“ಡಿಜಿಟಲ್ ತಿಳುವಳಿಕೆಯುಳ್ಳ ನಗರ ಬಳಕೆದಾರರ ಒಂದು ಭಾಗ ಅಂತಿಮವಾಗಿ ವಾಟ್ಸಾಪ್ ಅನುಭವವನ್ನು ಆಯ್ಕೆ ಮಾಡುತ್ತದೆ ಎಂದು ನಮಗೆ ತಿಳಿದಿದೆ. ಆದರೆ ಗ್ರಾಮೀಣ, ಡಿಜಿಟಲ್ ಪೇಮೆಂಟ್‌ಗೆ ಇನ್ನೂ ಹೊಸದಾಗಿರುವ ಆ 30 ಕೋಟಿಗೂ ಹೆಚ್ಚು ಜನರ ಮೇಲೆ ಹೂಡಿಕೆ ಮಾಡಲು ನಮಗೆ ಸಾಕಷ್ಟು ಅವಕಾಶಗಳಿವೆ,” ಎಂದು ಭಾರತದ ವಾಟ್ಸಾಪ್ ಮುಖ್ಯಸ್ಥ ಅಭಿಜಿತ್ ಬೋಸ್ ಹೇಳಿದ್ದಾರೆ.
ಕಳೆದ ತಿಂಗಳು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ), ವಾಟ್ಸಾಪ್‌ಗೆ ತನ್ನ ಪಾವತಿ ಸೇವೆಯ ಬಳಕೆದಾರರ ಸಂಖ್ಯೆಯನ್ನು 4 ಕೋಟಿಗೆ ದ್ವಿಗುಣಗೊಳಿಸಲು ಅವಕಾಶ ಮಾಡಿಕೊಟ್ಟಿತು. ಆದರೆ ಭಾರತದಲ್ಲಿರುವ ಪಾಟ್ಸಾಪ್‌ನ 40 ಕೋಟಿಗೂ ಹೆಚ್ಚು ಬಳಕೆದಾರರಿಗೆ ಹೋಲಿಸಿದರೆ ಇದು ಹತ್ತನೇ ಒಂದು ಭಾಗ ಮಾತ್ರ.
“ಯುಪಿಐ ಅದ್ಭುತ ಯಶಸ್ಸನ್ನು ಕಂಡಿದೆ. ಆದರೆ ಯುಪಿಐ ಪಾವತಿ ಸ್ವೀಕರಿಸಲು ಮತ್ತು ಡಿಜಿಟಲ್ ಆರ್ಥಿಕತೆಗೆ ಪ್ರವೇಶಿಸಲು ಅವಕಾಶವನ್ನು ಹೊಂದಿರದ ಅನೇಕ ಜನರು ಇನ್ನೂ ಇದ್ದಾರೆ. ಆದ್ದರಿಂದ, ಆ ಸಂಖ್ಯೆ ಏನೇ ಇರಲಿ ಅವರಲ್ಲಿ ಹೆಚ್ಚಿನವರನ್ನು ಸೆಳೆಯುವ ಸಾಮರ್ಥ್ಯ ವಾಟ್ಸಾಪ್‌ಗೆ ಇದೆ,” ಎಂದು ಬೋಸ್ ಹೇಳಿದ್ದಾರೆ.
ವಾಟ್ಸಾಪ್ ನಿಯಂತ್ರಕರ ಮಿತಿಯ ಬಗ್ಗೆ ಚಿಂತಿಸುತ್ತಿಲ್ಲ. ನಗರ ಬಳಕೆದಾರರಿಗೆ ಮಾತ್ರವಲ್ಲದೆ ಗ್ರಾಮೀಣ ಭಾಗದವರಿಗೂ ಯುಪಿಐ ಬಳಸಲು ಸುಲಭವಾಗುವ ಹೊಸ ವೈಶಿಷ್ಟ್ಯಗಳನ್ನು ನೋಡಿದ ನಂತರ ಎನ್‌ಪಿಸಿಐ ತನ್ನ ಪಾವತಿ ವೈಶಿಷ್ಟ್ಯದ ಮಿತಿಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ.
“ನಾವು ಗಮನಾರ್ಹವಾದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೋಡಿದಾಗ, ನಾವು ನಿಯಂತ್ರಕರಿಗೆ ಅಂಕಿ-ಅಂಶಗಳನ್ನು ಪ್ರಸ್ತುತಪಡಿಸಿದ್ದೇವೆ, ನಂತರ ಮಿತಿ ಹೆಚ್ಚಾಯಿತು” ಎಂದು ಅವರು ತಿಳಿಸಿದ್ದಾರೆ.
“ನಾವು ಈ ಮಿತಿ ಬಗ್ಗೆ ಚಿಂತಿಸುವುದಿಲ್ಲ. ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ. ಆಶಾದಾಯಕ ಬೆಳವಣಿಗೆ ಎಂದರೆ ಡಿಜಿಟಲ್ ಪಾವತಿಗಳ ಬೆಳವಣಿಗೆ ಎಲ್ಲರಿಗೂ ತಿಳಿದಿದೆ. ಡಿಜಿಟಲ್ ಕಂಪನಿಗಳು ದೇಶಕ್ಕೆ ಒಳ್ಳೆಯದು. ನಾವು ಸಾಧ್ಯವಾದಷ್ಟು ಜನರನ್ನು ತಲುಪುವುದು ಪ್ರತಿಯೊಬ್ಬರಿಗೂ ಒಳ್ಳೆಯದು,” ಎನ್ನುತ್ತಾರೆ ಬೋಸ್.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್’ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.