Karnataka news paper

ಪ್ರೀತಿಯಲ್ಲಿ ಬಿದ್ದರೇ ತೆಲುಗು ನಟ ಅಲ್ಲು ಶಿರಿಷ್‌, ನಟಿ ಅನು? ಸಾಕ್ಷಿ ಇಲ್ಲಿದೆ!


ಹೈದರಾಬಾದ್‌: ತೆಲುಗು ನಟ ಅಲ್ಲು ಶಿರಿಷ್‌ ಹಾಗೂ ನಟಿ ಅನು ಇಮ್ಮಾನ್ಯುಯಲ್‌ ಎರಡು ವರ್ಷಗಳ ಹಿಂದೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಮಾತುಗಳು ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿವೆ.

ಶಿರಿಷ್‌ ಮತ್ತು ಅನು ವಿದೇಶಗಳಲ್ಲಿ ಸುತ್ತಾಡುತ್ತಿರುವುದು, ಪ್ರವಾಸ ಹೋಗುತ್ತಿರುವುದರ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಶಿರಿಷ್‌ ಕಳುಹಿಸಿರುವ ಕ್ರಿಸ್‌ಮಸ್‌ ಕೇಕ್‌ ಅವರ ಪ್ರೀತಿಗೆ ಸಾಕ್ಷಿಯಾಗಿದೆ ಎಂದು ಶಿರಿಷ್‌ ಆಪ್ತರು ಹೇಳುತ್ತಿದ್ದಾರೆ.

ಶಿರಿಷ್‌, ಅಮೆರಿಕದಲ್ಲಿ ನೆಲೆಸಿರುವ ಅನುಗೆ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ವಿಶೇಷ ಕೇಕ್‌ ಕಳುಹಿಸಿಕೊಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೃದಯದ ಆಕಾರದಲ್ಲಿರುವ ಕೇಕ್‌ನಲ್ಲಿ ನನ್ನ ಸಹ ನಟಿಗೆ ಕ್ರಿಸ್‌ಮಸ್‌ ಶುಭಾಶಯಗಳು ಎಂದು ಬರೆದಿದ್ದಾರೆ. ನನಗೆ ಈ ಕೇಕ್‌ ತುಂಬಾ ಇಷ್ಟವಾಗಿದೆ ಎಂದು ಸಹ ಅನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. 

ಸದ್ಯ ಅನು ಮತ್ತು ಶಿರಿಷ್‌ ’ಪ್ರೇಮ ಕಾದಂಟ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  ಈ ಸಿನಿಮಾ ಮುಗಿದ ಬಳಿ ಮದುವೆ ಆಗಲಿದ್ದಾರೆ ಎಂದು ಶಿರಿಷ್ ಕುಟುಂಬದ ಆಪ್ತರು ಹೇಳಿದ್ದಾರೆ. 

ಓದಿ: 

2016ರಿಂದ ಅನು ತೆಲುಗು, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಜ್ನು, ಆಕ್ಸಿಜನ್‌, ಅಜ್ಞಾತವಾಸಿ ಚಿತ್ರಗಳು ತೆಲುಗಿನಲ್ಲಿ ಅನುಗೆ ಹೆಸರು ತಂದುಕೊಟ್ಟಿವೆ.

ಶಿರಿಷ್‌ ಅಭಿಮಾನಿಗಳು ಮಾತ್ರ ಅನು ಹಾಗೂ ಶಿರಿಷ್‌ ನಿಜ ಜೀವನದ ಪ್ರಣಯ ಹಕ್ಕಿಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕುತ್ತಿದ್ದಾರೆ.  

ಓದಿ: 



Read More…Source link