Karnataka news paper

ಸುಸ್ತಿ ಸಾಲ ವಸೂಲಿಗೆ ‘ಬ್ಯಾಡ್‌ ಬ್ಯಾಂಕ್‌’ ಸ್ಥಾಪನೆ: ಜನವರಿ ಎರಡನೇ ವಾರದಲ್ಲಿ ಕಾರ್ಯಾರಂಭ


ಹೊಸ ದಿಲ್ಲಿ: ಬ್ಯಾಂಕ್‌ಗಳ ಸುಸ್ತಿ ಸಾಲ ವಸೂಲಿಗೆ ಕೇಂದ್ರ ಸರ್ಕಾರ ಸ್ಥಾಪನೆ ಮಾಡಲು ಉದ್ದೇಶಿಸಿರುವ ‘ಬ್ಯಾಡ್ ಬ್ಯಾಂಕ್‌ ‘ ಜನವರಿ ಎರಡನೇ ವಾರದಿಂದ ಕಾರ್ಯ ಆರಂಭ ಮಾಡಲಿದೆ. ಆ ಮೂಲಕ ಬ್ಯಾಂಕ್‌ಗಳಿಂದ ಸಾಲ ಪಡೆದು ಮರುಪಾವತಿ ಮಾಡದೇ ಇರುವ ಸಾಲವನ್ನು ವಸೂಲಿ ಮಾಡಲು ಕೇಂದ್ರ ಸರ್ಕಾರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.

ಸುಮಾರು 22 ಖಾತೆಗಳಲ್ಲಿ ಬ್ಯಾಂಕ್‌ಗಳು ನೀಡಿರುವ 82,000 ಕೋಟಿ ರೂಪಾಯಿ ಸಾಲವನ್ನು ಈ ಬ್ಯಾಡ್‌ ಬ್ಯಾಂಕ್‌ ಮೂಲಕ ವಸೂಲಿ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಇನ್ನು ಈ ಬ್ಯಾಂಕ್‌ನ, ಆಸ್ತಿ ನಿರ್ವಹಣೆ ಮಾಡಲು 50 ಉದ್ಯೋಗಿಗಳನ್ನು ನೇಮಕ ಮಾಡಲಾಗುತ್ತದೆ. ಇಂಡಿಯಾ ಡೆಟ್‌ ರೆಸೆಲ್ಯೂಷನ್‌ ಕಂಪನಿ ಈ ನಿಮಿತ್ತ ಕಾರ್ಯ ನಿರ್ವಹಿಸುತ್ತಿದ್ದು, ಬ್ಯಾಡ್ ಬ್ಯಾಂಕ್‌ನ ನಿಯಂತ್ರಣಾ ಚೌಕಟ್ಟುಗಳನ್ನು ಸದ್ಯದಲ್ಲೇ ಇದು ರೂಪಿಸಲಿದೆ.

ಕಾರ್ಡ್‌ಗಳ ಟೋಕನೈಸೇಷನ್‌ ಅವಧಿ ಜೂನ್‌ 2022ರ ವರೆಗೆ ವಿಸ್ತರಿಸಿದ ಆರ್‌ಬಿಐ
‘ಈಗಾಗಲೇ ಬ್ಯಾಂಕ್ ಸ್ಥಾಪನೆ ಮಾಡುವ ಹಾಗೂ ಮೂಲ ಸೌಕರ್ಯ ಕಲ್ಪಿಸುವ ಕೆಲಸದಲ್ಲಿ ನಾವು ತೊಡಗಿಕೊಂಡಿದ್ದಾರೆ. ಈ ಆರ್ಥಿಕ ವರ್ಷದೊಳಗಾಗಿ ಸಾಲ ವಸೂಲಿ ಮಾಡುವುದು ನಮ್ಮ ಉದ್ದೇಶ’ ಎಂದು ಈ ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯ ಪ್ರಕಿಯೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಈ ಬ್ಯಾಂಕ್‌ ಸ್ಥಾಪನೆಯಿಂದಾಗಿ, ಸುಸ್ತಿ ಸಾಲ ವಸೂಲಿ ಮಾಡುವ ಪ್ರಕ್ರಿಯೆ ಸುಲಭ ಆಗಲಿದೆ. ಮರುಪಾವತಿ ಆಗದ ಸಾಲ ವಸೂಲ ಮಾಡುವುದು ಈ ಬ್ಯಾಂಕ್‌ನ ಉದ್ದೇಶವಾಗಿರುವುದರಿಂದ ಈ ಬ್ಯಾಂಕ್ ಹೆಚ್ಚು ದಕ್ಷತೆ ಮತ್ತು ಪರಿಣತಿಯನ್ನು ಒಂದೇ ಸೂರಿನಡಿ ತರುತ್ತದೆ’ ಎಂದು ಫೆಡರಲ್ ಬ್ಯಾಂಕ್‌ನ ಸಿಎಎಫ್‌ಒ ಅಶುತೋಷ್‌ ಕಾಜಾರಿಯಾ ಹೇಳಿದ್ದಾರೆ.

ಸುಸ್ತಿ ಸಾಲ ವಸೂಲು ಮಾಡುವ ಉದ್ದೇಶದಿಮದ ಮೂರು ತಿಂಗಳ ಹಿಂದೆ ಕೇಂದ್ರ ಸರ್ಕಾರ ಇಂಡಿಯಾ ಡೆಟ್‌ ರೆಸೆಲ್ಯೂಷನ್‌ ಕಂಪನಿ (IDRCL), ಹಾಗೂ ನ್ಯಾಷನಲ್‌ ಅಸೆಟ್‌ ರೆಸ್ಯೆಲ್ಯೂಷನ್‌ ಕಂಪನಿ (NARCL)ಯನ್ನು ಸ್ಥಾಪನೆ ಮಾಡಲಾಗಿತ್ತು. ಸದ್ಯ ಇವೆರಡೂ ಕಂಪನಿಗಳು ಸುಸ್ತಿ ಸಾಲ ವಸೂಲಿಯಲ್ಲಿ ತೊಡಗಿಕೊಂಡಿವೆ. ಈಗ ಸ್ಥಾಪನೆ ಮಾಡಲಾಗುತ್ತಿರುವ ಬ್ಯಾಡ್‌ ಬ್ಯಾಂಕ್‌ ಅನ್ನು ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾ ನಿಯಂತ್ರಿಸಲಿದೆ.

ಸಾರ್ವಜನಿಕ ಬ್ಯಾಂಕುಗಳಲ್ಲಿ ಸರ್ಕಾರದ ಪಾಲನ್ನು ಶೇ.26ಕ್ಕೆ ಇಳಿಸಲು ಕೇಂದ್ರದ ಪ್ರಯತ್ನ!
ಸದ್ಯ ಎಎಂಸಿ (Annual Maintenance Contract) ಮೂಲಕ ಬ್ಯಾಂಕ್‌ಗಳು ಸುಸ್ತಿ ಸಾಲವನ್ನು ವಸೂಲು ಮಾಡುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ತಮ್ಮ ಸುಸ್ತಿ ಸಾಲ ವಸೂಲಿಗೆ ನ್ಯಾಷನಲ್‌ ಅಸೆಟ್‌ ರೆಸ್ಯೆಲ್ಯೂಷನ್‌ ಕಂಪನಿ (NARCL)ಯನ್ನು ಬಳಸುತ್ತಿದೆ. ಇನ್ನು ಮುಂದೆ ಬ್ಯಾಡ್‌ ಬ್ಯಾಂಕ್‌ಗಳ ಮೂಲಕ ಸುಸ್ತಿ ಸಾಲಗಳ ವಸೂಲಾತಿ ನಡೆಯಲಿದೆ.

‘ಇನ್ನು ಬ್ಯಾಡ್‌ ಬ್ಯಾಂಕ್‌ಗಳ ಮೂಲಕ ವಸೂಲಾದ ಸುಸ್ತಿ ಸಾಲದಿಂದ ಸಾಲ ಪುನಾರಚನೆ ಸಾಧ್ಯವಾಗಲಿದ್ದು, ಇದು ಹೂಡಿಕೆದಾರರ ಗಮನ ಸೆಳೆಯಲಿದೆ’ ಎಂದು ಎಸ್‌ಸಿ ಲೋವಿ ಇಂಡಿಯಾ ಕಂಪನಿಯ ವ್ಯವಹಾರ ಮುಖ್ಯಸ್ಥ ಅಂಕಿತ್ ಥಾಕೆರ್‌ ಅಭಿಪ್ರಾಯ ಪಟ್ಟಿದ್ದಾರೆ.

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್’ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.



Read more…