ಈಗ ಬೆಳಗಾವಿ ಶಾಂತವಾಗಿದೆ, ಮತ್ತೆ ಬಂದ್ ಮಾಡಿ ಹಳೆ ವಿಚಾರ ಕೆದಕುವುದು ಬೇಡ – ಎಸ್.ಟಿ. ಸೋಮಶೇಖರ್
ಸೆಣಬಿನ ಬ್ಯಾಗುಗಳನ್ನು ಮಾಡುವ ವಿಜಯಪುರ ಎನ್.ಆರ್.ಎಲ್.ಎಂ.ನ ಯಶೋಧಾ ಸ್ವಸಹಾಯ ಗುಂಪು ಎಲ್ಲಕ್ಕಿಂತ ಹೆಚ್ಚು ರೂ. 1,26,900 ವ್ಯಾಪಾರ ನಡೆಸಿದೆ. ನಂತರದ ಸ್ಥಾನದಲ್ಲಿ, ಕಾಟನ್ ಬ್ಯಾಗುಗಳು ಮತ್ತು ಕ್ವಿಲ್ಟ್ ಗಳನ್ನು ಮಾಡುವ ಬೆಳಗಾವಿಯ ಮಾತಾ ಸಾವಿತ್ರಿ ಬಾಯಿ ಸ್ವಸಹಾಯ ಸಂಘ ರೂ 1,19,558, ವುಡ್ ಇನ್ ಲೇಗಳನ್ನು ಮಾಡುವ ಮೈಸೂರಿನ ಚಾಮುಂಡೇಶ್ವರಿ ಸ್ವಸಹಾಯ ಸಂಘ ರೂ 1,13,830, ಇಳಕಲ್ ಸೀರೆಗಳನ್ನು ಮಾಡುವ ಶ್ರೀ ರೇವಣ್ಣಸಿದ್ದೇಶ್ವರ ಸ್ವಸಹಾಯ ಸಂಘ ರೂ 1,00,026 ಹಾಗೂ ಆಭರಣ ಮತ್ತು ಪೇಟಿಂಗ್ ಗಳನ್ನು ಮಾಡುವ ಬೆಳಗಾವಿಯ ಜನವಾಣಿ ಮಾತಾ ಸ್ವಸಹಾಯ ಸಂಘವು ರೂ 87,420 ಮೊತ್ತದ ವ್ಯಾಪಾರಗಳನ್ನು ಮಾಡಿವೆ ಎಂದು ಸಚಿವರು ವಿವರಿಸಿದ್ದಾರೆ.
ರಾಜ್ಯ ಜೀವನೋಪಾಯ ಅಭಿಯಾನ (ನಗರ ಮತ್ತು ಗ್ರಾಮೀಣ), ಕೌಶಲಾಭಿವೃದ್ಧಿ- ಉದ್ಯಮಶೀಲತೆ – ಜೀವನೋಪಾಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಈ ಮೇಳವನ್ನು ನಡೆಸಲಾಗಿತ್ತು. ಬೇಕರಿ ಹಾಗೂ ಇತರೆ ಲಘು ತಿನಿಸುಗಳು, ಬಗೆಬಗೆಯ ಉಪ್ಪಿನಕಾಯಿಗಳು, ಹೈನು ತಿನಿಸುಗಳು, ಮಸಾಲೆ ಪದಾರ್ಥಗಳು, ಉಡುಪುಗಳು, ಸೀರೆಗಳು, ವಿವಿಧ ರೀತಿಯ ಹಾರಗಳು, ಚರ್ಮ ಹಾಗೂ ಕೂದಲು ಆರೈಕೆ ಉತ್ಪನ್ನಗಳು, ಸ್ಯಾನಿಟೇಷನ್ ಉತ್ಪನ್ನಗಳು ಸೇರಿದಂತೆ ಹಲವು ಉತ್ಪನ್ನಗಳು ಹಾಗೂ ಕೈಕುಸುರಿ ವಸ್ತುಗಳನ್ನು ಇಲ್ಲಿ ಪ್ರದರ್ಶಿಸುವ ಜೊತೆಗೆ ಮಾರಾಟಕ್ಕೆ ಇಡಲಾಗಿತ್ತು.