್ಲಿ ಬಂದು ಸಂತೋಖ್ ಸಿಂಗ್ ಇದ್ದ ಕಾರಿನ ಮೇಲೆ ನಾಲ್ಕು ಬಾರಿ ಗುಂಡಿನ ದಾಳಿ ಮಾಡಿದ್ದಾರೆ. ಅಷ್ಟರೊಳಗೆ ಸಂತೋಖ್ ಸಿಂಗ್ ಅವರ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಓಡಿ, ಬಂದಿದ್ದಾರೆ. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಸಂತೋಖ್ ಸಿಂಗ್ ಅವರ ಭದ್ರತಾ ಸಿಬ್ಬಂದಿ ಕೂಡಲೇ ಜಂಡಿಯಾಲಾ ಗುರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಥಳದಲ್ಲಿದ್ದ ನಾಲ್ಕು ಬುಲೆಟ್‌ಗಳ ಖಾಲಿ ಶೆಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಸಂತೋಖ್ ಸಿಂಗ್ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಅವರು ಅಪಾಯದಿಂದ ಪಾರಾಗಿದ್ದಾರೆ. ‘ಪ್ರಾಥಮಿಕ ತನಿಖೆಯನ್ನು ಕೈಗೊಂಡಿದ್ದೇವೆ. ಇದೊಂದು ಅನುಮಾನಾಸ್ಪದ ಘಟನೆಯಾಗಿದೆ. ಅಗತ್ಯ ತನಿಖೆ ಪ್ರಗತಿಯಲ್ಲಿದೆ’ ಎಂದು ಜಂಡಿಯಾಲಾ ಗುರು ಪೊಲೀಸ್ ಠಾಣೆಯ ಹರ್‌ಪ್ರೀತ್ ಸಿಂಗ್ ತಿಳಿಸಿದ್ದಾರೆ. ಸದ್ಯ ಸಂತೋಖ್ ಸಿಂಗ್ ಅವರ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರಿಂದ, ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲಾಗಿತ್ತು ಎನ್ನಲಾಗಿದೆ.

ಸಿದ್ದಾರ್ಥ್ ಶುಕ್ಲಾ ಸಾವು; ಬಿಗ್ ಬಾಸ್ ಟ್ರೋಫಿ ಬೇಡ, ನೀನು ಬೇಕು ಎಂದಿದ್ದ ಶೆಹನಾಜ್ ಗಿಲ್ ಆರೋಗ್ಯ ಸ್ಥಿತಿ ಹೇಗಿದೆ?

ಸದ್ಯ ಶೆಹನಾಜ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ, ಅಂದು ಅವರು ತಮ್ಮ ಮ್ಯಾನೇಜರ್ ಕೌಶಲ್‌ ಜೋಷಿ ಅವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಬಾಯ್‌ಫ್ರೆಂಡ್ ಸಿದ್ದಾರ್ಥ್ ಶುಕ್ಲಾ ನಿಧನವಾದ್ರೂ ಅವರ ತಾಯಿ ಕೈಬಿಟ್ಟಿಲ್ಲ ನಟಿ ಶೆಹನಾಜ್ ಗಿಲ್

‘ಬಿಗ್ ಬಾಸ್’ ಮನೆಯಲ್ಲಿ ಒಟ್ಟಿಗೆ ಇದ್ದ ಶೆಹನಾಜ್ ಹಾಗೂ ಸಿದ್ದಾರ್ಥ್ ಅವರು ಕೆಲ ಆಲ್ಬಮ್ ಸಾಂಗ್‌ಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅವರಿಬ್ಬರು ‘ಡ್ಯಾನ್ಸ್ ದೀವಾನೆ’ ಶೋನಲ್ಲಿ ಭಾಗವಹಿಸಿ ಡ್ಯಾನ್ಸ್ ಮಾಡಿದ್ದರು. ಶೆಹನಾಜ್ ಗಿಲ್-ಸಿದ್ದಾರ್ಥ್ ಶುಕ್ಲಾ ಡೇಟಿಂಗ್ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿತ್ತು. ಪ್ರಿಯಕರನ ನಿಧನದಿಂದ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದರು. ಸೆ.2ರಂದು ಸಿದ್ದಾರ್ಥ್ ಹೃದಯಾಘಾತದಿಂದ ನಿಧನರಾಗಿದ್ದರು.

ಅಂದು ಸಿದ್ದಾರ್ಥ್ ಶುಕ್ಲಾ ಮೇಲಿನ ಶೆಹನಾಜ್ ಗಿಲ್ ಲವ್ ಫೇಕ್ ಅಂದ್ರು; ಆದರೆ ಇವತ್ತು ಏನಂತಾರೆ?



Read more