Karnataka news paper

ಡಿಸ್ಟರ್ಬ್ ಮಾಡಬೇಡಿ ಎಂದು ಸೆಲ್ಫಿ ಪೋಸ್ಟ್ ಮಾಡಿದ ಸುಹಾನಾ ಖಾನ್


ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಸಕ್ರಿಯರಲ್ಲದಿದ್ದರೂ, ಅವರ ಬಗ್ಗೆ ಚರ್ಚೆಗಳು ಸದಾ ನಡೆಯುತ್ತಲೇ ಇರುತ್ತದೆ.

ಸುಹಾನಾ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಸೆಲ್ಫಿ ಫೋಟೊ ಪೋಸ್ಟ್ ಮಾಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಸೂರ್ಯನ ಕಿರಣಗಳು ಮುಖಕ್ಕೆ ಸೋಕಿರುವ ಫೋಟೊಗಳನ್ನು ಸುಹಾನಾ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ‘ಡಿಸ್ಟರ್ಬ್ ಮಾಡಬೇಡಿ‘ ಎಂದು ಅಡಿಬರಹ ನೀಡಿದ್ದಾರೆ.

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಡ್ರಗ್ಸ್ ಪಾರ್ಟಿ ಪ್ರಕರಣದ ಬಳಿಕ ಶಾರುಖ್ ಕುಟುಂಬ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ.

ನ್ಯೂಯಾರ್ಕ್‌ನಲ್ಲಿ ಸಿನಿಮಾ ಅಭಿನಯ ಮತ್ತು ಫ್ಯಾಷನ್ ತರಬೇತಿ ಪಡೆದುಕೊಂಡ ಬಳಿಕ ಸುಹಾನಾ ಮುಂಬೈಗೆ ಮರಳಿದ್ದು, ಕುಟುಂಬದ ಜತೆ ವಾಸವಿದ್ದಾರೆ. ವಾರಾಂತ್ಯದಲ್ಲಿ ಗೆಳೆಯರ ಜತೆ ಅವರು ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಾರೆ.





Read More…Source link