Karnataka news paper

Salman Khan: ಸಲ್ಮಾನ್ ಖಾನ್ ಮದುವೆಯಾಗದಿರಲು ಕಾರಣ ‘ಈ’ ನಟಿ..!


ಹೈಲೈಟ್ಸ್‌:

  • ಸಲ್ಮಾನ್ ಖಾನ್‌ ಅವರಿಗಿಂದು 56ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ
  • ನಟ ಸಲ್ಮಾನ್ ಖಾನ್‌ಗಿನ್ನೂ ಮದುವೆಯಾಗಿಲ್ಲ
  • ಸಲ್ಮಾನ್ ಖಾನ್‌ ಮದುವೆಯಾಗದಿರುವುದಕ್ಕೆ ಕಾರಣ ನಟಿ ರೇಖಾ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗಿಂದು ಜನ್ಮದಿನದ ಸಂಭ್ರಮ. ತಮ್ಮ 56ನೇ ವರ್ಷದ ಹುಟ್ಟುಹಬ್ಬವನ್ನು ನಟ ಸಲ್ಮಾನ್ ಖಾನ್ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ಮುಂಬೈ ಹೊರವಲಯದ ಪಾನ್ವೇಲ್ ಫಾರ್ಮ್ ಹೌಸ್‌ನಲ್ಲಿ ಆಚರಿಸಿಕೊಂಡಿದ್ದಾರೆ.

ರಿಲೇಶನ್‌ಶಿಪ್‌ನಲ್ಲಿದ್ದರೂ ಸಲ್ಮಾನ್ ಖಾನ್ ಮದುವೆಯಾಗಿಲ್ಲ!
ಸಲ್ಮಾನ್ ಖಾನ್‌ ಅವರಿಗೀಗ ವಯಸ್ಸು 56 ತುಂಬಿದೆ. ಆದರೂ, ಈವರೆಗೂ ಸಲ್ಮಾನ್ ಖಾನ್ ಸಿಂಗಲ್ ಆಗಿದ್ದಾರೆ. ಕೆಲ ನಟಿಯರ ಜೊತೆಗೆ ರಿಲೇಶನ್‌ಶಿಪ್‌ನಲ್ಲಿದ್ದರೂ, ಸಲ್ಮಾನ್ ಖಾನ್ ಇಲ್ಲಿಯವರೆಗೂ ಮದುವೆ ಆಗಿಲ್ಲ.

ಕತ್ರಿನಾ ಕೈಫ್-ವಿಕ್ಕಿ ಕೌಶಲ್ ವಿವಾಹಕ್ಕಾಗಿ 45 ಹೋಟೆಲ್‌ಗಳು ಬುಕ್‌; ಸಲ್ಮಾನ್ ಮದುವೆಗೆ ಬರ್ತಾರಾ?
ಸಲ್ಮಾನ್ ಖಾನ್ ಜೊತೆಗೆ ರಿಲೇಶನ್‌ಶಿಪ್‌ನಲ್ಲಿದ್ದ ನಟಿಯರು ಯಾರ್ಯಾರು?
ನಟಿ ಸಂಗೀತಾ ಬಿಜ್ಲಾನಿ ಅವರೊಂದಿಗೆ ಸಲ್ಮಾನ್ ಖಾನ್ ಸೀರಿಯಸ್ ರಿಲೇಶನ್‌ಶಿಪ್‌ನಲ್ಲಿದ್ದರು. ಆದರೆ, ಅದ್ಯಾಕೋ ಅವರಿಬ್ಬರು ಬೇರೆ-ಬೇರೆಯಾದರು. ಸೋಮಿ ಅಲಿ ಅವರನ್ನೂ ಸಲ್ಮಾನ್ ಖಾನ್ ಪ್ರೀತಿಸಿದ್ದರು. ಈ ಸಂಬಂಧವೂ ಹೆಚ್ಚು ದಿನ ಉಳಿಯಲಿಲ್ಲ. 1999ರಲ್ಲಿ ನಟಿ ಐಶ್ವರ್ಯ ರೈ ಅವರನ್ನ ಸಲ್ಮಾನ್ ಖಾನ್ ಡೇಟಿಂಗ್ ಮಾಡಲು ಆರಂಭಿಸಿದರು. ಆದರೆ, ಕಾರಣಾಂತರಗಳಿಂದ 2001 ರಲ್ಲಿ ಐಶ್ವರ್ಯ ರೈ ಹಾಗೂ ಸಲ್ಮಾನ್ ಖಾನ್ ದೂರಾದರು. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಕೂಡ ರಿಲೇಶನ್‌ಶಿಪ್‌ನಲ್ಲಿ ಇದ್ದರು. ಆದರೆ, 2010ರಲ್ಲಿ ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ಬ್ರೇಕಪ್ ಮಾಡಿಕೊಂಡರು. 2012ರಿಂದ ರೊಮೇನಿಯಾದ ನಟಿ ಲೂಲಿಯಾ ವ್ಯಾಂಟುರ್ ಜೊತೆ ಸಲ್ಮಾನ್ ಖಾನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ.

ಸಲ್ಮಾನ್ ಖಾನ್ ಮದುವೆ 1999ರಲ್ಲಿ ಫಿಕ್ಸ್ ಆಗಿತ್ತು, ಆಗ ಲಗ್ನಪತ್ರಿಕೆ ಕೂಡ ಹಂಚಿದ್ದರು!
ಸಲ್ಮಾನ್ ಖಾನ್ ಮದುವೆಯಾಗದಿರುವುದಕ್ಕೆ ‘ಈ’ ನಟಿ ಕಾರಣ..!
ಸಲ್ಮಾನ್ ಖಾನ್ ಮದುವೆಯಾಗದಿರುವುದಕ್ಕೆ ಕಾರಣ ಹಿರಿಯ ನಟಿ ರೇಖಾ..! ಹೌದು.. ಅದ್ಹೇಗೆ ಅಂದ್ರೆ… ದಶಕಗಳ ಹಿಂದೆ ಸಲ್ಮಾನ್ ಖಾನ್ ಇನ್ನೂ ಚಿಕ್ಕವರಿದ್ದಾಗ.. ಅವರ ಮನೆಯ ಪಕ್ಕದಲ್ಲೇ ನಟಿ ರೇಖಾ ಕೂಡ ನೆಲೆಸಿದ್ದರು. ನಟಿ ರೇಖಾ ಅವರ ಅಭಿಮಾನಿಯಾಗಿದ್ದ ಸಲ್ಮಾನ್ ಖಾನ್… ರೇಖಾ ಅವರನ್ನ ನೋಡಲೆಂದೇ ತಮ್ಮ ಮನೆಯ ಪ್ಯಾರಾಪೆಟ್ ಬಳಿ ನಿಲ್ಲುತ್ತಿದ್ದರು. ಬೆಳಗ್ಗೆ ರೇಖಾ ವಾಕಿಂಗ್ ಹೋಗುವಾಗ.. ಅವರನ್ನ ಕಣ್ತುಂಬಿಕೊಳ್ಳಲು ಪ್ಯಾರಾಪೆಟ್ ಬಳಿಯೇ ಮಲಗಿರುತ್ತಿದ್ದ ಸಲ್ಮಾನ್ ಖಾನ್ ಬೆಳಗ್ಗೆ 5.30ಕ್ಕೆ ಏಳುತ್ತಿದ್ದರು. ಇನ್ನೂ, ಯೋಗ ಬಗ್ಗೆ ಏನೂ ತಿಳಿಯದ ಸಲ್ಮಾನ್ ಖಾನ್.. ರೇಖಾ ಅವರು ಯೋಗ ಹೇಳಿಕೊಡುತ್ತಿದ್ದರು ಎಂಬ ಒಂದೇ ಕಾರಣಕ್ಕೆ.. ರೇಖಾ ಅವರ ಯೋಗ ಕ್ಲಾಸ್ ಕೂಡ ಸೇರಿಕೊಂಡಿದ್ದರು.

ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಹಳೆ ಚಿತ್ರಗಳು ವೈರಲ್
‘’ನಾನು ದೊಡ್ಡವನಾದ್ಮೇಲೆ ರೇಖಾ ಅವರನ್ನೇ ಮದುವೆಯಾಗುತ್ತೇನೆ’’ ಎಂದು ಮನೆಯವರ ಬಳಿ ಸಲ್ಮಾನ್ ಖಾನ್ ಹೇಳಿದ್ರಂತೆ. ಈ ಸಂಗತಿಯನ್ನ ಈ ಹಿಂದೆ ರೇಖಾ ಅವರೊಂದಿಗೆ ವೇದಿಕೆಯೊಂದರಲ್ಲಿ ಸಲ್ಮಾನ್ ಖಾನ್ ಹಂಚಿಕೊಂಡಿದ್ದರು. ಆ ವೇಳೆ, ‘’ಇದೇ ಕಾರಣಕ್ಕೆ ನನಗಿನ್ನೂ ಮದುವೆಯಾಗಿಲ್ಲ’’ ಎಂದು ಸಲ್ಮಾನ್ ಖಾನ್ ನಗುತ್ತಾ ಹೇಳಿದಾಗ, ನಟಿ ರೇಖಾ ಕೂಡ ‘’ನನಗೂ ಇದೇ ಕಾರಣಕ್ಕೆ ಮದುವೆಯಾಗಿಲ್ಲ’’ ಎಂದು ಜೋಕ್ ಮಾಡಿ ನಕ್ಕಿದ್ದರು.

ಇಂಟ್ರೆಸ್ಟಿಂಗ್ ಅಂದ್ರೆ, ನಟ ಸಲ್ಮಾನ್ ಖಾನ್ ನಟಿಸಿದ ಚೊಚ್ಚಲ ಚಿತ್ರ ‘ಬೀವಿ ಹೋ ತೋ ಐಸಿ’ ಸಿನಿಮಾದಲ್ಲಿ ರೇಖಾ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಸಲ್ಮಾನ್ ಖಾನ್ ಅಭಿನಯಿಸಿದ್ದರು.



Read more