Online Desk
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್ ನ ಭಜರಂಗಿ2 ಸಿನಿಮಾ ಜೀ5 ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕುಟುಂಬಸಮೇತ ನೋಡಬಹುದಾದ ಭಜರಂಗಿ-2 ಸಿನಿಮಾಗೆ ಮೆಚ್ಚುಗೆಯೂ ಸಿಗುತ್ತಿದೆ. ಅಲ್ಲದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ‘ಕನ್ನಡಿಗ’ ಸಿನಿಮಾ ಕೂಡಾ ಜೀ5ನಲ್ಲಿ ಸೇರ್ಪಡೆಗೊಂಡಿದೆ. ಆ ಸಿನಿಮಾದಲ್ಲಿ ರವಿಚಂದ್ರನ್ ಅವರು ವಿಶೇಷ ಗೆಟಪ್ ನಲ್ಲಿ ಗಮನಸೆಳೆದಿದ್ದರು.
ಇದನ್ನೂ ಓದಿ: ಪುನೀತ್ ಅಭಿಮಾನಿಗಳಿಗೆ ಕನೆಕ್ಟ್ ಆಗುವ ಮನೋಜ್ಞ ಕ್ಲೈಮ್ಯಾಕ್ಸ್: ಭಜರಂಗಿ2 ಚಿತ್ರವಿಮರ್ಶೆ
ವಿಭಿನ್ನ ಚಿತ್ರಪ್ರಕಾರಗಳ ಸಿನಿಮಾ ತಯಾರಿಗೆ ಹೆಸರಾದ ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಹಾಗೂ ರಾಜ್ ಶೆಟ್ಟಿ ನಿರ್ದೇಶನ/ ನಟನೆಯಲ್ಲಿ ಮೂಡಿಬಂದಿದ್ದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಕೂಡಾ ಜೀ5 ಪಾಲಾಗಿದ್ದು, ಸದ್ಯದಲ್ಲಿಯೇ ಜೀ5 ಒಟಿಟಿ ಫ್ಲಾಟ್ ಫಾರಂನಲ್ಲಿ ಪ್ರದರ್ಶನಗೊಳ್ಳಲಿದೆ.
ಇದನ್ನೂ ಓದಿ: ‘ಹೆಡ್ ಬುಷ್’ ನಲ್ಲಿ ಪ್ರೊಫೆಸರ್ ಆಗಿ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ!
ಒಟಿಟಿ ಫ್ಲಾಟ್ ಫಾರ್ಮ್ ಗಳಲ್ಲಿ ಹೊಸ ಕನ್ನಡ ಸಿನಿಮಾಗಳ ಕೊರತೆ ಕಾಣುತ್ತಿದೆ ಎನ್ನುವ ದೂರು ಕೇಳಿಬರುತ್ತಿರುವ ಹೊತ್ತಿನಲ್ಲೇ ಜೀ5ನಲ್ಲಿ ಕನ್ನಡದ ಹೊಸ ಹಿಟ್ ಸಿನಿಮಾಗಳು ತೆರೆಕಾಣುತ್ತಿರುವುದು ವಿಶೇಷ.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಮುಂಡು ಧಾರಿ ನ್ಯಾಚುರಲ್ ನಾಯಕನ ಉದಯ: ಹೊಸ ಅಲೆಯ ಗರುಡ ಗಮನ ವೃಷಭ ವಾಹನ ಚಿತ್ರ ವಿಮರ್ಶೆ