Karnataka news paper

ತಮಿಳು ನಟ ಸಿಂಬುಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು


ಚೆನ್ನೈ: ತಮಿಳು ನಟ ಸಿಂಬು ಅನಾರೋಗ್ಯದಿಂದ ಇಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಅವರಿಗೆ ವೈರಸ್‌ ಸೋಂಕು ತಗುಲಿದೆ ಎಂದು ವೈದ್ಯರು ಹೇಳಿದ್ದಾರೆ. ಆದಾಗ್ಯೂ ಅವರಿಗೆ ಕೋವಿಡ್‌ ಸೋಂಕು ತಗುಲಿಲ್ಲ ಎಂದು ದೃಢಪಡಿಸಿದ್ದಾರೆ. 

ಸಿಂಬು ಅವರ ಮ್ಯಾನೇಜರ್‌ ಕೂಡ ಕೋವಿಡ್‌ ಸೋಂಕು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತಂಕ ಪಡುವ ಅಗತ್ಯ ಇಲ್ಲ, ಎರಡು ದಿನಗಳಲ್ಲಿ ಅವರು ಗುಣಮುಖರಾಗಲಿದ್ದಾರೆ ಎಂದು ಶಿಂಬು ಆಪ್ತರು ತಿಳಿಸಿದ್ದಾರೆ. 

ಓದಿ: 

ಸಿಂಬು ನಟಿಸಿದ್ದ ಈಶ್ವರನ್‌ ಹಾಗೂ ಮಾನಾಡು ಸಿನಿಮಾಗಳು ಇತ್ತೀಚೆಗೆ ಬಿಡುಗಡೆಯಾದ ಸಿನಿಮಾಗಳಾಗಿವೆ. 

ಓದಿ:  



Read More…Source link