Karnataka news paper

ನ್ಯೂ ಇಯರ್ ರೆಸೆಲ್ಯೂಷನ್ ‘ಟೆನ್ಶನ್’..! ಪಾಲಿಸಲು ಸಾಧ್ಯವೇ ಇಲ್ಲದ ‘ಭೀಷ್ಮ ಪ್ರತಿಜ್ಞೆ’ಗಳು..!


ಹೊಸ ವರ್ಷ ಬರ್ತಿದೆ ಎಂದಾಕ್ಷಣ ಎಲ್ಲರೂ ಕೇಳುವ ಮಾತು ಒಂದೇ.. ಈ ವರ್ಷದ ರೆಸೆಲ್ಯೂಷನ್‌ ಏನು ನಿಂದು ಅಂತಾ ಪಟ್ಟು ಹಿಡಿದು ಕೇಳ್ತಾರೆ ಗೆಳೆಯರು.. ಇದೊಂಥರಾ ಕಾಲೇಜು, ಸ್ಕೂಲ್‌ನಲ್ಲಿ ವಿದಾಯದ ಹೊತ್ತಲ್ಲಿ ಬರೆದು ಕೊಡ್ತಿದ್ದ ಸ್ಲಾಮ್ ಬುಕ್ ನೆನಪಿಸುತ್ತೆ..! ಅಂದೆಂದೋ ಬರೆದುಕೊಟ್ಟ ಸ್ಲಾಮ್ ಬುಕ್ ಇವತ್ತು ಓದೋಕೆ ಸಿಕ್ಕರೆ ನಿಜಕ್ಕೂ ನಮಗೆ ನಾಚಿಕೆ ಆಗದೇ ಇರದು..! ಕೆಲವರಿಗಂತೂ ಮುಜುಗರ, ಇನ್ನೂ ಕೆಲವರಿಗೆ ಬರೆದಿದ್ದ ರೀತಿಯಲ್ಲೇ ಬದುಕಿ ತೋರಿಸಿದ ಖುಷಿ..! ಹೊಸ ವರ್ಷದ ರೆಸೆಲ್ಯೂಷನ್ನು ಕೂಡಾ ಒಂಥರಾ ಹಿಂಗೇನೇ..!

ಕೆಲವರು ಮದುವೆ ಆಗ್ತೀನಿ ಅಂತಾರೆ, ಮತ್ತೆ ಕೆಲವರು ಸಣ್ಣ ಆಗ್ತೀನಿ ಅಂತಾರೆ.. ಇನ್ನು ಮದುವೆ ಆದವರಿಗೆ ಮಕ್ಕಳ ಚಿಂತೆ..! ಒಂದಷ್ಟು ಜನ ಹೊಸ ವರ್ಷದ ಹಿಂದಿನ ದಿನ ಜಬರ್ದರ್ಸ್ ಎಣ್ಣೆ, ದಮ್ಮು ಹೊಡೆದು ಜನವರಿ 1 ರಿಂದ ಎಲ್ಲಾ ಬಿಟ್ಟುಬಿಡಬೇಕು ಅಂತಾ ಭೀಷ್ಮ ಪ್ರತಿಜ್ಞೆ ಮಾಡಿ ಮಾರನೇ ದಿನವೇ ಸೋಲು ಕಂಡಿರ್ತಾರೆ..!

ಒಂದೊಂದು ವೃತ್ತಿರಂಗದಲ್ಲೂ ಒಂದೊಂದು ಥರಾ New year resolution ಇರುತ್ತೆ.. ಡಾಕ್ಟರ್, ಎಂಜಿನಿಯರ್, ಟೀಚರ್, ವ್ಯಾಪಾರಿ, ಸರ್ಕಾರಿ ಅಧಿಕಾರಿ.. ಹೀಗೆ ಎಲ್ಲರೂ ತಮ್ಮ ತಮ್ಮ ಗೆಳೆಯರ ನಡುವೆ ಹೊಸ ವರ್ಷದ ಈ ಪ್ರತಿಜ್ಞೆ ಕುರಿತಾಗಿ ಮಾತಂತೂ ಆಡಿರ್ತಾರೆ.. ಇಂಥದ್ದೇ ಮಾತು ಪತ್ರಕರ್ತರ ನಡುವೆಯೂ ಆಗುತ್ತೆ.. ಆದ್ರೆ ಪತ್ರಕರ್ತರ ಪ್ರತಿಜ್ಞೆಗಳು ಒಂದಷ್ಟು ತಮಾಷೆಯಾಗಿ, ವಿಚಿತ್ರವಾಗಿ ಇರ್ತವೆ..!

ಮಾರ್ಗಸೂಚಿಯಂತೆ ವರ್ಷಾಚರಣೆಗೆ ಅಡ್ಡಿ ಇಲ್ಲ – ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸ್ಪಷ್ಟನೆ
ಕೆಲವು ಪತ್ರಕರ್ತರು ನಾನು ದಿನಕ್ಕೆ 8 ಗಂಟೆ ಅಷ್ಟೇ ಕೆಲಸ ಮಾಡೋಕೆ ತೀರ್ಮಾನ ಮಾಡ್ತೇನೆ ಅಂತಾ ಪ್ರತಿಜ್ಞೆ ಮಾಡಿ ತನ್ನನ್ನು ತಾನು ಮಹಾನ್ ಕೆಲಸಗಾರ ಅಂತಾ ಬಿಂಬಿಸಿಕೊಳ್ತಾರೆ..! ಇನ್ನು ಕೆಲವರು ನಾನು ಇನ್ಮುಂದೆ ಪ್ರತಿ ವಾರ ವೀಕ್‌ ಆಫ್‌ ತಗೋತೀನಿ ಅಂತಾ ಹೇಳುವ ಮೂಲಕ ತನಗೆ ವೃತ್ತಿಯ ಮೇಲಿರುವ ಭಯಂಕರ ಡೆಡಿಕೇಷನ್‌ ತೋರಿಸಿಕೊಳ್ತಾರೆ..! ಬಹುತೇಕರದ್ದು ಎಣ್ಣೆ, ಸಿಗರೇಟು ಬಿಡುವ ಶಪಥವೇ ಹೆಚ್ಚು..! ಆದ್ರೆ, ಇದು ಈಡೇರದ ಮಾತು ಅಂತಾ ಅವರಿಗೂ ಗೊತ್ತು..! ಇನ್ನೂ ಕೆಲವರಿಗೆ ಈ ವರ್ಷ ಮದುವೆ ಆಗೇ ಬಿಡ್ತೇನೆ ಎಂಬ ಉತ್ಸಾಹ.. ಆದ್ರೆ, ವರ್ಷದ ಕೊನೆಗೆ ಮತ್ತದೇ ರೆಸೆಲ್ಯೂಷನ್ ಹೊತ್ತು ಯಾವುದೇ ಮಂದ ಬೆಳಕಿನ ಜಾಗದಲ್ಲಿ ಚಿತ್ ಆಗಿ ಕೂರೋದೇ ಆಗಿರುತ್ತೆ..!

ಇನ್ನು ಲವರ್‌ಗಳ ಹೊಸ ವರ್ಷದ ರೆಸೆಲ್ಯೂಷನ್ ಭಾರೀ ಡಿಫ್ರೆಂಟ್..! ಈ ವರ್ಷ ನಾವು ಮದುವೆ ಆಗೋಣ, ಈ ವರ್ಷ ನಾವು ಜಗಳ ಆಡೋದು ಬೇಡ, ಈ ವರ್ಷ ನಮ್ಮ ನಡುವೆ ಮುನಿಸು ಬರಲೇ ಬಾರದು..! ನೀನು ಮಿಸ್ ಮಾಡದೆ ನನ್ನ ಫೋನ್ ರಿಸೀವ್ ಮಾಡಬೇಕು.. ಹೀಗೆ ಪರಸ್ಪರ ಷರತ್ತುಗಳ ಪಟ್ಟಿ ಬೆಳೆಯುತ್ತಲೇ ಇರುತ್ತೆ.. ಆದ್ರೆ, ಇದು ಕಂಡೀಷನ್ನೋ ರೆಸೆಲ್ಯೂಷನ್ನೋ ಅನ್ನೋದೇ ಡೌಟ್‌ ಆಗಿಬಿಡುತ್ತೆ..!

ಮಂಗಳವಾರದಿಂದ ನೈಟ್‌ ಕರ್ಫ್ಯೂ, ಯಾವುದಕ್ಕೆ ಅವಕಾಶ, ಯಾವುದಕ್ಕಿಲ್ಲ? ಇಲ್ಲಿದೆ ವಿವರ
ಗಂಡ – ಹೆಂಡ್ತಿ ನಡುವಣ ರೆಸೆಲ್ಯೂಷನ್‌ ಕೂಡಾ ಇದಕ್ಕಿಂತಾ ಭಿನ್ನವೇನಲ್ಲ.. ಈ ವರ್ಷ ಮಕ್ಕಳು ಮಾಡ್ಕೊಂಡು ಬಿಡೋಣ, ಜಗಳ ಆಡೋದು ಬೇಡ ಅಂತಾ ಇಬ್ಬರೂ ತೀರ್ಮಾನ ಮಾಡಿ ಕೊನೆಗೆ ಪಾಲನೆ ಮಾಡೋದ್ರಲ್ಲಿ ಸೋತು ಸೊರಗೋದು ಮಾಮೂಲು.. ಮನೆ ಕೆಲಸಕ್ಕೆ ನೀನು ಸಾಥ್ ಕೊಡು ಅಂತಾ ಹೆಂಡತಿ ಕೇಳಿದರೆ, ಅಷ್ಟೊಂದು ಓದಿದ್ದೀಯಾ ನೀನು ಕೆಲಸಕ್ಕೆ ಹೋಗು ಅಂತಾ ಗಂಡ ಸವಾಲಾಕ್ತಾನೆ..!

ಇವೆಲ್ಲದರ ನಡುವೆ ಕೊರೊನಾ ಬಂದು ವಕ್ಕರಿಸಿದೆ. ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಲು ನೈಟ್ ಕರ್ಫ್ಯೂ ಹೇರಿಕೆ ಮಾಡಿರೋದು ಓಕೆ.. ಆದ್ರೆ, ಇದೇ ಮಾರಿ ಇನ್ನಷ್ಟು ಹೆಚ್ಚಾದ್ರೆ ಡೇ ಕರ್ಫ್ಯೂ ಕೂಡಾ ಅನುಭವಿಸಬೇಕಲ್ಲಾ ಅನ್ನೋದೇ ಎಲ್ಲರ ಚಿಂತೆ..! ಹೀಗಾಗಿ, ಸರ್ವೇ ಜನೋ ಸುಖಿನೋ ಭವಂತು ಎಂಬ ಧ್ಯೇಯ ವಾಕ್ಯದೊಂದಿಗೆ ಈ ವರ್ಷ ಕೊರೊನಾ ಹರಡದಂತೆ ತಡೆಯಲು ವೈಯಕ್ತಿಕವಾಗಿ ನಾವೆಲ್ಲರೂ ಶ್ರಮಿಸೋಣ, ಎಲ್ಲಾ ರೀತಿಯ ಮುನ್ನೆಚ್ಚರಿಕೆ ಪಾಲಿಸೋಣ ಎಂಬ New year resolution ಹಾಕಿಕೊಳ್ಳಬೇಕಾದ್ದು, ಸದ್ಯದ ಅಗತ್ಯತೆ..

#Rewind 2021: ಈ ವರ್ಷ ಚಂದನವನ ಪ್ರವೇಶಿಸಿದ ಹೊಸ ನಟಿಯರು



Read more