
ಸಾಂದರ್ಭಿಕ ಚಿತ್ರ
ಬೆಂಗಳೂರು: ಹಿರಿಯ ನಾಗರಿಕರ ಡೇ ಕೇರ್ ಕೇಂದ್ರಗಳು ಕೊರೊನಾ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದವು. ಇದೀಗ ಅವುಗಳನ್ನು ಮತ್ತೆ ತೆರೆಯುವ ಕುರಿತು ಸರ್ಕಾರ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ವೀಲ್ ಚೇರ್ ಆಸರೆಯಲ್ಲಿದ್ದವರೂ ಬೀಚ್ ಸೌಂದರ್ಯ ಸವಿಯಬಹುದು: ಮರೀನಾ ಬೀಚಿನಲ್ಲಿ ವಿಕಲಾಂಗ ಸ್ನೇಹಿ ಮಾರ್ಗ ನಿರ್ಮಾಣ
ಈ ಬಗ್ಗೆ ಕಾರ್ಯಪ್ರವೃತ್ತವಾಗಿರುವ ಆರೋಗ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅನೇಕ ಜಿಲ್ಲೆಗಳಲ್ಲಿ ವಯೋವೃದ್ಧರ ಡೇ ಕೇರ್ ಸೆಂಟರುಗಳನ್ನು ಪುನರಾರಂಭಿಸುವಂತೆ ಹಿರಿಯ ನಾಗರಿಕರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹೆತ್ತವರೇ ತಿರಸ್ಕರಿಸಿದರೂ ಧೃತಿಗೆಡದ ಪಂಜಾಬ್ ಸಯಾಮಿಗಳು: ಇವರ ಶ್ರಮದ ಬದುಕು ಎಲ್ಲರಿಗೂ ಸ್ಫೂರ್ತಿ!
ಹಿರಿಯ ನಾಗರಿಕರ ಡೇ ಕೇರ್ ಸೆಂಟರುಗಳು ಮುಚ್ಚಲ್ಪಟ್ಟಿದ್ದರಿಂದ ಅನೇಕ ಹಿರಿಯರು ಅವರವರ ಮನೆಗಳಿಗೆ ತೆರಳಿದ್ದರು. ಕೆಲ ಮನೆಗಳಲ್ಲಿ ಮನೆಯವರು ಅವರನ್ನು ಚೆನ್ನಾಗಿ ನೋಡಿಕೊಂಡರೆ, ಇನ್ನು ಕೆಲ ಮನೆಗಳಲ್ಲಿ ಹಿರಿಯರಿಗೆ ಬೇಕಾದ ಆಹಾರ ಮತ್ತು ನಿರ್ವಹಣಾ ಸೌಲಭ್ಯ ಸಿಕ್ಕಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ದೇವರ ನಾಡಲ್ಲಿ ಗಜರಾಜನಿಗೆ ಪುನರ್ವಸತಿ ಕೇಂದ್ರ: ಆನೆಗಳಿಗೆ ಮಾರ್ನಿಂಗ್ ವಾಕ್ ಮತ್ತು ಉತ್ಕೃಷ್ಟ ಆಹಾರ