Karnataka news paper

 ಗ್ರೀಸ್‌ನಲ್ಲಿ ಎರಡು ಬಾರಿ ಭೂಕಂಪ


Prajavani

ಅಥೆನ್ಸ್‌: ಗ್ರೀಸ್‌ನ ದಕ್ಷಿಣ ಭಾಗದ ಕ್ರೀಟ್ ಮತ್ತು ಇತರ ದ್ವೀಪಗಳ ವ್ಯಾಪ್ತಿಯಲ್ಲಿ ರಿಕ್ಟರ್‌ ಮಾಪಕದಲ್ಲಿ 5.2 ಮತ್ತು 5.4ರಷ್ಟು ತೀವ್ರತೆಯಿಂದ ಎರಡು ಭೂಕಂಪಗಳು ಸಂಭವಿಸಿದ್ದು, ಹಾನಿಯ ಬಗ್ಗೆ ವರದಿಯಾಗಿಲ್ಲ.

ಕ್ರಮವಾಗಿ 9 ಕಿಲೋಮೀಟರ್ ಮತ್ತು 6.3 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ. 

ಅಥೆನ್ಸ್‌ನ ಪಶ್ಚಿಮ ಭಾಗದಲ್ಲೂ ರಿಕ್ಟರ್ ಮಾಪಕದಲ್ಲಿ 4.0ರಷ್ಟಿದ್ದ ಭೂಕಂಪ ಸಂಭವಿಸಿದೆ ಎಂದು ಜಿಯೊಡೈನಾಮಿಕ್ಸ್ ಸಂಸ್ಥೆ ವರದಿ ಮಾಡಿದೆ.



Read more from source