Karnataka news paper

ವರ್ಕ್ ಫ್ರಮ್ ಹೋಂ ಮಾಡುವಾಗ ಹಾಸಿಗೆಯಿಂದ ಬಿದ್ದ ವ್ಯಕ್ತಿ: ವಿಮಾ ಕಂಪನಿಗೆ ಕೋರ್ಟ್ ಹೇಳಿದ್ದೇನು?


Source : Online Desk

ಜರ್ಮನಿ: ವರ್ಕ್ ಫ್ರಮ್ ಮಾಡುತ್ತಿದ್ದಾಗ ಅಚಾನಕ್ಕಾಗಿ ಕೆಳಗೆ ಬಿದ್ದು ಬೆನ್ನು ಮೂಳೆ ಮುರಿದಕೊಂಡ ಉದ್ಯೋಗಿಯ ಬೆನ್ನಿಗೆ ಜರ್ಮನಿ ಕೋರ್ಟ್ ನಿಂತಿದೆ. ಅಲ್ಲದೆ ವಿಮಾ ಕಂಪನಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.

ಕೋರ್ಟ್ ಮಧ್ಯಪ್ರವೇಶಿಸಲು ಕಾರಣವೇನು?
ಜರ್ಮನಿಯಲ್ಲಿ ವರ್ಕ್ ಫ್ರಾಮ್ ಹೋಮ್ ಉದ್ಯೋಗಿಯೊಬ್ಬರು ಹಾಸಿಗೆಯಿಂದ ಎದ್ದು ಕಂಪ್ಯೂಟರ್ ಮೇಜಿನ ಬಳಿಗೆ ಹೋಗುವಾಗ ಜಾರಿ ಬಿದ್ದಿದ್ದರು. ಇದರಿಂದ ಉದ್ಯೋಗಿಯ ಬೆನ್ನುಹುರಿ ಮುರಿದಿತ್ತು. ಆದರೆ, ವಿಮಾ ಕಂಪನಿ ಪರಿಹಾರ ನೀಡಲು ನಿರಾಕರಿಸಿತ್ತು. ಉದ್ಯೋಗಿ ಕೆಲಸಕ್ಕೆ ಹೋಗುವಾಗ ಅಪಘಾತ ನಡೆದಿಲ್ಲ ಎಂದು ವಾದಿಸಿತ್ತು.

ವಿಮಾ ಕಂಪನಿಯ ನಿರ್ಧಾರದಿಂದ ಬೇಸತ್ತಿದ್ದ ಉದ್ಯೋಗಿ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು. ಆದರೆ ಜರ್ಮನಿಯ ಎರಡು ಕೆಳಹಂತದ ನ್ಯಾಯಾಲಯಗಳು ಉದ್ಯೋಗಿಯ ಹಕ್ಕನ್ನು ತಿರಸ್ಕರಿಸಿದ್ದವು. ಆದರೆ ಸಾಮಾಜಿಕ ಭದ್ರತಾ ವ್ಯವಹಾರಗಳ ಫೆಡರಲ್ ನ್ಯಾಯಾಲಯವು ಉದ್ಯೋಗಿಯ ಪರವಾಗಿ ತೀರ್ಪು ನೀಡಿದೆ.

ವರ್ಕ್ ಫ್ರಾಮ್ ವೇಳೆ ಹಾಸಿಗೆಯಿಂದ ಕೆಲಸಕ್ಕೆ ಹೋಗುವುದನ್ನು ವಿಮೆಯ ವ್ಯಾಪ್ತಿಯೊಳಗೆ ಬರಲಿದೆ ಅಂತಾ ಫೆಡರಲ್ ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಕೆಲಸದ ವೇಳೆ ನೌಕರ,  ಹಾಸಿಗೆಯಿಂದ ಉಪಾಹಾರ ಸೇವಿಸದೆ ಟೇಬಲ್ ಮೇಲಿದ್ದ ದ ಕಂಪ್ಯೂಟರ್ ಕಡೆಗೆ ಹೋಗುತ್ತಿದ್ದನು ಎಂದು ಹೇಳಿದ ನ್ಯಾಯಾಲಯ, ಈ ವೇಳೆ ಉದ್ಯೋಗಿ ಗಾಯಗೊಂಡಿದ್ದಾರೆ. ಆದ್ದರಿಂದ ವಿಮಾನ ಕಂಪನಿ ನೌಕನಿಗೆ ಪರಿಹಾರ ಪಾವತಿಸಬೇಕೆಂದು ತೀರ್ಪು ನೀಡಿತು.

ಜರ್ಮನ್ ಫೆಡರಲ್ ಕೋರ್ಟ್ ಉದ್ಯೋಗಿಯ ಪರವಾಗಿ ತೀರ್ಪು ನೀಡುವಾಗ, ಉದ್ಯೋಗಿ ಕೆಲಸ ಮಾಡುವ ಸ್ಥಳದಲ್ಲಿ ಟೆಲಿವರ್ಕಿಂಗ್ ಅನ್ನು ಸಹ ಕಚೇರಿಯ ಎಂದು ಪರಿಗಣಿಸಲಾಗುತ್ತದೆ. ಟೆಲಿವರ್ಕಿಂಗ್ ಅಂದರೆ ಮನೆಯಿಂದ ಕೆಲಸ ಮಾಡುವುದು ಕಂಪನಿಯಿಂದ ಪಡೆದ ಒಪ್ಪಿಗೆಯಾಗಿರುತ್ತದೆ. ಇಂತಹ ಅಪಘಾತದ ಸಂದರ್ಭದಲ್ಲಿ, ಉದ್ಯೋಗಿ ವಿಮಾ ಪ್ರಯೋಜನವನ್ನು ಪಡೆಯಬೇಕು ಎಂದು ಕೋರ್ಟ್ ತೀರ್ಪು ನೀಡಿ, ವಿಮಾ ಕಂಪನಿಯ ವಾದವನ್ನು ತಿರಸ್ಕರಿಸಿತು.



Read more